ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐದು ತಿಂಗಳ ಬಳಿಕ ಪತ್ನಿ ಪುತ್ರನನ್ನು ಭೇಟಿಯಾಗಲಿದ್ದಾರೆ ಶೋಯೆಬ್ ಮಲಿಕ್

Pakistan Gives Shoaib Malik Permission To Land Late In England

ಪಾಕಿಸ್ತಾನದ ಹಿರಿಯ ಆಟಗಾರ ಶೋಯೆಬ್ ಮಲಿಕ್ ಲಾಕ್‌ಡೌನ್ ಹಿನ್ನೆಲೆಯಲ್ಲಿ ಪತ್ನಿ ಮತ್ತು ಪುತ್ರನನ್ನು ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಈಗ ಲಾಕಡೌನ್ ಸಡಿಲವಾಗಿದ್ದು ಐದು ತಿಂಗಳ ಬಳಿಕ ಪತ್ನಿ ಪುತ್ರನ ಭೇಟಿಗೆ ಅವಕಾಶ ದೊರೆತಿದೆ. ಇಂಗ್ಲೆಂಡ್ ಪ್ರವಾಸಕ್ಕೆ ತೆರಳುವ ಮುನ್ನ ಶೋಯೆಬ್ ಮಲಿಕ್‌ಗೆ ವಿಶೇಷ ಅನುಮತಿಯನ್ನು ಮಲಿಕ್‌ಗೆ ಪಿಸಿಬಿ ನೀಡಿದೆ.

ಜಾಗತಿಕ ಮಟ್ಟದಲ್ಲಿ ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವ ಕಾರಣ ಅಂತರಾಷ್ಟ್ರೀಯ ವಿಮಾನ ಪ್ರಯಾಣಕ್ಕೆ ನಿಷೇಧ ಹೇರಿದ ಬಳಿಕ ಶೋಯೆಬ್ ಮಲಿಕ್ ಪತ್ನಿ ಭಾರತೀಯ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಒಂದು ವರ್ಷದ ಪುತ್ರ ಹೈದರಾಬಾದ್‌ನಲ್ಲಿದ್ದರೆ ಮಲಿಕ್ ಪಾಕಿಸ್ತಾನದ ಸಿಯಾಲ್‌ಕೋಟ್‌ನಲ್ಲಿದ್ದಾರೆ.

1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!1996ರಲ್ಲೇ ಗವಾಸ್ಕರ್ ಭವಿಷ್ಯ: ಸಚಿನ್ 'ಅಂದು' ಮತ್ತು 'ಇಂದಿನ' ಪ್ರತಿಕ್ರಿಯೆ ಹೇಗಿದೆ ನೋಡಿ!

"ಕುಟುಂಬದಿಂದ ದೂರವುಳಿದ ಶೋಯೆಬ್ ಮಲಿಕ್‌ಗೆ ನಮ್ಮ ಕಾಳಜಿಯ ಕರ್ತವ್ಯದ ಭಾಗವಾಗಿ ಮಾನವೀಯ ಸಹಾನುಭೂತಿ ತೋರಸುವುದು ಸೂಕ್ತವಾಗಿದೆ. ಹೀಗಾಗಿ ಮಲಿಕ್ ಮಾಡಿದ್ದ ಮನವಿಯನ್ನು ನಾವು ಮನ್ನಿಸುತ್ತೇವೆ' ಎಂದು ಪಿಸಿಬಿ ಮುಖ್ಯ ಕಾರ್ಯನಿರ್ವಾಹಕ ವಸೀಮ್ ಖಾನ್ ಹೇಳಿದ್ದಾರೆ.

"ನಾವು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಯೊಂದಿಗೆ ಮಾತನಾಡಿದ್ದು ಅವರು ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿದ್ದಾರೆ. ಶೋಯೆಬ್ ಮಲಿಕ್ ಶೋಯೆಬ್ ಮಲಿಕ್ ಜುಲೈ 24ರಂದು ಇಂಗ್ಲೆಂಡ್‌ ಪ್ರವೇಶಿಸಲು ನೆರವಾಗುವ ಮೂಲಕ ರಿಯಾಯಿತಿ ನೀಡಿದ್ದಾರೆ. ಶೋಯೆಬ್ ಪಾಕ್ ತಂಡವನ್ನು ಸೇರಿಕೊಳ್ಳುವ ಮೊದಲು ದೇಶವನ್ನು ಪ್ರವೇಶಿಸುವ ಪ್ರವಾಸಿಗರಿಗೆ ಇಂಗ್ಲೆಂಡ್ ಸರ್ಕಾರ ರೂಪಿಸಿರುವ ನೀತಿಗಳನ್ನು ಮಲಿಕ್ ಪಾಲಿಸಲಿದ್ದಾರೆ ಎಂದು ವಸೀಮ್ ಖಾನ್ ಹೇಳಿದ್ದಾರೆ.

ಸಚಿನ್ ವಿದಾಯ ಭಾಷಣ ವೆಸ್ಟ್ ಇಂಡೀಸ್ ದಿಗ್ಗಜನ ಕಣ್ಣಲ್ಲೂ ನೀರು ತರಿಸಿತ್ತು!ಸಚಿನ್ ವಿದಾಯ ಭಾಷಣ ವೆಸ್ಟ್ ಇಂಡೀಸ್ ದಿಗ್ಗಜನ ಕಣ್ಣಲ್ಲೂ ನೀರು ತರಿಸಿತ್ತು!

ಪಾಕಿಸ್ತಾನ ತಂಡ ಜೂನ್ 28ರಂದು ಮ್ಯಾಂಚೆಸ್ಟರ್‌ಗೆ ಪ್ರಯಾಣ ಬೆಳೆಸಲಿದ್ದು ಡರ್ಬಿಶೈರ್‌ನಲ್ಲಿ 14 ದಿನಗಳ ಕ್ವಾರಂಟೈನ್ ಇರಲಿದೆ. ಈ ವೇಳೆ ಆಟಗಾರರಿಗೆ ತರಬೇತಿ ಹಾಗೂ ಅಭ್ಯಾಸವನ್ನು ನಡೆಸಲು ಅವಕಾಶವನ್ನು ನೀಡಲಾಗಿದೆ.

Story first published: Sunday, June 21, 2020, 16:59 [IST]
Other articles published on Jun 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X