ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ಎದುರಿನ ಸೋಲಿಗೆ ಜಿಂಬಾಬ್ವೆ ಹೀಯಾಳಿಸಿದ ಪಾಕ್ ಮಾಜಿ ಕ್ರಿಕೆಟಿಗ!

Pakistan need away Test matches against stronger teams, says Ramiz Raja

ಕರಾಚಿ: ಜಿಂಬಾಬ್ವೆಗೆ ಪ್ರವಾಸ ಹೋಗಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಅಲ್ಲಿ ಆತಿಥೇಯರ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡಿತ್ತು. ಈ ಸರಣಿಯಲ್ಲಿ ಪ್ರವಾಸಿ ಪಾಕ್ 2-0ಯ ಸುಲಭ ಜಯ ಗಳಿಸಿತ್ತು. ಅದಕ್ಕೂ ಮುನ್ನ 3 ಪಂದ್ಯಗಳ ಟಿ20ಐ ಸರಣಿಯಲ್ಲೂ ಪಾಕ್ 2-1ರ ಜಯ ಕಂಡಿತ್ತು. ಟೆಸ್ಟ್‌ ಸರಣಿ ಮುಗಿಯುತ್ತಲೇ ಪಾಕ್‌ ದಿಗ್ಗಜ ಆಟಗಾರರೊಬ್ಬರು ಜಿಂಬಾಬ್ವೆ ತಂಡವನ್ನು ಹೀಯಾಳಿಸುವಂತೆ ಹೇಳಿಕೆ ನೀಡಿದ್ದಾರೆ.

ವಿರಾಟ್ ಕೊಹ್ಲಿಯ ಸಂದೇಶ ನನಗೆ ಸ್ಫೂರ್ತಿ ನೀಡಿತು: ಹರ್ಷಲ್ ಪಟೇಲ್ವಿರಾಟ್ ಕೊಹ್ಲಿಯ ಸಂದೇಶ ನನಗೆ ಸ್ಫೂರ್ತಿ ನೀಡಿತು: ಹರ್ಷಲ್ ಪಟೇಲ್

ಸೋಮವಾರ (ಮೇ 10) ನಡೆದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಪಾಕ್ ತಂಡ ಇನ್ನಿಂಗ್ಸ್‌ ಸಹಿತ 147 ರನ್ ಜಯ ಗಳಿಸಿತ್ತು. ಬಾಬರ್ ಅಝಾಮ್ ನಾಯಕತ್ವದ ಪಾಕ್‌ ತಂಡದ ಭರ್ಜರಿ ಗೆಲುವಿನ ಬಳಿಕ ಪಾಕ್ ಮಾಜಿ ಆಟಗಾರ ರಮೀಜ್ ರಾಜ ಅಭಿಪ್ರಾಯ ಹಂಚಿಕೊಂಡಿದ್ದಾರೆ.

'ದುರ್ಬಲ ಪ್ರದರ್ಶನಕ್ಕೆ ಸಾಕ್ಷಿ'

'ದುರ್ಬಲ ಪ್ರದರ್ಶನಕ್ಕೆ ಸಾಕ್ಷಿ'

ಪಾಕ್‌ ಮಾಜಿ ನಾಯಕರಾಗಿರುವ ರಮೀಜ್ ರಾಜ, ಜಿಂಬಾಬ್ವೆ ತಂಡ ದುರ್ಬಲ ಪ್ರಚಾರಕ್ಕೆ ಸಾಕ್ಷಿಯಾಗಿತ್ತು. ಆಫ್ರಿಕನ್ ರಾಷ್ಟ್ರ ಜಿಂಬಾಬ್ವೆ ವೈಟ್‌ಬಾಲ್‌ನತ್ತ ಗಮನ ಹರಿಸಬೇಕು ಎಂದು ಸಲಹೆ ನೀಡಿದ್ದಾರೆ. ಜೊತೆಗೆ ಪಾಕ್‌ ತಂಡ ಬಲಿಷ್ಠ ತಂಡಗಳ ಜೊತೆಗೆ ಪಂದ್ಯಗಳನ್ನಾಡಬೇಕು ಎಂದೂ ಹೇಳಿದ್ದಾರೆ.

'ತಮಾಷೆಯಾಗಿ ಕಾಣಿಸುತ್ತವೆ'

'ತಮಾಷೆಯಾಗಿ ಕಾಣಿಸುತ್ತವೆ'

'ಇಂಥ ಒನ್‌ಸೈಡ್ ಪಂದ್ಯಗಳು ತಮಾಷೆಯಾಗಿ ಕಾಣಿಸುತ್ತವೆ. ಇಂಥವುಗಳು ಕ್ರಿಕೆಟ್‌ ಅಭಿಮಾನಿಗಳನ್ನು ಇತರ ಕ್ರೀಡೆಗಳತ್ತ ಹೊರಳುವಂತೆ ಮಾಡುತ್ತವೆ. ದುರ್ಬಲ ತಂಡಗಳು ಬಲಿಷ್ಠ ತಂಡಗಳ ಜೊತೆಗೆ ಆಡುವಾಗ ಫಲಿತಾಂಶ ಏನು ಬರುತ್ತೆ ಅನ್ನುವುದಕ್ಕಿಂತಲೂ ಪಂದ್ಯದಿಂದ ಏನನ್ನು ಕಲಿತೆವು ಅನ್ನುವುದರತ್ತ ಗಮನ ಹರಿಸಬೇಕಾಗುತ್ತದೆ. ಜಿಂಬಾಬ್ವೆ ಕೂಡ ಅದನ್ನು ಮಾಡಬೇಕು,' ಎಂದು ರಮೀಜ್ ಸಲಹೆ ನೀಡಿದ್ದಾರೆ.

'ಬಲಿಷ್ಠರೆದುರು ಪಾಕ್ ಆಡಲಿ'

'ಬಲಿಷ್ಠರೆದುರು ಪಾಕ್ ಆಡಲಿ'

ಜಿಂಬಾಬ್ವೆ ಹಿಂದಿನ ಸೋಲುಗಳಿಂದ ಹೊಸದೇನನ್ನೋ ಕಲಿತಂತಿಲ್ಲ. ಯಾಕಂದರೆ ಪಾಕ್‌ ಎದುರು ಜಿಂಬಾಬ್ವೆ ಹೀನಾಯವಾಗಿ ಸೋಲುತ್ತಲೇಯಿದೆ. ಆದ್ದರಿಂದ ಪಾಕ್‌ ತಂಡ ಇನ್ಮುಂದೆ ಬಲಿಷ್ಠ ತಂಡಗಳ ವಿರುದ್ಧ ಹೆಚ್ಚು ವೇಳಾಪಟ್ಟಿ ಇಟ್ಟುಕೊಳ್ಳಬೇಕು,' ಎಂದು ರಾಜ ಹೇಳಿದ್ದಾರೆ. ದ್ವಿತೀಯ ಟೆಸ್ಟ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಪಾಕ್ 510 ರನ್ ಗಳಿಸಿ ಡಿಕ್ಲೇರ್ ಘೋಷಿಸಿದ್ದರೆ, ಜಿಂಬಾಬ್ವೆ 132+231 ರನ್ ಗಳಿಸಿ ಶರಣಾಗಿತ್ತು.

Story first published: Monday, May 10, 2021, 22:03 [IST]
Other articles published on May 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X