ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅಂಪೈರಿಂಗ್‌ನಿಂದ ನಿಷೇಧಕ್ಕೊಳಗಾಗಿದ್ದ ಅಸದ್ ರೌಫ್ ಇದೀಗ ಪಾಕ್‌ನಲ್ಲಿ ಶೂ-ಬಟ್ಟೆ ವ್ಯಾಪಾರಿ

 Pakistans Former ICC Elite Umpire Asad Rauf Now Runs A Shop Selling Clothes And Shoes In Landa Bazar

ಐಸಿಸಿಯ ಎಲೈಟ್ ಪ್ಯಾನೆಲ್ ಅಂಪೈರ್ ಆಗಿ, ನೂರಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಮೈದಾನದ ತೀರ್ಪುಗಾರರಾಗಿದ್ದ ಪಾಕಿಸ್ತಾನದ ಅಸದ್ ರೌಫ್ ಪ್ರಸ್ತುತ ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಶೂ-ಚಪ್ಪಲಿ, ಬಟ್ಟೆ ಹೀಗೆ ಎರಡು ಅಂಗಡಿಗಳನ್ನು ಇಟ್ಟುಕೊಂಡು ವ್ಯಾಪಾರ ನಡೆಸುತ್ತಿರುವ ಬಗ್ಗೆ ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದೇ ವೇಳೆ ಅವರು ಭಾವೋದ್ರಿಕ್ತನಾಗಿ ಮಾತನಾಡಿದ್ದಾರೆ.

ಅಸದ್ ರೌಫ್ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರಿಂಗ್ ಅಲ್ಲದೇ ಐಪಿಎಲ್ ಟೂರ್ನಿಯಲ್ಲೂ ಕೂಡ ಅಂಪೈರ್ ಆಗಿ ಕಾರ್ಯ ನಿರ್ವಹಿಸಿದ್ದರು. 2013ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ ವೇಳೆ ಬುಕ್ಕಿಗಳೊಂದಿಗೆ ಸಂಪರ್ಕಿಸಿ ದುಬಾರಿ ಉಡುಗೊರೆ ಪಡೆದಿದ್ದರು ಎಂಬ ಆರೋಪ ಕೇಳಿಬಂದಿತ್ತು. ಬಳಿಕ ವಿಚಾರಣೆ ನಡೆಸಿದ ಐಸಿಸಿಯ ಶಿಸ್ತು ಸಮಿತಿ ಆರೋಪ ಸಾಬೀತಾದ ಬಳಿಕ ರೌಫ್‍ರನ್ನು 2016ರ ನಂತರ ಐದು ವರ್ಷಗಳ ಕಾಲ ಅಂತಾರಾಷ್ಟ್ರೀಯ ಪಂದ್ಯಗಳ ಅಂಪೈರಿಂಗ್‍ಗೆ ನಿಷೇಧ ಹೇರಿತ್ತು. ಈ ಮೂಲಕ ಅಸದ್ ರೌಫ್ ಅವರ ಅಂಪೈರ್ ವೃತ್ತಿ ದುರಂತವಾಗಿ ಅಂತ್ಯ ಕಂಡಿತು.

ಪಾಕಿಸ್ತಾನ ಮೂಲದ ಬ್ರಾಡ್‌ಕಾಸ್ಟಿಂಗ್ ಚಾನೆಲ್‌ಗಳು 2013-16ರ ನಡುವೆ ಹೇಗೆ ತಮ್ಮ ಬಗ್ಗೆ ಹಗುರವಾಗಿ ಪ್ರಸಾದ ಮಾಡಿದವು ಎಂಬುದರ ಕುರಿತು ಅವಲೋಕಿಸಿದರೆ, ಇದೀಗ ಅಸದ್ ರೌಫ್ ಶೂ- ಬಟ್ಟೆ ಅಂಗಡಿಯ ವ್ಯಾಪಾರ ನಡೆಸುತ್ತಿರುವುದನ್ನು ನೋಡಿದರೆ ಗೊತ್ತಾಗುತ್ತದೆ. ಅಸದ್ ರೌಫ್ ಅವರನ್ನು 2016ರಲ್ಲಿ ಬಿಸಿಸಿಐ ಐದು ವರ್ಷಗಳ ಕಾಲ ನಿಷೇಧಿಸಿತು. ಆದರೆ ಅಸದ್ ರೌಫ್ ಇನ್ನೂ ಆ ಆರೋಪಗಳನ್ನು ನಿರಾಕರಿಸಿದ್ದಾರೆ.

ಐಪಿಎಲ್‌ನಲ್ಲಿ ನನ್ನ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ

ಐಪಿಎಲ್‌ನಲ್ಲಿ ನನ್ನ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ

"ನಾನು ಐಪಿಎಲ್‌ನಲ್ಲಿ ನನ್ನ ಅತ್ಯುತ್ತಮ ಸಮಯವನ್ನು ಕಳೆದಿದ್ದೇನೆ, ಆದರೆ ನಂತರ ಬಂದ ಈ ಆರೋಪಗಳನ್ನು ಹೊರತುಪಡಿಸಿ," ಎಂದು ಅಸದ್ ರೌಫ್ ಹೇಳಿದ್ದಾರೆ.

"ಈ ವಿಷಯಗಳೊಂದಿಗೆ ನನಗೆ ಯಾವುದೇ ಸಂಬಂಧವಿಲ್ಲ, ಆರೋಪಗಳು ಬಿಸಿಸಿಐ ಕಡೆಯಿಂದ ಬಂದವು ಮತ್ತು ಅವರೇ ನನ್ನ ಮೇಲೆ ನಿರ್ಧಾರ ತೆಗೆದುಕೊಂಡರು," ಎಂದು ಅಸದ್ ರೌಫ್ ಮ್ಯಾಚ್ ಫಿಕ್ಸಿಂಗ್ ಆರೋಪಗಳ ಬಗ್ಗೆ ಮಾತನಾಡಿದರು.

ನೋಡಲು ಏನೂ ಉಳಿದಿಲ್ಲ

ನೋಡಲು ಏನೂ ಉಳಿದಿಲ್ಲ

ಆರೋಪಗಳ ವಿರುದ್ಧ ಹೋರಾಡದೆ ಅಂಪೈರಿಂಗ್‌ನಿಂದ ಹಿಂತಿರುಗಿದ್ದಕ್ಕಾಗಿ ನೀವು ವಿಷಾದಿಸುತ್ತೀರಾ ಎಂದು ಕೇಳಿದಾಗ, ಅದಕ್ಕೆ ಅಸದ್ ರೌಫ್ ನೋಡಲು ಏನೂ ಉಳಿದಿಲ್ಲ ಎಂದು ಉತ್ತರಿಸಿದರು.

"ಇಲ್ಲ, ನಾನು ನನ್ನ ಜೀವನದುದ್ದಕ್ಕೂ ಹಲವಾರು ಪಂದ್ಯಗಳಲ್ಲಿ ಅಂಪೈರ್ ಮಾಡಿದ್ದೇನೆ, ಈಗ ನೋಡಲು ಯಾರೂ ಉಳಿದಿಲ್ಲ," ಎಂದು 66 ವರ್ಷ ವಯಸ್ಸಿನ ಅಸದ್ ರೌಫ್ ಪ್ರತಿಕ್ರಿಯಿಸಿದ್ದಾರೆ.

2013ರಿಂದ ಕ್ರಿಕೆಟ್ ಆಟದೊಂದಿಗೆ ಸಂಪರ್ಕದಲ್ಲಿಲ್ಲ

2013ರಿಂದ ಕ್ರಿಕೆಟ್ ಆಟದೊಂದಿಗೆ ಸಂಪರ್ಕದಲ್ಲಿಲ್ಲ

"ನಾನು 2013ರಿಂದ ಕ್ರಿಕೆಟ್ ಆಟದೊಂದಿಗೆ ಸಂಪರ್ಕದಲ್ಲಿಲ್ಲ, ಏಕೆಂದರೆ ಒಮ್ಮೆ ನಾನು ಏನನ್ನಾದರೂ ಬಿಟ್ಟರೆ ನಾನು ಅದನ್ನು ಸಂಪೂರ್ಣವಾಗಿ ಬಿಡುತ್ತೇನೆ," ಎಂದು ಅಸದ್ ರೌಫ್ ತಿಳಿಸಿದ್ದಾರೆ.

ಅಸದ್ ರೌಫ್ 2000ರಿಂದ 2013ರವರೆಗೆ 49 ಟೆಸ್ಟ್, 98 ಏಕದಿನ ಪಂದ್ಯ ಮತ್ತು 23 ಟಿ20 ಪಂದ್ಯಗಳು ಸೇರಿ ಒಟ್ಟು 170 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅಂಪೈರ್ ವೃತ್ತಿ ತೊರೆದು ಲಾಹೋರ್‌ನ ಲಾಂಡಾ ಬಜಾರ್‌ನಲ್ಲಿ ಎರಡು ಅಂಗಡಿಯನ್ನು ತೆರೆದು ಬಟ್ಟೆ, ಚಪ್ಪಲಿ, ಶೂ ವ್ಯಾಪಾರ ನಡೆಸುತ್ತಿದ್ದಾರೆ.

2013ರ ಸೀಸನ್ ಐಪಿಎಲ್‌ಗೆ ಕರಾಳ ಸಮಯ

2013ರ ಸೀಸನ್ ಐಪಿಎಲ್‌ಗೆ ಕರಾಳ ಸಮಯ

ಲಾಹೋರ್‌ನಲ್ಲಿ ಲಾಂಡಾ ಬಜಾರ್ ಕಡಿಮೆ ಬೆಲೆಗೆ ಬಟ್ಟೆ, ಚಪ್ಪಲಿಗಳು ಮತ್ತು ಇತರ ಸರಕುಗಳು ಸಿಗುವ ಸ್ಥಳವಾಗಿದೆ. ಲಾಂಡಾ ಬಜಾರ್‌ನಲ್ಲಿರುವ ಕೆಲವು ಅಂಗಡಿಗಳು ಸೆಕೆಂಡ್ ಹ್ಯಾಂಡ್ ಸರಕುಗಳ ಮಾರಾಟಕ್ಕೆ ಪ್ರಸಿದ್ಧಿ ಪಡೆದಿದೆ. ಇದೀಗ ಈ ಸ್ಥಲದಲ್ಲಿ ಅಸದ್ ರೌಫ್ ಬಟ್ಟೆ, ಚಪ್ಪಲಿ, ಶೂಗಳನ್ನು ಮಾರಾಟ ಮಾಡುವ ಅಂಗಡಿ ಇಟ್ಟಿದ್ದಾರೆ.

2013ರ ಸೀಸನ್ ಐಪಿಎಲ್‌ಗೆ ಕರಾಳ ಸಮಯವಾಗಿದ್ದು, ಲೀಗ್‌ನ ಪಾವಿತ್ರ್ಯತೆಗೆ ಧಕ್ಕೆ ತರುವಂತಹ ಹಲವಾರು ಆರೋಪಗಳು ಕೇಳಿಬಂದವು. ಉನ್ನತ ಸ್ಥಾನಗಳನ್ನು ವಿಸರ್ಜಿಸಿದ ನಂತರ ಬಿಸಿಸಿಐನಲ್ಲಿ ಅನೇಕ ಬದಲಾವಣೆಗಳು ಕಂಡವು ಮತ್ತು ಸುಪ್ರೀಂ ಕೋರ್ಟ್‌ನ ಅಧಿಕಾರದ ಅಡಿಯಲ್ಲಿ ಆಡಳಿತ ಸಮಿತಿಯು ಕಾರ್ಯನಿರ್ವಹಿಸಲು ಕಟ್ಟುನಿಟ್ಟಾದ ನಿಯಮಗಳನ್ನು ತರಲಾಯಿತು. ಆಗ ಭಾರತೀಯ ಕ್ರಿಕೆಟ್ ಆಡಳಿತವು 2013ರಲ್ಲಿ ಸುಪ್ರೀಂ ಕೋರ್ಟ್ ನೇಮಿಸಿದ ಸಮಿತಿಯಿಂದ ನಡೆಯುತ್ತಿತ್ತು.

Story first published: Friday, June 24, 2022, 17:39 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X