ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರವಾಸ ಸರಣಿ: ಇಂಗ್ಲೆಂಡ್ ತಲುಪಿದ ಪಾಕಿಸ್ತಾನ ಕ್ರಿಕೆಟ್ ತಂಡ

Pakistan cricketers reach England for series

ಮ್ಯಾನ್ಚೆಸ್ಟರ್, ಜೂನ್ 29: ಪ್ರವಾಸ ಸರಣಿಗಾಗಿ 31 ಮಂದಿಯನ್ನೊಳಗೊಂಡ ಪಾಕಿಸ್ತಾನ ಕ್ರಿಕೆಟ್ ತಂಡ ಭಾನುವಾರ (ಜೂನ್ 28) ಇಂಗ್ಲೆಂಡ್‌ಗೆ ತಲುಪಿದೆ. ಇಂಗ್ಲೆಂಡ್‌-ಪಾಕಿಸ್ತಾನ ಸರಣಿಯು ಅಸಲಿಗೆ 3 ಟೆಸ್ಟ್ ಪಂದ್ಯಗಳು ಮತ್ತು 3 ಟಿ20ಐ ಪಂದ್ಯಗಳನ್ನು ಒಳಗೊಂಡಿತ್ತು. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಸದ್ಯಕ್ಕೆ ಟಿ20ಐ ಸರಣಿಯ ವೇಳಾಪಟ್ಟಿ ಮಾತ್ರ ಪ್ರಕಟಗೊಂಡಿದೆ.

ಭಾರತೀಯರೇಕೆ ಚತುರ ಬ್ಯಾಟ್ಸ್‌ಮನ್‌ಗಳು?!: ಅಥರ್ಟನ್ ಸ್ವಾರಸ್ಯಕರ ವಿವರಣೆಭಾರತೀಯರೇಕೆ ಚತುರ ಬ್ಯಾಟ್ಸ್‌ಮನ್‌ಗಳು?!: ಅಥರ್ಟನ್ ಸ್ವಾರಸ್ಯಕರ ವಿವರಣೆ

ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಕೊರೊನಾವೈರಸ್ ಪರೀಕ್ಷೆಯ ವೇಳೆ ಪಾಸಿಟಿವ್ ಎಂದು ಕಂಡು ಬಂದಿದ್ದ 10 ಆಟಗಾರರಲ್ಲಿ 6 ಮಂದಿಯ ಫಲಿತಾಂಶ ಎರಡನೇ ಬಾರಿಯ ಪರೀಕ್ಷೆಯ ವೇಳೆ ನೆಗೆಟಿವ್ ಬಂದಿತ್ತು. ಆದರೂ ಈ 10 ಆಟಗಾರರನ್ನು ಮೊದಲ ಬ್ಯಾಚ್‌ನಲ್ಲಿ ಕಳುಹಿಸಲಾಗಿಲ್ಲ. ಎರಡನೇ ಬಾರಿ ನೆಗೆಟಿವ್ ಎಂದು ಬಂದಿರುವ ಉಳಿದ ಎಲ್ಲಾ ಆಟಗಾರರು ಎರಡನೇ ಬ್ಯಾಚ್‌ ಮೂಲಕ ಇಂಗ್ಲೆಂಡ್‌ಗೆ ಹೋಗಲಿದ್ದಾರೆ.

ಧೋನಿಯ ಈ 5 ನಿರ್ಧಾರಗಳು ಎಲ್ಲರನ್ನೂ ದಂಗುಬಡಿಸಿತ್ತು, ಆದರೆ ಭಾರತವನ್ನು ಗೆಲ್ಲಿಸಿತ್ತು!ಧೋನಿಯ ಈ 5 ನಿರ್ಧಾರಗಳು ಎಲ್ಲರನ್ನೂ ದಂಗುಬಡಿಸಿತ್ತು, ಆದರೆ ಭಾರತವನ್ನು ಗೆಲ್ಲಿಸಿತ್ತು!

ಲಾಹೋರ್‌ನಿಂದ ಇಂಗ್ಲೆಂಡ್‌ಗೆ ಪ್ರವಾಸ ಬೆಳೆಸಿದ್ದ ಈ ತಂಡದಲ್ಲಿ 11 ಮಂದಿ ಸಿಬ್ಬಂದಿಯಿದ್ದರು. ಇಂಗ್ಲೆಂಡ್ ತಲುಪಿರುವ ಪಾಕ್‌ ತಂಡ ವೋರ್ಸೆಸ್ಟರ್‌ನಲ್ಲಿ 14 ದಿನಗಳ ಕಡ್ಡಾಯ ಕ್ವಾರಂಟೈನ್ ಪಾಲಿಸಲಿದೆ. ಆ ಬಳಿಕ ಆಟಗಾರರನ್ನು ವೋರ್ಸೆಸ್ಟರ್ಶೈರ್ ಮೈದಾನಕ್ಕೆ ರವಾನಿಸಲಾಗುತ್ತದೆ.

ಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆಟೀಮ್ ಇಂಡಿಯಾಗೆ ಹೊಸ ಕಿಟ್ ಪ್ರಾಯೋಜಕತ್ವ? : ನೈಕಿ ಜೊತೆಗಿನ ಒಪ್ಪಂದ ಅಂತ್ಯ ಸಾಧ್ಯತೆ

ಇಂಗ್ಲೆಂಡ್‌ನಲ್ಲಿ ಬಂದಿಳಿಯುವಾಗ ಪಾಕಿಸ್ತಾನ ಆಟಗಾರರು ಮಾಸ್ಕ್ ಧರಿಸಿದ್ದು, ಒಬ್ಬರಿಂದ ಒಬ್ಬರು ಅಂತರ ಕಾಯ್ದುಕೊಂಡಿದ್ದು ಕಾಣಸಿಕ್ಕಿತು. ಮೂರು ಪಂದ್ಯಗಳ ಟಿ20ಐ ಸರಣಿ ಆಗಸ್ಟ್ 29ರಿಂದ ಆರಂಭಗೊಳ್ಳಲಿದೆ. ಮೊದಲ ಪಂದ್ಯ ಲೀಡ್ಸ್‌ನ ಹೆಡಿಂಗ್ಲಿಯಲ್ಲಿ ನಡೆಯಲಿದೆ.

Story first published: Monday, June 29, 2020, 8:41 [IST]
Other articles published on Jun 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X