ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಇಲ್ಲ, ಧೋನಿ ಇಲ್ಲ: ಪಾಕ್ ಆಟಗಾರನ ಆಲ್‌ಟೈಮ್‌ ಟಿ20‍ XI ನಲ್ಲಿ ಇಬ್ಬರೇ ಭಾರತೀಯರು!

Pakistan Opener Fakhar Zaman’s All-time T20 XI

ಪಾಕಿಸ್ತಾನದ ಆರಂಭಿಕ ಆಟಗಾರ ಫಖಾರ್ ಝಮಾನ್ ಆಲ್‌ಟೈಮ್‌ ಟಿ20 XI ತಂಡವನ್ನು ಹೆಸರಿಸಿದ್ದಾರೆ. ಪಾಕಿಸ್ತಾನದ ಆಟಗಾರನ ಈ ತಂಡ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಯಾವುದೇ ಲಾಜಿಕ್ ಇಲ್ಲದ ತಂಡ ಇದು ಅಂತ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಕಿಡಿಕಾರುತ್ತಿದ್ದಾರೆ.

ಆಟಗಾರರು ಮಾಜಿ ಆಟಗಾರರು ತಮಗೆ ಬಲಿಷ್ಠ ಅನಿಸಿದ ಆಟಗಾರರನ್ನು ಹೆಸರಿಸಿ ಆಲ್‌ಟೈಮ್‌ ತಂಡವನ್ನು ಹೆಸರಿಸುವುದು ಸಾಮಾನ್ಯ. ಇದರಲ್ಲಿ ಸೇರ್ಪಡೆಯಾದರೂ ಆಗದಿದ್ದರೂ ಆಟಗಾರರಿಗೆ ಆಗೋದು ಏನೂ ಇರುವುದಿಲ್ಲ. ಆದರೂ ಕೆಲವೊಮ್ಮೆ ಇದು ಸಾಕಷ್ಟು ಚರ್ಚೆಯ ಕೇಂದ್ರ ಬಿಂದುವಾಗುತ್ತದೆ.

ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇ: ಪಾಕ್ ಮಾಜಿ ನಾಯಕ ಹೊಗಳಿದ್ದು ಭಾರತೀಯನನ್ನು!ಭವಿಷ್ಯದಲ್ಲಿ ಲೆಜೆಂಡ್ ಎನಿಸಬಲ್ಲ ಆಟಗಾರ ಸದ್ಯ ಈತನೊಬ್ಬನೇ: ಪಾಕ್ ಮಾಜಿ ನಾಯಕ ಹೊಗಳಿದ್ದು ಭಾರತೀಯನನ್ನು!

ಪಾಕಿಸ್ತಾನದ ಆಟಗಾರ ಫಾಕರ್ ಝಮಾನ್ ಆಟ್‌ಟೈಮ್ ತಂಡ ಯಾಕೆ ಇಷ್ಟು ಚರ್ಚೆಗೆ ಕಾರಣವಾಗುತ್ತಿದೆ ಎಂಬುದನ್ನು ಮುಂದೆ ಓದಿ..

ಕೊಹ್ಲಿ, ಧೋನಿಯೇ ತಂಡದಲ್ಲಿಲ್ಲ

ಕೊಹ್ಲಿ, ಧೋನಿಯೇ ತಂಡದಲ್ಲಿಲ್ಲ

ಪಾಕಿಸ್ತಾನದ ಆರಂಭಿಕ ಆಟಗಾರ ಫಾಕರ್ ಅಝಮ್ ಅವರು ಹೆಸರಿಸಿದ ತಂಡದಲ್ಲಿ ಟೀಮ್ ಇಂಡಿಯಾದ ಆಟಗಾರ ವಿರಾಟ್ ಕೊಹ್ಲಿ ಅವರನ್ನು ಸೇರ್ಪಡೆಗೊಳಿಸಿಲ್ಲ. ಮಾತ್ರವಲ್ಲ ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್ ಧೋನಿಯನ್ನೂ ಕಡೆಗಣನೆ ಮಾಡಲಾಗಿದೆ. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಟಿ20 ನಂ.1 ಆಟಗಾರನೂ ಈ ಪಟ್ಟಿಯಲ್ಲಿಲ್ಲ

ಟಿ20 ನಂ.1 ಆಟಗಾರನೂ ಈ ಪಟ್ಟಿಯಲ್ಲಿಲ್ಲ

ಫಾಕರ್ ಅಝಮ್ ಹೆಸರಿಸಿದ ಆಲ್‌ಟೈಮ್ ಟಿ20 ತಂಡದಲ್ಲಿ ಟಿ20ಯ ನಂ.1 ಬ್ಯಾಟ್ಸ್‌ಮನ್‌ ಪಾಕಿಸ್ತಾನದವರೇ ಆದ ಬಾಬರ್ ಅಜಂ ಹೆಸರನ್ನೂ ಸೇರ್ಪಡೆಗೊಳಿಸಿಲ್ಲ. ಇದು ಸ್ವತಃ ಪಾಕಿಸ್ತಾನ ಅಭಿಮಾನಿಗಳಿಗೂ ಅಚ್ಚರಿಯನ್ನುಂಟು ಮಾಡಿದೆ. ನಾಲ್ಕನೇ ಕ್ರಮಾಂಕದಲ್ಲಿ ಪಾಕ್ ಆಟಗಾರ ಶೋಯೆಬ್ ಮಲಿಕ್ ಅವರನ್ನು ಹೆಸರಿಸಲಾಗಿದೆ.

ಭಾರತದ ಇಬ್ಬರು ತಂಡದಲ್ಲಿ

ಭಾರತದ ಇಬ್ಬರು ತಂಡದಲ್ಲಿ

ಟೀಮ್ ಇಂಡಿಯಾದ ಇಬ್ಬರು ಆಟಗಾರರು ಈ ತಂಡದಲ್ಲಿದ್ದಾರೆ. ಆರಂಭಿಕ ಆಟಗಾರ ರೋಹಿತ್ ಶರ್ಮಾ ಮತ್ತು ವೇಗಿ ಜಸ್ಪ್ರೀತ್ ಬೂಮ್ರಾ ಅವರನ್ನು ಪಾಕಿಸ್ತಾನದ ಆರಂಭಿಕ ಆಟಗಾರ ಫಾಕರ್ ಅಝಮ್ ತಮ್ಮ ಆಲ್‌ಟೈಮ್ ಟಿ20 ತಂಡದಲ್ಲಿ ಸೇರಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಮೂವರು ಆಟಗಾರರು

ಇಂಗ್ಲೆಂಡ್‌ನ ಮೂವರು ಆಟಗಾರರು

ಇಂಗ್ಲೆಂಡ್‌ನ ಮೂವರು ಆಟಗಾರರು ಪಾಕಿಸ್ತಾನದ ಆಟಗಾರನ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಜೋಸನ್ ರಾಯ್, ಜೋಸ್ ಬಟ್ಲರ್, ಮತ್ತು ಬೆನ್ ಸ್ಟೋಕ್ಸ್ ಈ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಈ ಮೂಲಕ ಇಂಗ್ಲೆಂಡ್‌ನಿಂದ ಹೆಚ್ಚು ಅಂದರೆ 3 ಆಟಗಾರರನ್ನು ಆಯ್ಕೆ ಮಾಡಿಕೊಂಡಿದ್ದಾರೆ.

ಮೂವರು ಆಲ್‌ರೌಂಡರ್‌ಗಳು

ಮೂವರು ಆಲ್‌ರೌಂಡರ್‌ಗಳು

ಮೂವರು ಆಲ್‌ರೌಂಡರ್‌ಗಳು ಈ ತಂಡದಲ್ಲಿದ್ದಾರೆ. ಆರನೇ ಕ್ರಮಾಂಕದಲ್ಲಿ ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಏಳನೇ ಕ್ರಮಾಂಕದಲ್ಲಿ ಇಂಗ್ಲೆಂಡ್ ಆಲ್‌ರೌಂಡರ್ ಬೆನ್‌ಸ್ಟೋಕ್ಸ್ ಮತ್ತು 8ನೇ ಕ್ರಮಾಂಕದಲ್ಲಿ ವಿಂಡೀಸ್ ನಾಯಕ ಆಲ್‌ರೌಂಡರ್ ಕಿರಾನ್ ಪೊಲಾರ್ಡ್ ಅವರನ್ನು ಹೆಸರಿಸಲಾಗಿದೆ.

ಫಾಕರ್ ಅಝಮ್ ತಂಡ

ಫಾಕರ್ ಅಝಮ್ ತಂಡ

ಎಬಿ ಡಿವಿಲಿಯರ್ಸ್, ರೋಹಿತ್ ಶರ್ಮಾ, ಜೇಸನ್ ರಾಯ್, ಶೋಯೆಬ್ ಮಲಿಕ್, ಜೋಸ್ ಬಟ್ಲರ್ (ಡಬ್ಲ್ಯೂಕೆ), ಗ್ಲೆನ್ ಮ್ಯಾಕ್ಸ್ ವೆಲ್, ಬೆನ್ ಸ್ಟೋಕ್ಸ್, ಕೀರನ್ ಪೊಲಾರ್ಡ್, ಮಿಚೆಲ್ ಸ್ಟಾರ್ಕ್, ಜಸ್ಪ್ರೀತ್ ಬುಮ್ರಾ, ರಶೀದ್ ಖಾನ್.

Story first published: Thursday, February 27, 2020, 19:31 [IST]
Other articles published on Feb 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X