ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೆಎಲ್ ರಾಹುಲ್ ಬೆಳವಣಿಗೆಯ ಶ್ರೇಯಸ್ಸು ಈ ಆರ್‌ಸಿಬಿ ಸ್ಟಾರ್‌ಗೆ ಸಲ್ಲಬೇಕು ಎಂದ ಶೋಯೆಬ್ ಅಖ್ತರ್

Pakistan former cricketer Shoaib Akhtar credits Virat Kohli on KL Rahul rise

ಟೀಮ್ ಇಂಡಿಯಾ ಆಟಗಾರ ಕೆಎಲ್ ರಾಹುಲ್ ತಮ್ಮ ಅದ್ಭುತ ಫಾರ್ಮ್‌ಅನ್ನು ಮುಂದುವರಿಸಿದ್ದಾರೆ. ಐಪಿಎಲ್‌ನಲ್ಲಿ ಈ ಬಾರಿಯ ಆವೃತ್ತಿಯಲ್ಲಿಯೂ ಬ್ಯಾಟಿಂಗ್‌ನಲ್ಲಿ ಅಮೋಘ ಪ್ರದರ್ಶನ ನೀಡಿರುವ ಕೆಎಲ್ ರಾಹುಲ್ ತಮ್ಮ ತಂಡವನ್ನು ಪ್ಲೇಆಫ್‌ಗೆ ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಐಪಿಎಲ್‌ನಲ್ಲಿ ಹಾಗೂ ಟೀಮ್ ಇಂಡಿಯಾದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿರುವ ಕೆಎಲ್ ರಾಹುಲ್ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಪ್ರತಿಕ್ರಿಯಿಸಿದ್ದಾರೆ.

ಕೆಎಲ್ ರಾಹುಲ್ ಅದ್ಭುತ ಪ್ರದರ್ಶನ ನೀಡಲು ಅವರ ಬೆಳವಣಿಗೆಯಲ್ಲಿ ಆರ್‌ಸಿಬಿ ತಂಡದ ಸ್ಟಾರ್ ಆಟಗಾರನ ಪಾತ್ರವನ್ನು ಶೋಯೆಬ್ ಅಖ್ತರ್ ಉಲ್ಲೇಖಿಸಿದ್ದಾರೆ. ಕೆಎಲ್ ರಾಹುಲ್ ಬೆಳವಣಿಗೆಯ ಶ್ರೇಯಸ್ಸು ಈ ಆಟಗಾರನಿಗೆ ಸಲ್ಲಬೇಕು ಎಂದಿದ್ದಾರೆ ಶೋಯೆಬ್ ಅಖ್ತರ್.

IPL 2022: ಈ ಐವರು ಆಟಗಾರರು ಮುಂದಿನ ಐಪಿಎಲ್‌ ಸೀಸನ್ ಆಡುವುದು ಡೌಟ್IPL 2022: ಈ ಐವರು ಆಟಗಾರರು ಮುಂದಿನ ಐಪಿಎಲ್‌ ಸೀಸನ್ ಆಡುವುದು ಡೌಟ್

ಹಾಗಾದರೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೇಳಿದ ಆ ಆಟಗಾರ ಯಾರು? ಯಾವ ಕಾರಣಕ್ಕೆ ಅಖ್ತರ್ ಈ ಮಾತು ಉಲ್ಲೇಖಿಸಿದ್ದಾರೆ ಮುಂದೆ ಓದಿ..

ಕೆಎಲ್ ಬೆಳವಣಿಗೆಯ ಹಿಂದೆ ಇದ್ದಾರೆ ಕೊಹ್ಲಿ

ಕೆಎಲ್ ಬೆಳವಣಿಗೆಯ ಹಿಂದೆ ಇದ್ದಾರೆ ಕೊಹ್ಲಿ

ಕೆಎಲ್ ರಾಹುಲ್ ಆಟಗಾರನಾಗಿ ಬೆಳೆಯಲು ಟೀಮ್ ಇಂಡಿಯಾದ ಹಾಗೂ ಆರ್‌ಸಿಬಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಪಾತ್ರವ ಮಹತ್ವದ್ದಾಗಿದೆ ಎಂದಿದ್ದಾರೆ ಶೋಯೆಬ್ ಅಖ್ತರ್. ರಾಹುಲ್ ಬ್ಯಾಟಿಂಗ್‌ನಲ್ಲಿನ ಬೆಳವಣಿಗೆಗೆ ಕೊಹ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ಅವರು ನೀಡಿದ ಅವಕಾಶದ ಕಾರಣದಿಂದಾಗಿಯೇ ಕೆಎಲ್ ರಾಹುಲ್ ಇಂದು ಮ್ಯಾಚ್ ವಿನ್ನರ್ ಆಗಿ ರೂಪುಗೊಂಡಿದ್ದಾರೆ ಎಂದು ಶೋಯೆಬ್ ಅಖ್ತರ್ ಹೇಳಿದ್ದಾರೆ. ಕೆಎಲ್ ರಾಹುಲ್‌ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುವ ಅವಕಾಶ ನೀಡುವ ಮೂಲಕ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗುವಂತೆ ಮಾಡಿದರು ಎಂದಿದ್ದಾರೆ ಶೋಯೆಬ್ ಅಖ್ತರ್.

ಲಕ್ನೋ ಆಟಗಾರನಾಗಿ ಹಾಗೂ ನಾಯಕನಾಗಿ ಮಿಂಚುತ್ತಿರುವ ರಾಹುಲ್

ಲಕ್ನೋ ಆಟಗಾರನಾಗಿ ಹಾಗೂ ನಾಯಕನಾಗಿ ಮಿಂಚುತ್ತಿರುವ ರಾಹುಲ್

ಇನ್ನು ಓ ಬಾರಿಯ ಐಪಿಎಲ್ ಆವೃತ್ತಿಯಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಅದ್ಭುತವಾಗಿ ಮುನ್ನಡೆಸುತ್ತಿದ್ದಾರೆ. ಅಲ್ಲದೆ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯುತ್ತಿರುವ ರಾಹುಲ್ ಆಡುರುವ 14 ಪಂದ್ಯಗಳಲ್ಲಿ 537 ರನ್‌ಗಳನ್ನು ಬಾರಿಸಿದ್ದಾರೆ. ಬುಧವಾರ ಕೊಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ಬುಧವಾರ ನಡೆಯುವ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎಲ್‌ಎಸ್‌ಜಿ ಎಲಿಮಿನೇಟರ್ ಪಂದ್ಯದಲ್ಲಿ ಎದುರಿಸಲಿದೆ.

ಎರಡು ಹೊಸ ತಂಡಗಳ ಪ್ರದರ್ಶನವನ್ನು ಕೊಂಡಾಡಿದ ಅಖ್ತರ್

ಎರಡು ಹೊಸ ತಂಡಗಳ ಪ್ರದರ್ಶನವನ್ನು ಕೊಂಡಾಡಿದ ಅಖ್ತರ್

ಇನ್ನು ಈ ಸಂದರ್ಭದಲ್ಲಿ ಈ ಬಾರಿಯ ಐಪಿಎಲ್‌ನಲ್ಲಿ ಹೊಸದಾಗಿ ಸೇರ್ಪಡೆಯಾಗಿರುವ ಎರಡು ಹೊಸ ತಮಡಗಳು ನೀಡುತ್ತಿರುವ ಪ್ರದರ್ಶನವನ್ನು ಶೋಯೆಬ್ ಅಖ್ತರ್ ಕೊಂಡಾಡಿದ್ದಾರೆ. "ಎರಡು ಹೊಸ ತಮಡಗಳಾದ ಲಕ್ನೋ ಹಾಗೂ ಗುಜರಾತ್ ತಾವು ಅದ್ಭುತ ಪ್ರದರ್ಶನ ನೀಡುತ್ತಿರುವುದನ್ನು ಸಾಬೀತುಪಡಿಸಿದೆ. ಈ ಪಂದ್ಯದಲ್ಲಿ ನನ್ನ ಬೆಂಬಲ ಕೆಎಲ್ ರಾಹುಲ್‌ಗೆ. ಪಂದ್ಯವನ್ನು ತಮ್ಮ ನಿಯಂತ್ರಣಕ್ಕೆ ಪಡೆಯುವ ಮೂಲಕ ರಾಹುಲ್ ಪ್ರೇಕ್ಷಕರ ಮನ ಗೆಲ್ಲಲಿದ್ದಾರೆಯೇ ಎಂಬುದನ್ನು ಕಾದು ನೋಡೋಣ" ಎಂದಿದ್ದಾರೆ ಶೋಯೆಬ್ ಅಖ್ತರ್.

ಕುತೂಹಲ ಘಟ್ಟ ತಲುಪಿದ ಐಪಿಎಲ್

ಕುತೂಹಲ ಘಟ್ಟ ತಲುಪಿದ ಐಪಿಎಲ್

ಇನ್ನು ಈ ಬಾರಿಯ ಐಪಿಎಲ್ ಟೂರ್ನಿ ಕುತೂಹಲಕಾರಿ ಘಟ್ಟವನ್ನು ತಲುಪಿದೆ. ಪ್ಲೇಆಪ್‌ನ ಪಂದ್ಯಗಳ ಪೈಕಿ ಮೊದಲ ಕ್ವಾಲಿಫೈಯರ್ ಪಂದ್ಯ ಮುಕ್ತಾಯವಾಗಿದ್ದು ಗುಜರಾತ್ ಟೈಟನ್ಸ್ ರಾಜಸ್ಥಾನ್ ರಾಯಲ್ಸ್ ವಿರುದ್ಧ ಗೆದ್ದು ಫೈನಲ್‌ಗೆ ಪ್ರವೇಶ ಪಡೆದುಕೊಂಡಿದೆ. ಬುಧವಾರ ಆರ್‌ಸಿಬಿ ಹಾಗೂ ಎಲ್‌ಎಸ್‌ಜಿ ವಿರುದ್ಧ ಎಲಿಮಿನೇಟರ್ ಪಂದ್ಯ ನಡೆಯಲಿದ್ದು ಇದರಲ್ಲಿ ಸೋಲು ಅನುಭವಿಸಿದ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇನ್ನು ಗೆದ್ದ ತಂಡ ರಾಜಸ್ಥಾನ್ ರಾಯಲ್ಸ್ ವಿರುದ್ಧ ಕ್ವಾಲಿಫೈಯರ್ ಪಂದ್ಯದಲ್ಲಿ ಸೆಣೆಸಾಟ ನಡೆಸಲಿದ್ದು ಅಲ್ಲಿ ಗೆದ್ದ ತಂಡ ಫೈನಲ್‌ನಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಪ್ರಶಸ್ತಿಗಾಗಿ ಸೆಣೆಸಾಟ ನಡೆಸಲಿದೆ.

Story first published: Wednesday, May 25, 2022, 16:40 [IST]
Other articles published on May 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X