ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪಿಲ್ ದೇವ್ ಚೇತರಿಕೆಗೆ ಭಾವನಾತ್ಮಕ ಟ್ವೀಟ್ ಮಾಡಿದ ಪಾಕಿಸ್ತಾನ ಸಚಿವ

Pakistan’s Minister Wrote A Heart-Warming Massage For Kapil Dev

ಭಾರತದ ದಿಗ್ಗಜ ಕ್ರಿಕೆಟಿಗ ಮೊದಲ ವಿಶ್ವಕಪ್ ವಿಜೇತ ತಂಡದ ನಾಯಕ ಕಪಿಲ್ ದೇವ್ ಇಂದು ಲಘು ಹೃದಯಾಘಾತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ದೆಹಲಿಯ ಆಸ್ಪತ್ರೆಗೆ ದಾಖಲಾಗಿರುವ ಕಪಿಲ್ ದೇವ್ ಅವರಿಗೆ ಆ್ಯಂಜಿಯೋಪ್ಲಾಸ್ಟಿ ನಡೆಸಲಾಗಿದೆ. ಕಪಿಲ್ ದೇವ್ ಅಪಾಯದಿಂದ ಹೊರಬಂದಿದ್ದಾರೆಂದು ಆಸ್ಪತ್ರೆಯ ಮೂಲಗಳು ಸ್ಪಷ್ಟಪಡಿಸಿವೆ.

ಇನ್ನು ಕ್ರಿಕೆಟ್ ದಿಗ್ಗಜನ ಚೇತರಿಕೆಗೆ ವಿಶ್ವದ ಹಲವಾರು ದಿಗ್ಗಜ ಕ್ರಿಕೆಟಿಗರು ಶುಭಹಾರೈಸಿದ್ದಾರೆ. ಶೀಘ್ರ ಚೇತರಿಕೆಗಾಗಿ ತಮ್ಮ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ಆದರೆ ಪಾಕಿಸ್ತಾನ ಸರ್ಕಾರದ ಸಚಿವರೊಬ್ಬರು ಕಪಿಲ್ ದೇವ್ ಚೇತರಿಕೆಗೆ ಪ್ರಾರ್ಥಿಸುತ್ತಾ ಭಾವುಕ ಸಂದೇಶವೊಂದನ್ನು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಗುಡ್‌ನ್ಯೂಸ್: ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ, ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ ಎಂದ ಲೆಜೆಂಡ್ಗುಡ್‌ನ್ಯೂಸ್: ಕಪಿಲ್ ದೇವ್ ಆರೋಗ್ಯದಲ್ಲಿ ಚೇತರಿಕೆ, ಎಲ್ಲರ ಪ್ರೀತಿ ಮತ್ತು ಕಾಳಜಿಗೆ ಧನ್ಯವಾದ ಎಂದ ಲೆಜೆಂಡ್

"ಒಹ್, ಶೀಘ್ರದಲ್ಲೇ ಚೇತರಿಸಿಕೊಳ್ಳಿ ಕಪಿಲ್‌ದೇವ್ ಸರ್, ನಮ್ಮ ಹೃದಯಕ್ಕೆ ಹತ್ತಿರುವಾಗಿರುವ ಕ್ರಿಕೆಟ್ ಯುಗಕ್ಕೆ ಸೇರಿದವರಾಗಿದ್ದೀರಿ. ನಿಮ್ಮ ಆರೋಗ್ಯಕ್ಕಾಗಿ ಹಾಗೂ ಶೀಘ್ರ ಚೇತರಿಕೆಗಾಗಿ ಪಾಕಿಸ್ತಾನದ ಕಡೆಯಿಂದ ನಮ್ಮ ಪ್ರಾರ್ಥನೆ" ಎಂದು ಟ್ವೀಟ್ ಮಾಡಿದ್ದಾರೆ ಫಾವದ್ ಹಸ್ಸನ್.

ಪಾಕಿಸ್ತಾನ ಸರ್ಕಾರದ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾಗಿರುವ ಫಾವದ್ ಹುಸ್ಸೇನ್ ತಮ್ಮ ಟ್ವಿಟ್ಟರ್‌ ಸಂದೇಶದಲ್ಲಿ ಪಾಕಿಸ್ತಾನ ಮಾಧ್ಯಮದಲ್ಲಿ ಕಪಿಲ್ ದೇವ್‌ಗೆ ಹೃದಯಾಘಾತವಾಗಿರುವ ಸುದ್ದಿಯನ್ನು ರೀಟ್ವೀಟ್ ಮಾಡಿ ಆಘಾತ ವ್ಯಕ್ತಪಡಿಸುವ ಜೊತೆಗೆ ತಮ್ಮ ಸಂದೇಶವನ್ನು ತಿಳಿಸಿದ್ದಾರೆ.

ಕಪಿಲ್‌ದೇವ್‌ಗೆ ಹೃದಯಾಘಾತ: ವಿಶ್ವದ ಮೂಲೆ ಮೂಲೆಯಿಂದ ಹರಿದುಬಂತು ಸಂದೇಶಕಪಿಲ್‌ದೇವ್‌ಗೆ ಹೃದಯಾಘಾತ: ವಿಶ್ವದ ಮೂಲೆ ಮೂಲೆಯಿಂದ ಹರಿದುಬಂತು ಸಂದೇಶ

ಈ ಟ್ವಿಟ್‌ಗೆ ಸಾವಿರಾರು ಪ್ರತಿಕ್ರಿಯೆಗಳು ಹರಿದುಬರುತ್ತಿದ್ದು ದೇಶ, ಭಾಷೆ, ರಾಜಕೀಯ ಭಿನ್ನತೆಗಳನ್ನು ಮೀರಿ ಕಪಿಲ್ ಆರೋಗ್ಯಕ್ಕಾಗಿ ಪ್ರಾರ್ಥಿಸಲಾಗುತ್ತಿದೆ.

Story first published: Saturday, October 24, 2020, 9:51 [IST]
Other articles published on Oct 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X