ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇತಿಹಾಸ ಬರೆದ ಪಾಕ್‌ ಕ್ರಿಕೆಟರ್ ಅಬಿದ್ ಅಲಿ

Pakistan’s Abid Ali achieves historic first in Rawalpindi Test against Sri Lanka

ರಾವಲ್ಪಿಂಡಿ, ಡಿಸೆಂಬರ್ 16: ಪಾದಾರ್ಪಣೆ ಮಾಡಿದ ಟೆಸ್ಟ್‌ ಮತ್ತು ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ಪಾಕಿಸ್ತಾನ ಆರಂಭಿಕ ಬ್ಯಾಟ್ಸ್‌ಮನ್ ಅಬಿದ್ ಅಲಿ ಇತಿಹಾಸ ನಿರ್ಮಿಸಿದ್ದಾರೆ. ಪಾಕಿಸ್ತಾನದ ರಾವಲ್ಪಿಂಡಿಯಲ್ಲಿ ನಡೆದ ಪಾಕ್-ಶ್ರೀಲಂಕಾ 1ನೇ ಟೆಸ್ಟ್‌ನಲ್ಲಿ ಅಬಿದ್ ಈ ಸಾಧನೆ ಮೆರೆದಿದ್ದಾರೆ.

ವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊವಿಶ್ವ ಟಿ20ಯಲ್ಲಿ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿ ಆಡಲಿದ್ದಾರೆ: ಡ್ವೇನ್ ಬ್ರಾವೊ

ಪಾಕಿಸ್ತಾನ ಪರ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದ 32ರ ಹರೆಯದ ಅಬಿದ್ ಅಲಿ, 201 ಎಸೆತಗಳಲ್ಲಿ ಅಜೇಯ 109 ರನ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ. ಇದಕ್ಕೂ ಮುನ್ನ ಇದೇ ವರ್ಷ ದುಬೈನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಪಾದಾರ್ಪಣೆ ಮಾಡಿದ್ದ ಅಲಿ, ಆಸ್ಟ್ರೇಲಿಯಾ ವಿರುದ್ಧ 112 ರನ್ ಗಳಿಸಿದ್ದರು.

2009ರಲ್ಲಿ ಟೆಸ್ಟ್‌ ಪಂದ್ಯಕ್ಕಾಗಿ ಪಾಕಿಸ್ತಾನಕ್ಕೆ ತೆರಳಿದ್ದ ಶ್ರೀಲಂಕಾ ತಂಡದ ಆಟಗಾರರಿದ್ದ ಬಸ್‌ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಸುಮಾರು 10 ವರ್ಷಗಳ ಬಳಿಕ ಅಂದರೆ, ಇದೇ ಮೊದಲ ಬಾರಿ ಶ್ರೀಲಂಕಾ ತಂಡ ಟೆಸ್ಟ್‌ಗಾಗಿ ಪಾಕಿಸ್ತಾನಕ್ಕೆ ಪ್ರವಾಸ ಬೆಳೆಸಿದೆ.

ಅಂಡರ್‌ಟೇಕರ್ vs ಬ್ರಾಕ್‌ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋಅಂಡರ್‌ಟೇಕರ್ vs ಬ್ರಾಕ್‌ ಲೆಸ್ನರ್, ರೋಮಾಂಚನಕಾರಿ ಕಾಳಗ: ವೀಡಿಯೋ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ ತಂಡ, ನಾಯಕ ದಿಮುತ್ ಕರುಣ ರತ್ನೆ 59, ಧನಂಜಯ ಡೆಸಿಲ್ವಾ 102 ರನ್‌ ನೊಂದಿಗೆ 97 ಓವರ್‌ಗೆ 6 ವಿಕೆಟ್ ಕಳೆದು 308 ರನ್ ಮಾಡಿ ಡಿಕ್ಲೇರ್ ಘೋಷಿಸಿತ್ತು. ಇನ್ನಿಂಗ್ಸ್‌ಗೆ ಇಳಿದ ಪಾಕ್, ಅಬಿದ್ ಅಲಿ 109, ಬಾಬರ್ ಅಝಮ್ 102 ರನ್‌ನೊಂದಿಗೆ 70 ಓವರ್‌ಗೆ 2 ವಿಕೆಟ್ ನಷ್ಟದಲ್ಲಿ 252 ರನ್ ಗಳಿಸಿತ್ತು. ಮಳೆ ಶುರುವಾಗಿದ್ದರಿಂದ ಪಂದ್ಯ ಡ್ರಾ ಎನಿಸಲ್ಪಟ್ಟಿತು.

Story first published: Monday, December 16, 2019, 9:37 [IST]
Other articles published on Dec 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X