ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನದ ಯುವ ಕ್ರಿಕೆಟಿಗನಿಗೆ ಭಾರತದ ಹಿಟ್‌ಮ್ಯಾನ್‌ ಆದರ್ಶ!

Pakistan’s Rising Talent Wants To Bat like Rohit Sharma

ಆತ ಪಾಕಿಸ್ತಾನದ ಯುವ ಕ್ರಿಕೆಟಿಗ. ಅತ್ಯಂತ ಪ್ರತಿಭಾನ್ವಿತ ಈ ಕ್ರಿಕೆಟಿಗನನ್ನು ಪಾಕಿಸ್ತಾನದ ಕ್ರಿಕೆಟ್ ಪಂಡಿತರು ಈಗಾಗಲೆ ವಿರ್ಶವ ಕ್ರಿಕೆಟ್‌ನ ರನ್ ಮೆಶಿನ್ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಸೂಪರ್ ಸ್ಟಾರ್ ಬಾಬರ್ ಅಝಮ್ ಜೊತೆಗೆ ಹೋಲಿಕೆ ಮಾಡುತ್ತಿದ್ದಾರೆ.

ಪಾಕ್‌ ಕ್ರಿಕೆಟ್‌ಲ್ಲಿ ಹೊಸ ಭರವಸೆಯನ್ನು ಹುಟ್ಟು ಹಾಕಿದ್ದಾನೆ ಈ ಯುವ ಬ್ಯಾಟ್ಸ್‌ಮನ್. ಮಹಾನ್ ಆಟಗಾರರ ಜೊತೆಗೆ ಈತನನ್ನು ಹೋಲಿಕೆ ಮಾಡಲಾಗುತ್ತಿದೆ. ಇದರ ಅರಿವು ಪಾಕ್‌ನ ಈ ಯುವ ಕ್ರಿಕೆಟಿಗನಿಗೂ ಇದೆ. ಆದರೆ ಈತನ ಕನಸು ಮಾತ್ರ ಬೇರೆಯದ್ದೇ ಆಗಿದೆ.

ಹಾಗಾದರೆ ಪಾಕಿಸ್ತಾನದ ಆ ಯುವ ಕ್ರಿಕೆಟಿಗ ಯಾರು, ಆತನ ಕನಸೇನು ಮುಂದೆ ಓದಿ..

ಯಾರು ಈ ಯುವ ಪ್ರತಿಭೆ

ಯಾರು ಈ ಯುವ ಪ್ರತಿಭೆ

ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಮಿಂಚು ಹರಿಸುತ್ತಿರುವ ಈ ಯುವ ಪ್ರತಿಭೆ ಬೇರೆ ಯಾರೂ ಅಲ್ಲ. ಅದು ಹೈದರ್ ಅಲಿ. ಪಾಕಿಸ್ತಾನ ಅಂಡರ್ 19 ಮತ್ತು ಪಿಎಸ್‌ಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ಪಾಕಿಸ್ತಾನ ರಾಷ್ಟ್ರೀಯ ತಂಡದ ಕದ ತಟ್ಟುತ್ತಿದ್ದಾರೆ

ಕೊಹ್ಲಿ, ಬಾಬರ್‌ಗೆ ಹೋಲಿಕೆ

ಕೊಹ್ಲಿ, ಬಾಬರ್‌ಗೆ ಹೋಲಿಕೆ

ಈ ಬಾರಿಯ ಪಿಎಸ್ಎಲ್‌ನಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿರುವ ಹೈದರ್ ಅಲಿಯನ್ನು ಪಾಕಿಸ್ತಾನದ ಕ್ರಿಕೆಟ್ ಪಂಡಿತರು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಖಿಸ್ತಾನದ ಸೂಪರ್ ಸ್ಟಾರ್ ಬಾಬರ್ ಅಝಮ್‌ಗೆ ಹೋಲಿಕೆ ಮಾಡುತ್ತಿದ್ದಾರೆ. ಆದರೆ ಹೈದರ್ ಮಾತ್ರ ತನಗೆ ಆದರ್ಶ ಟೀಮ್ ಇಂಡಿಯಾದ ಇನ್ನೊಬ್ಬ ಆಟಗಾರ ಎಂದು ಹೇಳಿ ಅಚ್ಚರಿ ಮೂಡಿಸಿದ್ದಾರೆ.

ಹೈದರ್‌ಗೆ ರೋಹಿತ್ ಶರ್ಮಾ ಆದರ್ಶ

ಹೈದರ್‌ಗೆ ರೋಹಿತ್ ಶರ್ಮಾ ಆದರ್ಶ

ಹೈದರ್ ಅಲಿಗೆ ರೋಲ್‌ಮಾಡೆಲ್ ಬೇರೆ ಯಾರೂ ಅಲ್ಲ. ಅದು ಟೀಮ್ ಇಂಡಿಯಾದ ಸೀಮಿತ ಓವರ್‌ಗಳ ಉಪನಾಯಕ ರೋಹಿತ್ ಶರ್ಮಾ. ಈ ಮಾತನ್ನು ಸ್ವತಃ ಹೈದರ್ ಹೇಳಿಕೊಂಡಿದ್ದಾರೆ. ರೋಹಿತ್ ಶರ್ಮಾ ನನಗೆ ಆದರ್ಶ ಕ್ರಿಕೆಟಿಗ ಎಂದು ಹೇಳಿಕೆ ನೀಡಿದ್ದಾರೆ.

ರೋಹಿತ್ ರೀತಿ ಬ್ಯಾಟ್ ಬೀಸುವಾಸೆ

ರೋಹಿತ್ ರೀತಿ ಬ್ಯಾಟ್ ಬೀಸುವಾಸೆ

ಹೈದರ್ ಅಲಿಗೆ ಟೀಮ್ ಇಂಡಿಯಾದ ಸ್ಪೋಟಕ ಆರಂಭಿಕ ಆಟಗಾರ ರೋಹಿತ್ ಶರ್ಮಾ ರೀತಿ ಬ್ಯಾಟಿಂಗ್ ಮಾಡುವ ಆಸೆ ಎಂದು ಹೈದರ್ ಹೇಳಿಕೊಂಡಿದ್ದಾರೆ. ಆತನ ಸ್ಟ್ರೈಕ್ ರೇಟ್ ಆತನ ಹೆಚ್ಚುಗಾರಿಕೆ ಎಂದು ಕ್ರಿಕೆಟ್ ಪಾಕಿಸ್ತಾನದ ವಿಡಿಯೋದಲ್ಲಿ ಮಾತನಾಡಿಡಿರುವ ಹೈದರ್ ಹೇಳಿಕೊಂಡಿದ್ದಾರೆ.

ಪಿಎಸ್‌ಎಲ್‌ನಲ್ಲಿ ಹೈದರ್ ಮಿಂಚು

ಪಿಎಸ್‌ಎಲ್‌ನಲ್ಲಿ ಹೈದರ್ ಮಿಂಚು

ಪಾಕಿಸ್ತಾನ ಸೂಪರ್‌ ಲೀಗ್‌ನಲ್ಲಿ ಪೇಶಾವರ್ ಝಲ್ಮಿ ತಂಡವನ್ನು ಹೈದರ್ ಅಲಿ ಪ್ರತಿನಿಧಿಸುತ್ತಿದ್ದಾರೆ. ಲೀಗ್‌ನಲ್ಲಿ ಆಡಿದ 9 ಪಂದ್ಯಗಳಲ್ಲಿ ಹೈದರ್ 239 ರನ್‌ಗಳನ್ನು ಗಳಿಸಿದ್ದು ಪಾಕಿಸ್ತಾನ ಕ್ರಿಕೆಟ್‌ನಲ್ಲಿ ಹೊಸ ಭರವಸೆಗೆ ಕಾರಣವಾಗಿದ್ದಾನೆ.

Story first published: Tuesday, March 31, 2020, 13:17 [IST]
Other articles published on Mar 31, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X