ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ ಪಾಕಿಸ್ತಾನ ಆಟಗಾರ ಅಝರ್ ಅಲಿ

Pakistan cricketer Azhar Ali announces retirement from ODI

ಕರಾಚಿ, ನವೆಂಬರ್ 1: ಪಾಕಿಸ್ತಾನ ಕ್ರಿಕೆಟ್ ತಂಡದ ಅನುಭವಿ ಆಟಗಾರ ಅಝರ್ ಅಲಿ ಅವರು ಗುರುವಾರ (ನವೆಂಬರ್ 1) ಏಕದಿನ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ ಟೆಸ್ಟ್ ಕ್ರಿಕೆಟ್ ಕಡೆ ತಾನು ಗಮನ ಹರಿಸುವುದಾಗಿ ಅಝರ್ ಹೇಳಿಕೊಂಡಿದ್ದಾರೆ.

ಮೆನುವಿನಿಂದ ಬೀಫ್ ತೆಗೆಯಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿಮೆನುವಿನಿಂದ ಬೀಫ್ ತೆಗೆಯಲು ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಬಿಸಿಸಿಐ ಮನವಿ

33ರ ಹರೆಯದ ಅಝರ್, ತಾನು ಟೆಸ್ಟ್ ಕ್ರಿಕೆಟ್ ನತ್ತ ಗಮನ ಹರಿಸುವ ಸಲುವಾಗಿ ಏಕದಿನಕ್ಕೆ ವಿದಾಯ ಹೇಳುವ ನಿರ್ಧಾರಕ್ಕೆ ಬಂದೆ. ಅಲ್ಲದೆ ಏಕದಿನದಿಂದ ದೂರ ಸರಿಯಲು ಇದು ಸಕಾಲ ಅಂತ ನನಗನ್ನಿಸಿತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ನನ್ನ ನಿರ್ಧಾರ ಘೋಷಿಸುತ್ತಿರುವುದರ ಬಗ್ಗೆ ನಾನು ತಂಡದ ಆಯ್ಕೆ ಸಮಿತಿಯವರು, ನಾಯಕ, ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಗೆ ತಿಳಿಸಿದ್ದೇನೆ. ಸಾಕಷ್ಟು ಯೋಚಿಸಿದ ಬಳಿಕವೂ ನಾನೀ ನಿರ್ಧವನ್ನು ತಾಳಿದ್ದೇನೆ' ಎಂದು ಲಾಹೋರ್ ನಲ್ಲಿ ಮಾತಿಗೆ ಸಿಕ್ಕ ಅಝರ್ ಸುದ್ದಿಗಾರರಲ್ಲಿ ಹೇಳಿದರು.

ಕನ್ನಡ ರಾಜ್ಯೋತ್ಸವ, ಕನ್ನಡಿಗ ದ್ರಾವಿಡ್‌ಗೆ ಐಸಿಸಿ 'ಹಾಲ್‌ ಆಫ್‌ ಫೇಮ್' ಗೌರವ!ಕನ್ನಡ ರಾಜ್ಯೋತ್ಸವ, ಕನ್ನಡಿಗ ದ್ರಾವಿಡ್‌ಗೆ ಐಸಿಸಿ 'ಹಾಲ್‌ ಆಫ್‌ ಫೇಮ್' ಗೌರವ!

ಈ ವರ್ಷಾರಂಭದಲ್ಲಿ ಅಂದರೆ ಜನವರಿಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಅಲಿ ಕಡೆಯಬಾರಿಗೆ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಆಡಿದ್ದರು. ಒಟ್ಟು 53 ಏಕದಿನ ಪಂದ್ಯಗಳನ್ನಾಡಿರುವ ಅಝರ್, 36.90ರ ಸರಾಸರಿಯಲ್ಲಿ 74.45 ಸ್ಟ್ರೈಕ್ ರೇಟ್ ನೊಂದಿಗೆ 1,845 ರನ್ ಸಾಧನೆ ಹೊಂದಿದ್ದಾರೆ.

Story first published: Thursday, November 1, 2018, 22:07 [IST]
Other articles published on Nov 1, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X