ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬರೋಬ್ಬರಿ 10 ವರ್ಷಗಳ ಬಳಿಕ ಮತ್ತೆ ಪಾಕ್ ತಂಡಕ್ಕೆ ಮರಳಿದ ಫವಾದ್!

Pakistan recall Fawad Alam for historic Sri Lanka Test series

ಇಸ್ಲಮಾಬಾದ್, ಡಿಸೆಂಬರ್ 7: ಮುಂದಿನ ವಾರ ನಡೆಯಲಿರುವ ಶ್ರೀಲಂಕಾ ವಿರುದ್ಧದ ಎರಡು ಪಂದ್ಯಗಳ ಐತಿಹಾಸಿಕ ಟೆಸ್ಟ್‌ ಸರಣಿಗೆ ಎಡಗೈ ಬ್ಯಾಟ್ಸ್‌ಮನ್ ಫವಾದ್ ಆಲಂ ಅವರನ್ನು ಪಾಕಿಸ್ತಾನ ಮತ್ತೆ ತಂಡದಲ್ಲಿ ಹೆಸರಿಸಿದೆ. ಡಿಸೆಂಬರ್ 11ರಿಂದ ಈ ಟೆಸ್ಟ್ ಸರಣಿ ಪಾಕಿಸ್ತಾನದಲ್ಲಿ ಆರಂಭಗೊಳ್ಳಲಿದೆ.

ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!

ಸದ್ಯ ನಡೆಯುತ್ತಿರುವ ಕ್ವಾಯಿದ್ ಎ ಅಝಮ್ ಟ್ರೋಫಿ ಪ್ರಧಮದರ್ಜೆ ಕ್ರಿಕೆಟ್ ಟೂರ್ನಿಯಲ್ಲಿ ಉತ್ತಮ ಫಾರ್ಮ್‌ ತೋರಿಸಿದ್ದ ಫವಾದ್, ಸಿಂಧ್ ತಂಡವನ್ನು ಪ್ರತಿನಿಧಿಸಿ 4 ಸೆಂಚುರಿಗಳನ್ನು ಬಾರಿಸಿದ್ದರು. ಹೀಗಾಗಿ ಪಾಕ್‌ ತಂಡ ಅವರನ್ನು ಶಕ್ತಿಯಾಗಿ ತಂಡದಲ್ಲಿ ಬಳಸಿಕೊಳ್ಳಲು ಯೋಚಿಸಿದೆ.

ಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋಸೈನ್ ಮಾಡಿ ಕೆಣಕಿದ ಕೆಸ್ರಿಕ್‌ಗೆ ಬ್ಯಾಟ್‌ನಿಂದಲೇ ಉರಿಸಿದ ಕೊಹ್ಲಿ: ವಿಡಿಯೋ

ಅಂದ್ಹಾಗೆ, 2009ರಲ್ಲಿ ಪಾಕ್‌ಗೆ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡ ಅಲ್ಲಿ ಕಡೇಯ ಸಾರಿ ಟೆಸ್ಟ್ ಪಂದ್ಯವನ್ನಾಡಿತ್ತು. ಆ ವೇಳೆ ಶ್ರೀಲಂಕಾ ಆಟಗಾರರ ಮೇಲೆ ಭಯೋತ್ಪಾದನಾ ದಾಳಿ ನಡೆದಿದ್ದರಿಂದ ಬಳಿಕ ಲಂಕಾ, ಪಾಕ್‌ಗೆ ಪ್ರವಾಸ ಮಾಡಿರಲಿಲ್ಲ. ಈ ವರ್ಷ ಶ್ರೀಲಂಕಾ ಮತ್ತೆ ಪಾಕ್‌ಗೆ ಪ್ರವಾಸ ಕೈಗೊಂಡಿತ್ತಾದರೂ ಅಲ್ಲಿ ಟೆಸ್ಟ್ ಸರಣಿ ಆಡುತ್ತಿರುವುದು ಇದು 10 ವರ್ಷಗಳ ಬಳಿಕ.

ಬೂಮ್ರಾ ಬೇಬಿ ಬೌಲರ್ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್ ಪಾಡು ಯಾರಿಗೂ ಬೇಡ!!ಬೂಮ್ರಾ ಬೇಬಿ ಬೌಲರ್ ಎಂದ ಪಾಕ್ ಮಾಜಿ ಆಲ್ರೌಂಡರ್ ರಜಾಕ್ ಪಾಡು ಯಾರಿಗೂ ಬೇಡ!!

34ರ ಹರೆಯದ ಫವಾದ್ ಆಲಂ, ಪಾಕಿಸ್ತಾನ ಪರ 3 ಟೆಸ್ಟ್‌ ಪಂದ್ಯಗಳಲ್ಲಿ 250 ರನ್ ಬಾರಿಸಿದ್ದರು, ಇದರಲ್ಲಿ ಒಂದು ಶತಕವೂ ಸೇರಿತ್ತು. ಫವಾದ್ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದು 2009ರಲ್ಲಿ ನ್ಯೂಜಿಲೆಂಡ್ ವಿರುದ್ಧ. ಇದಲ್ಲದೆ ಆಲಂ 38 ಏಕದಿನ ಪಂದ್ಯಗಳಲ್ಲಿ ಮತ್ತು 24 ಟಿ20 ಪಂದ್ಯಗಳಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದಾರೆ.

ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!ವಿಶ್ವ ಟಿ20ಗೆ ಭಾರತದ ತಯಾರಿ ಹೇಗಿದೆ?: ಕುತೂಹಲಕಾರಿ ಅಂಕಿ-ಅಂಶಗಳು!

ಪಾಕ್‌ಗೆ ಶ್ರೀಲಂಕಾ ಪ್ರವಾಸ, ಟೆಸ್ಟ್‌ ಸರಣಿಗೆ ಪಾಕ್ ತಂಡ: ಅಝರ್ ಅಲಿ (ನಾಯಕ), ಅಬಿದ್ ಅಲಿ, ಅಸಾದ್ ಶಫೀಕ್, ಬಾಬರ್ ಅಝಮ್, ಫವಾದ್ ಆಲಂ, ಹ್ಯಾರಿಸ್ ಸೊಹೈಲ್, ಇಮಾಮ್-ಉಲ್-ಹಕ್, ಇಮ್ರಾನ್ ಖಾನ್, ಕಾಶಿಫ್ ಭಟ್ಟಿ, ಮೊಹಮ್ಮದ್ ಅಬ್ಬಾಸ್, ಮೊಹಮ್ಮದ್ ರಿಜ್ವಾನ್, ನಸೀಮ್ ಷಾ, ಶಾಹೀನ್ ಶಾ ಅಫ್ರಿದಿ, ಶಾನ್ ಮಸೂದ್, ಯಾಸಿರ್ ಶಾ, ಉಸ್ಮಾನ್ ಖಾನ್ ಶಿನ್ವಾರಿ.

Story first published: Saturday, December 7, 2019, 18:34 [IST]
Other articles published on Dec 7, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X