ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬರೊಬ್ಬರಿ ಒಂದು ದಶಕಗಳ ಬಳಿಕ ಟೆಸ್ಟ್‌ ತಂಡಕ್ಕೆ ಕಮ್‌ಬ್ಯಾಕ್ ಮಾಡಿದ ಫಾವದ್ ಅಲಮ್

Pakistans Fawad Alam Makes Test Comeback After A Decade

ಪಾಕಿಸ್ತಾನದ ಬ್ಯಾಟ್ಸ್‌ಮನ್ ಫಾವದ್ ಅಲಮ್ ಬರೊಬ್ಬರಿ ಇಂದು ದಶಕದ ಬಳಿಕ ಪಾಕಿಸ್ತಾನ ಟೆಸ್ಟ್ ತಂಡದಲ್ಲಿ ಮತ್ತೊಮ್ಮೆ ಮೈದಾನಕ್ಕಿಳಿಯುವ ಅವಕಾಶವನ್ನು ಪಡೆದುಕೊಂಡಿದ್ದಾರೆ. ಇಂಗ್ಲೆಂಡ್‌ ವಿರುದ್ಧದ 2ನೇ ಟೆಸ್ಟ್‌ನಲ್ಲಿ ಶಬದ್ ಖಾನ್‌ ಸ್ಥಾನಕ್ಕೆ ಫಾವದ್ ಅಲಮ್ ಆಯ್ಕೆಯಾಗಿದ್ದಾರೆ. ಈ ಮೂಲಕ ಸುದೀರ್ಘ ಕಾಲದ ಬಳಿಕ ಮತ್ತೊಮ್ಮೆ ತಂಡದಲ್ಲಿ ಅವಕಾಶವನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ಧದ 2ನೇ ಟೆಸ್ಟ್ ಪಂದ್ಯದಲ್ಲಿ ಫಾವದ್ ಅಲಮ್ ಅವಕಾಶವನ್ನು ಗಿಟ್ಟಿಸಿಕೊಂಡಿದ್ದಾರೆ. ಈ ಪಂದ್ಯ ಫಾವದ್ ಅಲಮ್ ವೃತ್ತಿ ಜೀವನದ ನಾಲ್ಕನೇ ಟೆಸ್ಟ್ ಪಂದ್ಯವಾಗಿದೆ.

ಟೀಮ್ ಇಂಡಿಯಾದ ಕುಲ್‌ದೀಪ್ ಯಾದವ್‌ಗೆ ಬೆಂಬಲವಾಗಿರುವ ವಿಶ್ವ ಶ್ರೇಷ್ಠ ಸ್ಪಿನ್ನರ್ ಯಾರು?ಟೀಮ್ ಇಂಡಿಯಾದ ಕುಲ್‌ದೀಪ್ ಯಾದವ್‌ಗೆ ಬೆಂಬಲವಾಗಿರುವ ವಿಶ್ವ ಶ್ರೇಷ್ಠ ಸ್ಪಿನ್ನರ್ ಯಾರು?

ಫಾವದ್ ಅಲಮ್ ಕೊನೆಯ ಬಾರಿಗೆ ಟೆಸ್ಟ್ ತಂಡದಲ್ಲಿ ಅವಕಾಶವನ್ನು ಪಡೆದುಕೊಂಡಿದ್ದು 2009ರ ನವೆಂಬರ್ ತಿಂಗಳಿನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ. 10 ವರ್ಷ 8 ತಿಂಗಳ ಬಳಿಕ ಮತ್ತೆ ತಂಡಕ್ಕೆ ಆಯ್ಕೆಯಾಗಿದ್ದಾರೆ. 2009 ಜುಲೈ ತಿಂಗಳಿನಲ್ಲಿ ಫಾವದ್ ಅಲಮ್ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆಯನ್ನು ಮಾಡಿದ್ದರು.

ಕನಿಷ್ಟ ದಶಕಗಳ ಕಾದು ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಆಯ್ಕೆಯಾದ ವಿಶ್ವದ ಕೇವಲ 25ನೇ ಆಟಗಾರನಾಗಿದ್ದಾರೆ ಫಾವದ್ ಅಲಮ್. ಪಾಕಿಸ್ತಾನ ಕ್ರಿಕೆಟ್‌ನ ಕೇವಲ ಎರಡನೇ ಆಟಗಾರನಾಗಿದ್ದಾರೆ. ಈ ಹಿಂದೆ ಯೂನಿಸ್ ಅಹ್ಮದ್ 1987ರಲ್ಲಿ ಟೆಸ್ಟ್ ಪಂದ್ಯವನ್ನಾಡಿದ ಬಳಿಕ 17 ವರ್ಷಗಳ ನಂತರ ಮತ್ತೊಮ್ಮೆ ಪಾಕ್ ತಂಡದ ಪರವಾಗಿ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ಇದು ಪಾಕಿಸ್ತಾನದ ಮೊದಲನೇ ದೃಷ್ಟಾಂತವಾಗಿತ್ತು.

ಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರುಎಡಚರ ದಿನ: ಕ್ರಿಕೆಟ್ ಇತಿಹಾಸದ ಟಾಪ್ 10 ಎಡಗೈ ಬ್ಯಾಟ್ಸ್‌ಮನ್‌ಗಳಿವರು

ಇಂಗ್ಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಪಾಕಿಸ್ತಾನ ತಂಡ ಮೊದಲ ಪಂದ್ಯದಲ್ಲಿ ನಾಟಕೀಯವಾಗಿ ಸೋಲುಕಂಡಿತ್ತು. ಹೀಗಾಗಿ ಪಾಕ್ ತಂಡಕ್ಕೆ ಸೌಥಾಂಪ್ಟನ್‌ನಲ್ಲಿ ನಡೆಯುತ್ತಿರುವ 2ನೇ ಪಂದ್ಯ ಪಾಕಿಸ್ತಾನದ ಪಾಲಿಗೆ ನಿರ್ಣಾಯಕವಾಗಿದೆ.

Story first published: Friday, August 14, 2020, 9:50 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X