ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಕ್ರಿಕೆಟ್ ತಂಡದ ಕೊರೊನಾ ಟೆಸ್ಟ್‌ ನೆಗೆಟಿವ್: ಜಿಂಬಾಬ್ವೆ ವಿರುದ್ಧ ಟೂರ್ನಿ

Pakistan Cricket Squad Test Negative For Covid-19: Ahead Of Zimbabwe Series

ಜಿಂಬಾಬ್ವೆ ವಿರುದ್ಧದ ಸೀಮಿತ ಓವರ್‌ಗಳ ಸರಣಿಗಾಗಿ ಆಡಲಿರುವ ಪಾಕಿಸ್ತಾನ ಕ್ರಿಕೆಟ್ ತಂಡವು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯು ನೆಗೆಟಿವ್ ಆಗಿದೆ.

ಜಿಂಬಾಬ್ವೆ ಕ್ರಿಕೆಟ್ ತಂಡವು ತನ್ನ ಮುಖ್ಯ ತರಬೇತುದಾರ ಲಾಲ್‌ಚಂದ್ ರಜಪೂತ್ ಇಲ್ಲದೆ ಮುಂಬರುವ ಸರಣಿಗಾಗಿ ಪಾಕಿಸ್ತಾನಕ್ಕೆ ಆಗಮಿಸಿದೆ. ಜಿಂಬಾಬ್ವೆ ಮೂರು ಏಕದಿನ ಪಂದ್ಯಗಳು ಮತ್ತು ಟಿ -20 ಪಂದ್ಯಗಳಲ್ಲಿ ಪಾಕಿಸ್ತಾನವನ್ನು ಎದುರಿಸಲಿದೆ. ಅಕ್ಟೋಬರ್ 30 ರಿಂದ ಏಕದಿನ ಸರಣಿಯು ನಡೆಯಲಿದ್ದು, ನವೆಂಬರ್ 3 ರಂದು ಅಂತಿಮ ಪಂದ್ಯದೊಂದಿಗೆ ಮುಕ್ತಾಯಗೊಳ್ಳಲಿದೆ. ಎಲ್ಲಾ ಪಂದ್ಯಗಳನ್ನು ರಾವಲ್ಪಿಂಡಿಯಲ್ಲಿ ಆಡಲಾಗುವುದು.

 ಪಾಕಿಸ್ತಾನ ಪ್ರವಾಸದಿಂದ ಹೊರಬಿದ್ದ ಜಿಂಬಾಬ್ವೆ ಕ್ರಿಕೆಟ್ ತಂಡದ ಕೋಚ್, ಲಾಲ್‌ಚಂದ್ ರಜಪೂತ್ ಪಾಕಿಸ್ತಾನ ಪ್ರವಾಸದಿಂದ ಹೊರಬಿದ್ದ ಜಿಂಬಾಬ್ವೆ ಕ್ರಿಕೆಟ್ ತಂಡದ ಕೋಚ್, ಲಾಲ್‌ಚಂದ್ ರಜಪೂತ್

ಟಿ 20 ಐ ಸರಣಿಯು ನವೆಂಬರ್ 7 ರಂದು ಮೂರು ದಿನಗಳ ವಿರಾಮದ ನಂತರ ನಡೆಯಲಿದ್ದು, ಅಂತಿಮ ಪಂದ್ಯದೊಂದಿಗೆ 10 ರಂದು ಮುಕ್ತಾಯಗೊಳ್ಳಲಿದೆ. ಎಲ್ಲಾ ಪಂದ್ಯಗಳನ್ನು ಲಾಹೋರ್‌ನಲ್ಲಿ ಆಡಲು ನಿರ್ಧರಿಸಲಾಗಿದೆ.

ಪಾಕಿಸ್ತಾನವು ಟಿ20 ಮತ್ತು ಏಕದಿನ ಸರಣಿಯ ಸಂಭವನೀಯ ಹೆಸರನ್ನು ಪಟ್ಟಿ ಮಾಡಿದೆ. ಶಾದಾಬ್ ಖಾನ್ ಉಪನಾಯಕನಾಗಿರುತ್ತಾರೆ. ಯುವ ಪ್ರತಿಭೆಗಳಾದ ಮೂಸಾ ಖಾನ್, ಉಸ್ಮಾನ್ ಖಾದಿರ್ ಮತ್ತು ಜಾಫರ್ ಗೋಹರ್ ಕೂಡ ಸಂಭವನೀಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಆತಿಥೇಯರು ಸರಣಿಯ ಅಂತಿಮ ತಂಡವನ್ನು ಸರಿಯಾದ ಸಮಯದಲ್ಲಿ ಪ್ರಕಟಿಸುವ ನಿರೀಕ್ಷೆಯಿದೆ.

2009 ರಲ್ಲಿ ಶ್ರೀಲಂಕಾ ತಂಡದ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ ದೇಶಕ್ಕೆ ಭೇಟಿ ನೀಡಿದ ಮೊದಲ ಪೂರ್ಣ ಸದಸ್ಯರಾದ ಜಿಂಬಾಬ್ವೆ, 2015 ರ ನಂತರ ಮೊದಲ ಬಾರಿಗೆ ಪಾಕಿಸ್ತಾನ ಪ್ರವಾಸ ಕೈಗೊಳ್ಳಲಿದೆ.

ಪಾಕಿಸ್ತಾನ ಸಂಭವನೀಯ ತಂಡ: ಬಾಬರ್ ಅಜಮ್ (ನಾಯಕ), ಶಾದಾಬ್ ಖಾನ್ (ಉಪನಾಯಕ), ಅಬ್ದುಲ್ಲಾ ಶಫೀಕ್, ಅಬಿದ್ ಅಲಿ, ಫಹೀಮ್ ಅಶ್ರಫ್, ಫಖರ್ ಜಮಾನ್, ಹೈದರ್ ಅಲಿ, ಹರಿಸ್ ರವೂಫ್, ಹರಿಸ್ ಸೊಹೈಲ್, ಇಫ್ತಿಕಾರ್ ಅಹ್ಮದ್, ಇಮದ್ ವಾಸಿಮ್, ಇಮಾಮ್-ಉಲ್-ಹಕ್, ಖುಷ್ದಿಲ್ ಷಾ, ಮೊಹಮ್ಮದ್ ಹಫೀಜ್, ಮೊಹಮ್ಮದ್ ಹಸ್ನೈನ್, ಮೊಹಮ್ಮದ್ ರಿಜ್ವಾನ್, ಮೂಸಾ ಖಾನ್, ರೋಹೈಲ್ ನಜೀರ್, ಶಾಹೀನ್ ಶಾ ಅಫ್ರಿದಿ, ಉಸ್ಮಾನ್ ಖಾದಿರ್, ವಹಾಬ್ ರಿಯಾಜ್ ಮತ್ತು ಜಾಫರ್ ಗೋಹರ್

Story first published: Thursday, October 22, 2020, 17:30 [IST]
Other articles published on Oct 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X