ಭಾರತ-ಪಾಕಿಸ್ತಾನ ನಡುವೆ ದ್ವಿಪಕ್ಷೀಯ ಸರಣಿ ನಡೆಯದಿರುವುದು ಪಾಕಿಸ್ತಾನಕ್ಕೆ ಹೆಚ್ಚು ನಷ್ಟ: ಮೈಕಲ್ ಅಥರ್ಟನ್

ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಅಥರ್ಟನ್ ಭಾರತ ಹಾಗೂ ಪಾಕಿಸ್ತಾನ ತಮಡಗಳ ನಡುವಿನ ದ್ವಿಪಕ್ಷೀಯ ಸರಣಿಯ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಈ ಎರಡು ದೇಶಗಳ ನಡುವೆ ದ್ವಿಪಕ್ಷೀಯ ಸರಣಿ ನಡೆಯದಿರುವುದರಿಂದಾಗಿ ಪಾಕಿಸ್ತಾನ ಅತ್ಯಂತ ಹೆಚ್ಚಿನ ನಷ್ಟವನ್ನು ಅನುಭವಿಸಿದೆ ಎಂದಿದ್ದಾರೆ ಅಥರ್ಟನ್. ಈ ಕಾರಣದಿಂದಾಗಿಯೇ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಕಳೆದ ಒಂದು ದಶಕದಲ್ಲಿ ದೊಡ್ಡ ಪ್ರಮಾಣದಲ್ಲಿ ಆರ್ಥಕ ನಷ್ಟವನ್ನು ಕಂಡಿದೆ ಎಂದಿದ್ದಾರೆ ಅಥರ್ಟನ್.

ಇನ್ನು ಇದೇ ಸಂದರ್ಭದಲ್ಲಿ ಅಥರ್ಟನ್ ಪಾಕಿಸ್ತಾನ ತವರಿನಲ್ಲಿ ಆಯೋಜನೆಯಾಗಬೇಕಿದ್ದ ಸರಣಿಗಳನ್ನು ಯುಎಇನಲ್ಲಿ ನಡೆಸಬೇಕಾದ ಅನಿವಾರ್ಯತೆ ಬಗ್ಗೆಯೂ ಪ್ರತಿಕ್ರಿಯಿಸಿದರು. 2009ರಲ್ಲಿ ಶ್ರೀಲಂಕಾ ಆಟಗಾರರಿದ್ದ ಬಸ್‌ನ ಮೇಲೆ ಉಗ್ರರು ನಡೆಸಿದ ದಾಳಿಯ ನಂತರ ಯಾವುದೇ ದೇಶಗಳ ಭದ್ರತೆಯ ಕಾರಣದಿಂದಾಗಿ ಪಾಕಿಸ್ತಾನಕ್ಕೆ ತೆರಳಲು ಬಯಸಿರಲಿಲ್ಲ. ಹೀಗಾಗಿ ಪಾಕಿಸ್ತಾನ ಅನುವಾರ್ಯವಾಗಿ ಯುಎಇನಲ್ಲಿಯೇ ಸರಣಿಗಳನ್ನು ಆಯೋಜಿಸಬೇಕಾಗಿತ್ತು. 2010ರ ದಶಕದ ಬಹುತೇಕ ಭಾಗದಲ್ಲಿ ಯಾವುದೇ ದೇಶಗಳು ಕೂಡ ಪಾಕಿಸ್ತಾನ ಪ್ರವಾಸಕ್ಕೆ ತೆರಲಲು ಮನಸ್ಸು ಮಾಡಿರಲಿಲ್ಲ.

ಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿಐಪಿಎಲ್‌ನಲ್ಲಿ ಒಂದು ತಂಡದೆದುರು ಹೆಚ್ಚು ಪಂದ್ಯ ಗೆದ್ದಿರುವ ತಂಡಗಳ ಪಟ್ಟಿ

ಇನ್ನು ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳು 2013ರ ಜನವರಿಯಲ್ಲಿ ಬಳಿಕ ಯಾವುದೇ ದ್ವಿಪಕ್ಷೀಯ ಸರಣಿಯಲ್ಲಿ ಭಾಗಿಯಾಗಿಲ್ಲ. ಅಂದು ಪಾಕಿಸ್ತಾನ ಭಾರತದ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸಿತ್ತು. ಅದಾದ ಬಳಿ ಎರಡು ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹದಗೆಟ್ಟ ಕಾರಣ ಇದು ಕ್ರಿಕೆಟ್ ಮೇಲೆಯೂ ಪರಿಣಾಮ ಬೀರಿತ್ತು. ಆದರೆ ಭಾರತ ಹಾಗೂ ಪಾಕಿಸ್ತಾನ ತಂಡಗಳು ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿದೆ. ಕಳೆದ 2019ರ ಏಕದಿನ ವಿಶ್ವಕಪ್‌ನಲ್ಲಿ ಈ ಎರಡು ತಂಡಗಳು ಕೊನೆಯ ಬಾರಿಗೆ ಮುಖಾಮುಖಿಯಾಗಿತ್ತು.

ಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತುಟಿ20 ವಿಶ್ವಕಪ್ ಬಿಡಿ, ನಿಮ್ಮ ಐಪಿಎಲ್ ತಂಡಕ್ಕೆ ಮೊದಲು ಆಸರೆಯಾಗಿ; ಆಟಗಾರರಿಗೆ ಲಾರಾ ಬುದ್ಧಿಮಾತು

"ಭಾರತದ ವಿರುದ್ಧ ದ್ವಿಪಕ್ಷೀಯ ಸರಣಿಯಲ್ಲಿ ಆಡಲು ಪಾಕಿಸ್ತಾನ ಅಸಮರ್ಥವಾದ ಕಾರಣದಿಂದಾಗಿ ಕಳೆದ ಒಂದು ದಶಕದಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ನೂರಾರು ಮಿಲಿಯನ್ ಡಾಲರ್‌ನಷ್ಟು ನಷ್ಟವುಂಟಾಗಿದೆ. ಇಷ್ಟು ಮಾತ್ರವಲ್ಲದೆ ಪಾಕಿಸ್ತಾನದಲ್ಲಿ ಬೇರೆ ಯಾವುದೇ ದೇಶದ ಸರಣಿಯನ್ನು ಕೂಡ ಆಯೋಜುಸಲು ಸಾಧ್ಯವಾಗದ ಕಾರಣದಿಂದಾಗಿಯೂ ಗಮನಾರ್ಹ ಪ್ರಮಾಣದ ಆರ್ಥಿಕ ನಷ್ಟವುಂಟಾಗಿದೆ" ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಅಥರ್ಟನ್ ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್ 2021: ಪ್ಲೇಆಫ್ಸ್‌ಗೆ ಪ್ರವೇಶಿಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್ಐಪಿಎಲ್ 2021: ಪ್ಲೇಆಫ್ಸ್‌ಗೆ ಪ್ರವೇಶಿಸಿದ ಮೊದಲ ತಂಡ ಚೆನ್ನೈ ಸೂಪರ್ ಕಿಂಗ್ಸ್

ಮುಂದುವರಿದು ಮಾತನಾಡಿದ ಅಥಾರ್ಟನ್ "ಕೊರೊನಾವೈರಸ್ ಆರಂಭವಾದ ಬಳಿಕ ಇಂಗ್ಲೆಂಡ್ ತಂಡ ದಕ್ಷಿಣ ಆಫ್ರಿಕಾ, ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಪ್ರವಾಸಗಳಿಂದ ಹೊರಗುಳಿಯಲು ನಿರ್ಧರಿಸಿತ್ತು. ಈ ಸಾಂಕ್ರಾಮಿಕ ರೋಗದ ಆರಂಭದ ಬಳಿಕ ಆಸ್ಟ್ರೇಲಿಯಾ ಕೂಡ ತವರಿನಿಂಧ ಹೊರಗೆ ಸರಣಿಯನ್ನು ಆಡದಿರಲು ನಿರ್ಧರಿಸಿತ್ತು. ಇಂಥಾ ಸಂದರ್ಭದಲ್ಲಿ ಪಾಕಿಸ್ತಾನ ತಂಡ ವಿಶ್ವಾದ್ಯಂತ ಪ್ರಯಾಣಿಸಿ ಸರಣಿಯಗಳಲ್ಲಿ ಪಾಲ್ಗೊಂಡಿದೆ. ಗಮನಾರ್ಹ ಸಂಗತಿಯೆಂದರೆ ಈ ಸಂದರ್ಭದಲ್ಲಿ ಯಾವುದೇ ಪ್ರವಾಸ ಶುಲ್ಕವನ್ನು ಕೂಡ ತಂಡಗಳಿಗೆ ನೀಡಿಲ್ಲ. ಕೊರೊನಾವೈರಸ್‌ನ ಬಳಿಕ ಪಾಕಿಸ್ತಾನ ತಂಡ ತವರಿಗಿಂತ ಹೊರಗೆ ಅತಿ ಹೆಚ್ಚು ಸರಣಿಗಳಲ್ಲಿ ಭಾಗಿಯಾಗಿದೆ" ಎಂದು ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ನಾಯಕ ಮೈಕಲ್ ಅಥರ್ಟನ್ ಹೇಳಿದ್ದಾರೆ.

ಇನ್ನು ವಿಶ್ವಕಪ್‌ನಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಸತತವಾಗಿ ಮೇಲುಗೈ ಸಾಧಿಸುತ್ತಲೇ ಬಂದಿದೆ. ಮಹತ್ವದ ಮೇದಿಕೆಯಲ್ಲಿ ಪಾಕಿಸ್ತಾನ ತಂಡಕ್ಕೆ ಭಾರತದ ವಿರುದ್ಧ ಒಂದೇ ಒಂದು ಸಲವೂ ಗೆಲುವು ಸಾಧಿಸಲು ಸಾಧ್ಯವಾಗಿಲ್ಲ. ಈಗ ಮತ್ತೊಮ್ಮೆ ಎರಡು ತಂಡಗಳು ಎದುರುಬದುರಾಗುತ್ತಿರುವ ಕಾರಣ ಈ ಬಾರಿಯೂ ಭಾರತ ಗೆಲುವು ಸಾಧಿಸಿವುದನ್ನು ನೋಡಲು ಭಾರತೀಯ ಕ್ರಿಕೆಟ್ ತಂಡದ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ.

CSK vs SRH: ಮುಂದುವರೆದ ಚೆನ್ನೈ ಗೆಲುವಿನ ನಾಗಾಲೋಟ, ಮತ್ತೆ ಮುಗ್ಗರಿಸಿದ ಹೈದರಾಬಾದ್CSK vs SRH: ಮುಂದುವರೆದ ಚೆನ್ನೈ ಗೆಲುವಿನ ನಾಗಾಲೋಟ, ಮತ್ತೆ ಮುಗ್ಗರಿಸಿದ ಹೈದರಾಬಾದ್

ಟಿ20 ವಿಶ್ವಕಪ್‌ ಟೂರ್ನಿ ಈ ವರ್ಷ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಯುಎಇಯಲ್ಲಿ ಆಯೋಜನೆಯಾಗಲಿದೆ. ಭಾರತ ತಂಡವಿರುವ ಗ್ರೂಪಿನಲ್ಲಿ ಪಾಕಿಸ್ತಾನ, ನ್ಯೂಜಿಲೆಂಡ್ ತಂಡಗಳಿವೆ ಮತ್ತು ಅಫ್ಘಾನಿಸ್ತಾನ ತಂಡಗಳಿವೆ. ಭಾರತ ತಂಡ ಗ್ರೂಪ್ 2ರಲ್ಲಿದೆ. ಗ್ರೂಪ್ 1ರಲ್ಲಿ ಹಾಲಿ ಚಾಂಪಿಯನ್ ವೆಸ್ಟ್‌ ಇಂಡೀಸ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಮತ್ತು ದಕ್ಷಿಣ ಆಫ್ರಿಕಾ ತಂಡಗಳಿವೆ

ಐಸಿಸಿ ಟಿ20 ವಿಶ್ವಕಪ್ 2021 ಊಹಿಸು
Match 15 - October 24 2021, 03:30 PM
ಶ್ರೀಲಂಕಾ
ಬಾಂಗ್ಲಾದೇಶ್
Predict Now

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, October 1, 2021, 18:23 [IST]
Other articles published on Oct 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X