ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ಕ್ರಿಕೆಟ್ ತಂಡದ ಮೋಸದ ಬಗ್ಗೆ ಬಾಂಬ್ ಸಿಡಿಸಿದ ಮೊಹಮ್ಮದ್ ಆಸಿಫ್!

Pakistans current pacers are 17-18 years only on paper, they are 27-28 in reality, says Mohammad Asif

ಇಸ್ಲಮಾಬಾದ್: ನ್ಯೂಜಿಲೆಂಡ್‌ ಪ್ರವಾಸದಲ್ಲಿರುವ ಪಾಕಿಸ್ತಾನ ಕ್ರಿಕೆಟ್‌ ತಂಡ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಮೌಂಟ್‌ ಮೌಂಗನ್ಯುಯಿಯಲ್ಲಿ ನಡೆದಿದ್ದ ಆರಂಭಿಕ ಟೆಸ್ಟ್‌ನಲ್ಲಿ ಪಾಕಿಸ್ತಾನ 101 ರನ್ ಹೀನಾಯ ಸೋಲನುಭವಿಸಿದೆ. ಟೆಸ್ಟ್ ಸರಣಿಯಲ್ಲಿ ಮಾತ್ರ ಅಲ್ಲ, ಮೂರು ಪಂದ್ಯಗಳ ಟಿ20ಐ ಸರಣಿಯಲ್ಲೂ ಪಾಕ್‌ ತಂಡ 2-1ರ ಸೋಲನುಭವಿಸಿದೆ. ಆರಂಭಿಕ ಟೆಸ್ಟ್‌ನಲ್ಲಿ ಪಾಕ್ ಸೋತ ಬೆನ್ನಲ್ಲೇ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಸಿಫ್ ಆಘಾತಕಾರಿ ಹೇಳಿಕೆ ನೀಡಿದ್ದಾರೆ.

Ind vs Aus: ರೋಹಿತ್ ಶರ್ಮಾ ಆಡುವ ಬಗ್ಗೆ ಇನ್ನೂ ಮುಗಿದಿಲ್ಲ ಗೊಂದಲ!Ind vs Aus: ರೋಹಿತ್ ಶರ್ಮಾ ಆಡುವ ಬಗ್ಗೆ ಇನ್ನೂ ಮುಗಿದಿಲ್ಲ ಗೊಂದಲ!

ಪಾಕಿಸ್ತಾನ ತಂಡ ಇತ್ತೀಚಿನ ಟೂರ್ನಿಗಳಲ್ಲಿ ಕೆಟ್ಟ ಪ್ರದರ್ಶನ ನೀಡುತ್ತಿರುವುದು ಯಾಕೆ, ಅದರ ಹಿಂದಿನ ಕಾರಣವೇನು? ಪಾಕಿಸ್ತಾನ ಕ್ರಿಕೆಟ್‌ ತಂಡ ಕ್ರಿಕೆಟ್‌ನಲ್ಲಿ ಹೇಗೆ ಮೋಸ ಮಾಡುತ್ತಿದೆ ಎಂಬ ಗುಟ್ಟನ್ನು ಆಸಿಫ್ ರಟ್ಟು ಮಾಡಿದ್ದಾರೆ.

ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!ಪತ್ನಿ ರಿತಿಕಾಗೆ ಕಿರಿಕಿರಿ ನೀಡುವ ರೋಹಿತ್‌ ಶರ್ಮಾರ 2 ಕೆಟ್ಟ ಅಭ್ಯಾಸಗಳಿವು!

ಮ್ಯಾಚ್ ಫಿಕ್ಸಿಂಗ್‌, ಭ್ರಷ್ಟಾಚಾರ ಆರೋಪಗಳನ್ನು ಎದುರಿಸಿದ್ದ ಪಾಕ್‌ ಕ್ರಿಕೆಟ್ ತಂಡದ ಮೇಲೆ ಆಸಿಫ್ ಮತ್ತೊಂದು ಆರೋಪ ಹೊರೆಸಿದ್ದಾರೆ.

ಆಟಗಾರರ ವಯಸ್ಸಿನಲ್ಲಿ ಮೋಸ

ಆಟಗಾರರ ವಯಸ್ಸಿನಲ್ಲಿ ಮೋಸ

ತನ್ನ ತಂಡದ ಸಹ ಆಟಗಾರ ಕಮ್ರನ್ ಅಕ್ಮಲ್ ಜೊತೆ ಯೂಟ್ಯೂಬ್‌ನಲ್ಲಿ ಮಾತನಾಡಿದ ಮೊಹಮ್ಮದ್ ಆಸಿಫ್, 'ಈಗ ಪಾಕಿಸ್ತಾನ ತಂಡದಲ್ಲಿರುವ ವೇಗಿಗಳಿಗೆ ತುಂಬಾ ವಯಸ್ಸಾಗಿದೆ. ಪಾಕ್ ಆಟಗಾರರ ಬರ್ತ್ ಸರ್ಟಿಫಿಕೇಟ್‌ನಲ್ಲಿ ಅವರ ವಯಸ್ಸು 17-18 ಎಂದು ಬರೆದಿದ್ದರೆ ಅಸಲಿಗೆ ಅವರ ವಯಸ್ಸು 27-28 ಆಗಿರುತ್ತದೆ,' ಎಂದಿದ್ದಾರೆ. ಆದರೆ ಆಸಿಫ್ ಯಾವ ಆಟಗಾರನ ಹೆಸರನ್ನೂ ಉಲ್ಲೇಖಿಸಿಲ್ಲ.

ಯಾರೀ ಮೊಹಮ್ಮದ್ ಆಸಿಫ್?

ಯಾರೀ ಮೊಹಮ್ಮದ್ ಆಸಿಫ್?

ತಾನು ಆಡುತ್ತಿದ್ದಾಗ ಬೆಸ್ಟ್ ವೇಗಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದವರು ಮೊಹಮ್ಮದ್ ಆಸಿಫ್. 2010ರಲ್ಲಿ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಪಾಟ್ ಫಿಕ್ಸಿಂಗ್‌ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಆಸಿಫ್, ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ನಿಂದ 5 ವರ್ಷಗಳ ನಿಷೇಧಕ್ಕೆ ಗುರಿಯಾಗಿದ್ದರು. ಆ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಪಾಕ್‌ ಆಟಗಾರರದ್ದು ಜಡತ್ವ ದೇಹ

ಪಾಕ್‌ ಆಟಗಾರರದ್ದು ಜಡತ್ವ ದೇಹ

'ಪಾಕ್ ಆಟಗಾರರಿಗೆ ವಯಸ್ಸಾಗಿರುವುದರಿಂದ ಅವರಿಗೆ 20-25 ಓವರ್‌ಗಳವರೆಗೆ ಬೌಲಿಂಗ್‌ ಮಾಡುವ ಫ್ಲೆಕ್ಸಿಬಿಲಿಟಿ ಇರೋಲ್ಲ. ಬಹಳ ವರ್ಷಗಳ ಕಾಲ ಅವರ (ಪಾಕ್ ಆಟಗಾರರ) ದೇಹ ಜಡತ್ವ ಹೊಂದಿರುವುದರಿಂದ ಅವರಿಗೆ ದೇಹ ಬಾಗಿಸುವುದು ಹೇಗೆಂದು ಗೊತ್ತಿಲ್ಲ. 5-6 ಓವರ್‌ ಎಸೆದ ಬಳಿಕ ಅವರಿಗೆ ಮೈದಾನದಲ್ಲಿ ನಿಲ್ಲಲೇ ಸಾಧ್ಯವಾಗಲ್ಲ,' ಎಂದು ಆಸಿಫ್ ಹೇಳಿಕೊಂಡಿದ್ದಾರೆ.

23 ಟೆಸ್ಟ್‌ನಲ್ಲಿ 106 ವಿಕೆಟ್‌ಗಳು!

23 ಟೆಸ್ಟ್‌ನಲ್ಲಿ 106 ವಿಕೆಟ್‌ಗಳು!

ಆಡುತ್ತಿದ್ದಾಗ ಶೋಯೆಬ್ ಅಖ್ತರ್ ಅವರಂತ ಮಾರಕ ವೇಗಿಗಳ ಸಾಲಿನಲ್ಲಿ ಗುರುತಿಸಿಕೊಂಡಿದ್ದ ಮೊಹಮ್ಮದ್ ಆಸಿಫ್‌ಗೆ ಈಗ 38ರ ಹರೆಯ. ಈಗಿನ ವೇಗಿಗಳಿಗೆ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕುವ ಬಗ್ಗೆ ಜ್ಞಾನ ಇರುವುದಿಲ್ಲ ಎಂದು ಆಸಿಫ್‌ ಹೇಳಿದ್ದಾರೆ. ಆಸಿಫ್ ಅವರು 23 ಟೆಸ್ಟ್ ಪಂದ್ಯಗಳಲ್ಲಿ ಬರೋಬ್ಬರಿ 106 ವಿಕೆಟ್‌ಗಳು, 38 ಏಕದಿನ ಪಂದ್ಯಗಳಲ್ಲಿ 46 ವಿಕೆಟ್‌ಗಳು, 11 ಟಿ20ಐ ಪಂದ್ಯಗಳಲ್ಲಿ 13 ವಿಕೆಟ್‌ಗಳ ದಾಖಲೆ ಹೊಂದಿದ್ದಾರೆ.

Story first published: Saturday, January 2, 2021, 15:05 [IST]
Other articles published on Jan 2, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X