ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಸ್ಫೋಟಕ ಬ್ಯಾಟ್ಸ್‌ಮನ್ ಶಾಹಿದ್ ಅಫ್ರಿಗೆ ಕೊರೊನಾ ಸೋಂಕು!

Pakistan cricketer Shahid Afridi tests positive for Coronavirus

ಲಾಹೋರ್, ಜೂನ್ 13: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಗೆ ಕೊರೊನಾವೈರಸ್ ಸೋಂಕು ತಗುಲಿದೆ. ಈ ವಿಚಾರವನ್ನು ಸ್ವತಃ ಅಫ್ರಿದಿ ಶನಿವಾರ (ಜೂನ್ 13) ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದಾರೆ. ತಾನು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸಿ ಎಂದು ಅಫ್ರಿದಿ ಕೋರಿಕೊಂಡಿದ್ದಾರೆ.

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ಸ್ಟೇಡಿಯಂಗಳನಲ್ಲಿ ಸೀಮಿತ ಜನಸಂದಣಿಗೆ ಅವಕಾಶ?!ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ಸ್ಟೇಡಿಯಂಗಳನಲ್ಲಿ ಸೀಮಿತ ಜನಸಂದಣಿಗೆ ಅವಕಾಶ?!

ಟ್ವೀಟ್ ಮಾಡಿರುವ ಮಾಜಿ ಆಲ್ ರೌಂಡರ್ ಅಫ್ರಿದಿ, 'ಗುರುವಾರದಿಂದಲೂ ನನ್ನ ಆರೋಗ್ಯ ಸರಿಯಿಲ್ಲ. ನನ್ನ ದೇಹವು ಕೆಟ್ಟದಾಗಿ ನೋವು ಅನುಭವಿಸುತ್ತಿತ್ತು. ನಾನು ಪರೀಕ್ಷೆಗೊಳಗಾದೆ. ದುರದೃಷ್ಟವಾಗಿ ನನಗೆ ಕೊರೊನಾವೈರಸ್ ಪಾಸಿಟಿವ್ ಬಂದಿದೆ. ಶೀಘ್ರ ಗುಣಮುಖನಾಗಲು ನೀವು ಪ್ರಾರ್ಥಿಸಬೇಕಿದೆ, ಇನ್‌ಶ ಅಲ್ಲಾ' ಎಂದು ಬರೆದುಕೊಂಡಿದ್ದಾರೆ.

ನಿಸ್ವಾರ್ಥ ಸೇವೆಗಾಗಿ ಬೆಂಗಳೂರಿನ ವಿದ್ಯಾರ್ಥಿಯನ್ನು ಹೊಗಳಿದ ಡೇವಿಡ್ ವಾರ್ನರ್ನಿಸ್ವಾರ್ಥ ಸೇವೆಗಾಗಿ ಬೆಂಗಳೂರಿನ ವಿದ್ಯಾರ್ಥಿಯನ್ನು ಹೊಗಳಿದ ಡೇವಿಡ್ ವಾರ್ನರ್

ಮೇ ತಿಂಗಳಲ್ಲಿ ಶಾಹಿದ್ ಅಫ್ರಿದಿ ಹರಾಜಿನ ಮೂಲಕ ಬಾಂಗ್ಲಾದೇಶ ಕ್ರಿಕೆಟಿಗ ಮುಷ್ಫಿಕರ್ ರಹೀಮ್ ಅವರಿಂದ ಕ್ರಿಕೆಟ್ ಬ್ಯಾಟ್ ಖರೀದಿಸಿದ್ದರು. ಬಾಂಗ್ಲಾದಲ್ಲಿ ಕೊರೊನಾ ಸೋಂಕಿಗೆ ಪರಿಹಾರಾರ್ಥವಾಗಿ ರಹೀಮ್ ಕ್ರಿಕೆಟ್ ಬ್ಯಾಟನ್ನು ಹರಾಜಿಗಿಟ್ಟಿದ್ದರು. ಈಗ ಸ್ವತಃ ಅಫ್ರಿದಿಯೇ ಸೋಂಕಿಗೆ ತುತ್ತಾಗಿದ್ದಾರೆ.

ಕೊರೊನಾ ವೈರಸ್: ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ಪ್ರವಾಸ ರದ್ದುಕೊರೊನಾ ವೈರಸ್: ಶ್ರೀಲಂಕಾ ಬಳಿಕ ಭಾರತದ ಮತ್ತೊಂದು ಪ್ರವಾಸ ರದ್ದು

ಕೊರೊನಾ ಸೋಂಕಿಗೆ ಈಡಾಗಿರುವ ಮೂರನೇ ಪಾಕ್ ಕ್ರಿಕೆಟಿಗನಾಗಿ ಮತ್ತು ಎರಡನೇ ಅಂತಾರಾಷ್ಟ್ರೀಯ ಕ್ರಿಕೆಟಿಗನಾಗಿ ಅಫ್ರಿದಿ ಗುರುತಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಪಾಕ್ ಮಾಜಿ ಆಟಗಾರ ತೌಫಿಕ್ ಉಮರ್ ಕೋವಿಡ್ 19ಗೆ ತುತ್ತಾಗಿದ್ದರು. ಈಗವರು ಚೇತರಿಸಿಕೊಂಡಿದ್ದಾರೆ. ಇನ್ನು ಮಾಜಿ ಪ್ರಥಮದರ್ಜೆ ಕ್ರಿಕೆಟರ್ ಜಾಫರ್ ಸರ್ಫರಾಜ್‌ಗೂ ಕೊರೊನಾ ತಾಗಿತ್ತು.

Story first published: Saturday, June 13, 2020, 16:02 [IST]
Other articles published on Jun 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X