ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೊಹ್ಲಿ 'ಸ್ಪಿರಿಟ್ ಆಫ್ ಕ್ರಿಕೆಟ್‌' ಪ್ರಶಸ್ತಿ ಪಡೆದ ಬಳಿಕ ಪಾಕ್ ವೇಗಿಯ ಪ್ರತಿಕ್ರಿಯೆ ನೋಡಿ!

Pakistan’s Mohammad Amir Reacts After Virat Kohli Gets ICC Award

ಕ್ರಿಕೆಟ್ ಜಂಟಲ್‌ಮೆನ್ ಆಟ. ಎದುರಾಳಿಯನ್ನು ಗೌರವಿಸಿಕೊಂಡು ಕ್ರೀಡಾ ಸ್ಪೂರ್ತಿಯನ್ನು ಮೆರೆದಿರುವ ಅನೇಕ ಘಟನೆಗಳು ಕ್ರೀಡಾಂಗಣದಲ್ಲಿ ಕಾಣುತ್ತಲೇ ಇರುತ್ತದೆ. ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜಂಟಲ್‌ಮೆನ್ ವರ್ತನೆಗೆ ಐಸಿಸಿಯಿಂದ ಸ್ಪಿರಿಟ್ ಆಫ್ ಕ್ರಿಕೆಟ್‌ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ನಿನ್ನೆ ಐಸಿಸಿ ಪ್ರಕಟಿಸಿರುವ ವಾರ್ಷಿಕ ಪ್ರಶಸ್ತಿಯಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವಕಪ್‌ನಲ್ಲಿ ನಡೆದುಕೊಂಡ ಸ್ಪೂರ್ತಿದಾಯಕ ವರ್ತನೆಗೆ ಐಸಿಸಿಯಿಂದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ವಿಚಾರವಾಗಿ ಐಸಿಸಿ ವಿಶ್ವಕಪ್‌ನಲ್ಲಿ ವಿರಾಟ್ ಕೊಹ್ಲಿ ನಡೆದುಕೊಂಡಿದ್ದ ರೀತಿಯ ವೀಡಿಯೋವನ್ನು ಟ್ವಿಟರ್‌ನಲ್ಲಿ ಶೇರ್‌ ಮಾಡುವ ಮೂಲಕ ಪ್ರಶಸ್ತಿಯನ್ನು ಘೋಷಿಸಿತ್ತು.

ಐಸಿಸಿ ಟೆಸ್ಟ್, ಏಕದಿನ ಕ್ರಿಕೆಟ್ ವಾರ್ಷಿಕ ತಂಡಗಳಿಗೆ ಕೊಹ್ಲಿ ಕ್ಯಾಪ್ಟನ್ಐಸಿಸಿ ಟೆಸ್ಟ್, ಏಕದಿನ ಕ್ರಿಕೆಟ್ ವಾರ್ಷಿಕ ತಂಡಗಳಿಗೆ ಕೊಹ್ಲಿ ಕ್ಯಾಪ್ಟನ್

ಐಸಿಸಿ ಈ ಪ್ರಸಸ್ತಿಯನ್ನು ವಿರಾಟ್ ಕೊಹ್ಲಿಗೆ ನೀಡಿರುವುದಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ವಿರಾಟ್ ಕೊಹ್ಲಿ ಈ ಪ್ರಶಸ್ತಿಗೆ ಅರ್ಹ ವ್ಯಕ್ತಿ ಎಂಬ ಅಭಿಪ್ರಾಯ ವ್ಯಕ್ತವಾಗಿದೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ವೇಗಿ ಮೊಹಮದ್ ಆಮೀರ್ ಕೂಡ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಟೀಟ್ವೀಟ್ ಮಾಡಿದ ಮೊಹಮದ್ ಆಮಿರ್

ಟೀಟ್ವೀಟ್ ಮಾಡಿದ ಮೊಹಮದ್ ಆಮಿರ್

ಐಸಿಸಿ ಟ್ವೀಟ್‌ಅನ್ನು ರೀಟ್ವೀಟ್ ಮಾಡಿರುವ ಮೊಹಮದ್ ಆಮೀರ್ ಅಭಿನಂದನೆ ತಿಳಿಸಿದ್ದಾರೆ. ಈ ಅಭಿನಂದನೆಯ ಜೊತೆಗೆ ಬರೆದಿರುವ ಒಕ್ಕಣೆ ಇಲ್ಲಿ ಗಮನಸೆಳೆಯುತ್ತಿದೆ. 'ಶ್ರೇಷ್ಟ ಆಟಗಾರನ ಶ್ರೇಷ್ಟ ಮಾತು' ಎಂಬುದಾಗಿ ಮೊಹಮದ್ ಆಮಿರ್ ಬರೆದುಕೊಂಡಿದ್ದಾರೆ. ಪಾಕಿಸ್ತಾನದ ವೇಗಿ ಟೀಮ್ ಇಂಡಿಯಾ ನಾಯಕನ್ನು ಈ ರೀತಿ ಮೆಚ್ಚಿ ಬರೆದಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಬ್ಯಾಟ್ ಗಿಫ್ಟ್ ನೀಡಿದ್ದ ವಿರಾಟ್

ಬ್ಯಾಟ್ ಗಿಫ್ಟ್ ನೀಡಿದ್ದ ವಿರಾಟ್

ಪಾಕಿಸ್ತಾನ ವಿರುದ್ಧದ ಪಂದ್ಯದ ಸಂದರ್ಭದಲ್ಲಿ ಟೀಮ್ ವಿರಾಟ್ ಕೊಹ್ಲಿ ತಮ್ಮ ಬ್ಯಾಟೊಂದನ್ನು ಮೊಹಮದ್ ಆಮಿರ್‌ಗೆ ಗಿಪ್ಟ್‌ ಆಗಿ ನೀಡಿದ್ದರು. ಇಬ್ಬರೂ ಆಟಗಾರರು ಪರಸ್ಪರ ಗೌರವಿಸಿಕೊಂಡು ಬಂದಿದ್ದಾರೆ ಎಂಬುದು ಈ ಎರಡು ನಿದರ್ಶನಗಳಿಂದ ಸ್ಪಷ್ಟವಾಗುತ್ತದೆ.

ICC Awards: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿ ಪ್ರಶಸ್ತಿ ಗೆದ್ದ ಎಲ್ಲರ ಪಟ್ಟಿ

ದ್ವಿಪಕ್ಷೀಯ ಸರಣಿ ಬಯಸಿದ ಪಾಕ್ ಮಾಜಿ ಕ್ರಿಕೆಟಿಗರು

ದ್ವಿಪಕ್ಷೀಯ ಸರಣಿ ಬಯಸಿದ ಪಾಕ್ ಮಾಜಿ ಕ್ರಿಕೆಟಿಗರು

ಭಾರತ ಮತ್ತು ಪಾಕಿಸ್ತಾನದ ಮಧ್ಯೆ ರಾಜಕೀಯ ಸಂಬಂಧ ಹಳಸಿರುವ ಸಂದರ್ಭದಲ್ಲೂ ಪಾಕ್ ವೇಗಿ ಟೀಮ್ ಇಂಡಿಯಾ ಆಟಗಾರನನ್ನು ಮೆಚ್ಚುಕೊಂಡು ಟ್ವಿಟ್‌ ಮಾಡಿರುವುದು ವಿಶೇಷವಾಗಿದೆ. ಇತ್ತೀಚೆಗಷ್ಟೇ ಭಾರತದ ಜೊತೆ ಪಾಕಿಸ್ತಾನ ಕ್ರಿಕೆಟ್‌ ಆರಂಭಕ್ಕೆ ಪ್ರಯತ್ನಿಸಬೇಕು ಬಿಸಿಸಿಐ ಅಧ್ಯಕ್ಷ ಗಂಗೂಲಿ ಈ ಕುರಿತಾಗಿ ಪೂರಕವಾಗಿ ಸ್ಪಂದಿಸಬಹುದು ಎಂಬ ಅಭಿಪ್ರಾಯ ಪಾಕಿಸ್ತಾನ ಮಾಜಿ ಆಟಗಾರರು ವ್ಯಕ್ತಪಡಿಸಿದ್ದರು.

ಅಸಮಾದಾನಗೊಂಡಿದ್ದ ಕೊಹ್ಲಿ

ಅಸಮಾದಾನಗೊಂಡಿದ್ದ ಕೊಹ್ಲಿ

ವಿಶ್ವಕಪ್‌ ಸಂದರ್ಭದಲ್ಲಿ ಬೌಂಡರಿ ಲೈನ್ ಬಳಿ ನಿಂತಿದ್ದ ಆಸ್ಟ್ರೇಲಿಯಾ ಆಟಗಾರ ಸ್ಟೀವ್ ಸ್ಮಿತ್ ಅವರನ್ನು ಕ್ರಿಕೆಟ್ ಅಭಿಮಾನಿಗಳು ಕೆಣಕುವ ಪ್ರಯತ್ನ ಮಾಡಿದ್ದರು. ಇದಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಸಮಾದಾನವನ್ನು ವ್ಯಕ್ತಪಡಿಸಿ ಪ್ರೋತ್ಸಹ ನೀಡಿ ಎಂದು ಸ್ಥಳದಲ್ಲೇ ಸೂಚಿಸಿದ್ದರು. ಟೀಮ್ ಇಂಡಿಯಾ ನಾಯಕನ ಈ ವರ್ತನೆ ಐಸಿಸಿ ಸ್ಪಿರಿಟ್ ಆಫ್ ಕ್ರಿಕೆಟ್‌ ಪ್ರಶಸ್ತಿಯನ್ನು ತಂದುಕೊಟ್ಟಿದೆ.

Story first published: Thursday, January 16, 2020, 13:47 [IST]
Other articles published on Jan 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X