ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಬಳಿಕ ಪಾಕ್ ಹಿರಿಯ ಆಟಗಾರ ಕ್ರಿಕೆಟ್‌ಗೆ ನಿವೃತ್ತಿ

Pakistans Mohammad Hafeez to Retire after T20 World Cup

ಪಾಕಿಸ್ತಾನ ತಂಡದ ಹಿರಿಯ ಆಟಗಾರ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಹೇಳುವ ಬಗ್ಗೆ ಅಧಿಕೃತ ಹೇಳಿಕೆ ನೀಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಹಫೀಸ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಟಿ20 ವಿಶ್ವಕಪ್‌ ಬಳಿಕ ನಿವೃತ್ತಿ ಹೇಳುವುದಾಗಿ ತಿಳಿಸಿದ್ದಾರೆ.

ಮೊಹಮ್ಮದ್ ಹಫೀಸ್ ನಿನ್ನೆಯಷ್ಟೇ ಬಾಂಗ್ಲಾದೇಶ ತಂಡದ ವಿರುದ್ಧದ ಟಿ20 ಸರಣಿಗಾಗಿ ಪಾಕಿಸ್ತಾನ ತಂಡಕ್ಕೆ ವಾಪಾಸಾಗಿದ್ದರು. ಜನವರಿ 24ರಿಂದ ಬಾಂಗ್ಲಾದೇಶದ ವಿರುದ್ಧ ಟಿ20 ಸರಣಿ ನಡೆಯಲಿದೆ. ತಂಡಕ್ಕೆ ಮರು ಆಯ್ಕೆಯಾದ ಬಳಿಕ ಮಾತನಾಡಿದ ಸೀನಿಯರ್ ಕ್ರಿಕೆಟಿಗ ತಮ್ಮ ಅಂತರಾಷ್ಟ್ರೀಯ ಕ್ರಿಕೆಟ್‌ನ ನಿವೃತ್ತಿಯ ಕುರಿತಾಗಿ ಮಾತನಾಡಿದ್ದಾರೆ.

ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾದ ಪ್ರಮುಖ ಆಟಗಾರ ಹಿಂದೇಟು!ಪಾಕ್ ವಿರುದ್ಧದ ಸರಣಿಗೆ ಬಾಂಗ್ಲಾದ ಪ್ರಮುಖ ಆಟಗಾರ ಹಿಂದೇಟು!

ಮೊಹಮದ್ ಹಫೀಜ್ ಎಲ್ಲಾ ಮಾದರಿಗಳಲ್ಲೂ ಪಾಕಿಸ್ತಾನ ತಂಡದ ಪ್ರಮುಖ ಆಟಗಾರನಾಗಿದ್ದು ಟಾಪ್ ಆರ್ಡರ್‌ನಲ್ಲಿ ಆಧಾರ ಸ್ಥಂಭವಾಗಿದ್ದಾರೆ. ಜೊತೆಗೆ ಸ್ಪಿನ್‌ ಬೌಲಿಂಗ್‌ನಲ್ಲೂ ಪಾಕಿಸ್ತಾನದ ಪರವಾಗಿ ಮಿಂಚಿದ್ದಾರೆ. 2003 ಇಂಗ್ಲೆಂಡ್‌ ಪ್ರವಾಸದ ಸಂದರ್ಭದಲ್ಲಿ ಹಫೀಜ್ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.

ಕ್ರಿಕೆಟ್‌ ಬದುಕಿನಲ್ಲಿ ಸಾಕಷ್ಟು ಏರುಪೇರುಗಳನ್ನು ಕಂಡಿರುವ ಹಫೀಜ್ ಬೌಲಿಂಗ್ ವಿಚಾರವಾಗಿ ವಿವಾದವನ್ನು ಮಾಡಿಕೊಂಡಿದ್ದರು. ಬೌಲಿಂಗ್ ಶೈಲಿ ಅನುಮಾನಾಸ್ಪದವಾಗಿದ್ದ ಕಾರಣಕ್ಕೆ ಮೂರು ಬಾರಿ ಪರೀಕ್ಷೆಗೆ ಒಳಪಟ್ಟಿದ್ದರು. 2015ರಲ್ಲಿ ಒಂದು ವರ್ಷ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡದಂತೆ ನಿಶೇಧಕ್ಕೂ ಗುರಿಯಾಗಿದ್ದರು.

ಏಷ್ಯಾಕಪ್ ಆತಿಥ್ಯ ಪಾಕಿಸ್ತಾನಕ್ಕಿಲ್ಲ: ಕಾರಣ ಭಾರತ !ಏಷ್ಯಾಕಪ್ ಆತಿಥ್ಯ ಪಾಕಿಸ್ತಾನಕ್ಕಿಲ್ಲ: ಕಾರಣ ಭಾರತ !

55 ಟೆಸ್ಟ್‌ ಆಡಿರುವ ಹಫೀಜ್ 2018ರಲ್ಲಿ ಟೆಸ್ಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದು ಆಡಿರುವ 218 ಏಕದಿನದಲ್ಲಿ 6614 ರನ್ ಗಳಿದ್ದಾರೆ. 139 ವಿಕೆಟ್ ಕಬಳಿದ್ದಾರೆ. 89 ಟಿ20 ಕ್ರಿಕೆಟ್‌ಗಳನ್ನಾಡಿರುವ ಹಫೀಜ್ 54 ವಿಕೆಟ್‌ ಪಡೆದುಕೊಂಡಿದ್ದು 1908 ರನ್ ಗಳಿಸಿದ್ದಾರೆ.

Story first published: Friday, January 17, 2020, 19:28 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X