ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಟೆಸ್ಟ್ ನಾಯಕತ್ವ ಬದಲಾವಣೆ ಸಂಭವ: ಮೊಹಮ್ಮದ್ ರಿಜ್ವಾನ್‌ಗೆ ನಾಯಕತ್ವ ಸಾಧ್ಯತೆ

Pakistan likely to Remove Azhar Ali as Test captain

ಪಾಕಿಸ್ತಾನ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವದಿಂದ ಅಝರ್ ಅಲಿಯನ್ನು ಕೆಳಗಿಳಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಬಯಸಿದೆ. ಮುಂಬರುವ ಡಿಸೆಂಬರ್ ತಿಂಗಳಿನಲ್ಲಿ ಪಾಕಿಸ್ತಾನ ನ್ಯೂಜಿಲೆಂಡ್ ಟೆಸ್ಟ್ ಸರಣಿಯನ್ನಾಡಲು ಪ್ರವಾಸ ಕೈಗೊಳ್ಳಲಿದ್ದು ಆ ಟೆಸ್ಟ್ ಸರಣಿಯಲ್ಲಿ ಮೊಹಮ್ಮದ್ ರಿಜ್ವಾನ್ ನಾಯಕತ್ವ ವಹಿಸಿಕೊಳ್ಳಲಿದ್ದಾರೆ ಎಂಬ ಮಾತುಗಳ ಕೇಳಿ ಬಂದಿದೆ.

ಪಾಕಿಸ್ತಾನದ ಟೆಸ್ಟ್ ತಂಡದ ನಾಯಕನಾಗಿ ಅಝರ್ ಅಲಿ ಮಾಜಿ ನಾಯಕ ಸರ್ಫರಾಜ್ ಅಹ್ಮದ್ ಅವರಿಂದ ಜವಾಬ್ಧಾರಿ ವಹಿಸಿಕೊಂಡು 12 ತಿಂಗಳುಗಳಾಗಿದೆ. ಆದರೂ ಅಝರ್ ನಾಯಕತ್ವದಲ್ಲಿ ಪಾಕಿಸ್ತಾನ ಗಮನಾರ್ಹ ಪ್ರದರ್ಶನ ನೀಡಲು ವಿಫಲವಾಗಿತ್ತು. ಆಸ್ಟ್ರೇಲಿಯಾ ವಿರುದ್ಧ 0-2 ಅಂತರದಿಂದ ಶರಣಾಗಿದ್ದರೆ, ಈ ವರ್ಷದಲ್ಲಿ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಪಾಕಿಸ್ತಾನ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದಿಂದ ಸೋಲು ಕಂಡಿತ್ತು.

ಯೋಗ ಟೀಚರ್ ಮತ್ತು ಕ್ರೀಡಾ ಮನಶಾಸ್ತ್ರಜ್ಞರನ್ನು ಆಸ್ಟ್ರೇಲಿಯಾಗೆ ಕರೆದೊಯ್ಯಲು ಟೀಮ್ ಇಂಡಿಯಾ ಮನವಿಯೋಗ ಟೀಚರ್ ಮತ್ತು ಕ್ರೀಡಾ ಮನಶಾಸ್ತ್ರಜ್ಞರನ್ನು ಆಸ್ಟ್ರೇಲಿಯಾಗೆ ಕರೆದೊಯ್ಯಲು ಟೀಮ್ ಇಂಡಿಯಾ ಮನವಿ

ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ 81 ಟೆಸ್ಟ್ ಪಂದ್ಯಗಳನ್ನು ಆಡಿರುವ ಅಝರ್ ಬಗ್ಗೆ ಪಾಕ್ ಕ್ರಿಕೆಟ್ ಸಮಿತಿಯ ಪ್ರಭಾವಿ ಸದಸ್ಯರು ಒಲವನ್ನು ಕಳೆದುಕೊಂಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಪಿಸಿಬಿಯ ಅಧ್ಯಕ್ಷ ಹಾಗೂ ಸಿಇಒ ಕೂಡ ಅಝರ್ ನಾಯಕನಾಗಿ ಮುಂದುವರಿಯುವ ಬಗ್ಗೆ ಭಿನ್ನ ಆಲೋಚನೆಗಳು ಇವೆ ಎಂಬುದನ್ನು ಬಹಿರಂಗಪಡಿಸಿದ್ದಾರೆ.

ಅಝರ್ ಅಲಿ ಬ್ಯಾಟಿಂಗ್‌ನ ಪ್ರದರ್ಶನ ಕೂಡ ಕಳೆದ ಎರಡು ವರ್ಷಗಳಲ್ಲಿ ಕಳಪೆಯಾಗಿದೆ. 30.41 ಹಾಗೂ 21.73ರ ಸರಾಸರಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಅಝರ್. ಈ ಅವಧಿಯಲ್ಲಿ 15 ಟೆಸ್ಟ್ ಪಂದ್ಯಗಳನ್ನು ಆಡಿರುವ ಅವರು 2 ಶತಕ ಹಾಗೂ 4 ಅರ್ಧ ಶತಕವನ್ನು ದಾಖಲಿಸಿದ್ದಾರೆ.

ಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿ

ಇನ್ನು ಈ ನಾಯಕನ ಸ್ಥಾನಕ್ಕೆ ಮೊಹಮ್ಮದ್ ರಿಜ್ವಾನ್ ಹೆಸರು ಪ್ರಭಲವಾಗಿ ಕೇಳಿ ಬರುತ್ತಿದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಆಗಿರುವ ರಿಜ್ವಾನ್ ಕಳೆದ ಇಂಗ್ಲಂಡ್ ವಿರುದ್ಧದ ಸರಣಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿದ್ದರು. ಜೊತೆಗೆ ಪಾಕಿಸ್ತಾನದ ನ್ಯಾಶನಲ್ ಟಿ20 ಚಾಂಪಿಯನ್‌ಶಿಪ್‌ನಲ್ಲಿ ಕೆಪಿಕೆ ತಂಡವನ್ನು ಮುನ್ನಡೆಸಿದ್ದ ರಿಜ್ವಾನ್ ಪ್ರಶಸ್ತಿಯನ್ನು ಗೆಲ್ಲುವಲ್ಲೂ ಯಶಸ್ವಿಯಾಗಿದ್ದರು.

Story first published: Friday, October 23, 2020, 16:17 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X