ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಯೋಜಿಸಲು ಸಜ್ಜಾದ ಪಾಕಿಸ್ತಾನ: ವರದಿ

Pakistan set to host 7 match t20 series against England ahead of t20 world cup

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಪಾಕಿಸ್ತಾನ ಸದ್ಯ ಉತ್ತಮ ಫಾರ್ಮ್‌ನಲ್ಲಿದ್ದು ಸತತವಾಗಿ ಅದ್ಭುತ ಪ್ರದರ್ಶನ ನಿಡಿಕೊಂಡು ಬರುತ್ತಿದೆ. ಇದೇ ಪ್ರದರ್ಶನವನ್ನು ಮುಂದಿನ ಟಿ20 ವಿಶ್ವಕಪ್‌ನಲ್ಲಿಯೂ ಮುಂದುವರಿಸಲು ಉದ್ದೇಶಿಸಿರುವ ಪಾಕಿಸ್ತಾನ ಟಿ20 ವಿಶ್ವಕಪ್‌ಗೂ ಮುನ್ನ ತವರಿನಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ 7 ಪಂದ್ಯಗಳ ಟಿ20 ಸರಣಿ ಆಯೋಜನೆ ಮಾಡಲು ಸಜ್ಜಾಗಿದೆ. ಮೂಲಗಳ ಮಾಹಿತಿಯ ಪ್ರಕಾರ ಪಾಕಿಸ್ತಾನ ತಮಡ ಹಾಗೂ ಇಂಗ್ಲೆಂಡ್ ತಂಡಗಳು ಲಾಹೊರ್ ಹಾಗೂ ಕರಾಚಿ ಕ್ರೀಡಾಂಗಣದಲ್ಲಿ ಈ 7 ಪಂದ್ಯಗಳಲ್ಲಿ ಮುಖಾಮುಖಿಯಾಗಲಿದೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ) ಈ ಏಳು ಪಂದ್ಯಗಳ ಟಿ20 ಸರಣಿಯನ್ನು 7 ಭಿನ್ನ ತಾಣಗಳಲ್ಲಿ ಆಯೋಜನೆ ಮಾಡುವ ಗುರಿಯಿಟ್ಟುಕೊಂಡಿತ್ತು ಎನ್ನಲಾಗಿದೆ. ಇದರಲ್ಲಿ ಫೈಸಲಾಬಾದ್ ಹಾಗೂ ಮುಲ್ತಾನ್‌ನಂತಾ ಸಣ್ಣ ಕ್ರೀಡಾಂಗಣಗಳು ಕೂಡ ಸೇರಿತ್ತು. ಆದರೆ ನಂತರ ಈ ಯೋಜನೆಯನ್ನು ಪಾಕಿಸ್ತಾನ ಮಂಡಳಿ ಕೈಬಿಟ್ಟಿದ್ದು ಮೂರು ತಾಣಗಳನ್ನು ಮಾತ್ರವೇ ಅಂತಿಮಗೊಳಿಸಿದೆ ಎನ್ನಲಾಗಿದೆ.

Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್Ind vs Eng 5ನೇ ಟೆಸ್ಟ್: ಭಾರತದ ಆಡುವ 11ರ ಬಳಗದಲ್ಲಿ ಈ ಇಬ್ಬರು ವೇಗಿಗಳಿರಬೇಕು; ಅಜಿತ್ ಅಗರ್ಕರ್

ಎರಡು ಅಥವಾ ಮೂರು ತಾಣಗಳಲ್ಲಿ ಪಂದ್ಯ

ಎರಡು ಅಥವಾ ಮೂರು ತಾಣಗಳಲ್ಲಿ ಪಂದ್ಯ

ಐಸಿಸಿ ಟಿ20 ವಿಶ್ವಕಪ್ ಈ ಬಾರಿ ಆಸ್ಟ್ರೇಲಿಯಾದಲ್ಲಿ ಆಯೋಜನೆಯಾಗಲಿದೆ. ಇದಕ್ಕೂ ಮುನ್ನ ಪಾಕಿಸ್ತಾನ ಈ ಏಳು ಪಂದ್ಯಗಳ ಟಿ20 ಸರಣಿಗೆ ಆತಿಥ್ಯವಹಿಸಲಿದೆ. ಕೇವಲ ಎರಡು ಅಥವಾ ಮೂರು ತಾಣಗಳಲ್ಲಿ ಈ ಎಲ್ಲಾ ಪಂದ್ಯಗಳು ಆಯೋಜನೆಯಾಗಲಿದೆ.

ತಾತ್ಕಾಲಿಕ ವೇಳಾಪಟ್ಟಿ ರವಾನೆ

ತಾತ್ಕಾಲಿಕ ವೇಳಾಪಟ್ಟಿ ರವಾನೆ

ಮೂಲಗಳ ಮಾಹಿತಿಯ ಪ್ರಕಾರ ಈ ಸರಣಿಯ ತಾತ್ಕಾಲಿಕ ವೇಳಾಪಟ್ಟಿ ಹಾಗೂ ತಾಣಗಳ ವಿವರಗಳನ್ನು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿಗೆ ರವಾನಿಸಿದೆ. ತಾತ್ಕಾಲಿಕ ವೇಳಾಪಟ್ಟಿಯ ಪ್ರಕಾರ ಸೆಪ್ಟೆಂಬರ್ 15ರಿಂದ ಅಕ್ಟೋಬರ್ 2ರ ಮಧ್ಯೆ ಈ ಸರಣಿ ಆಯೋಜನೆಯಾಗಲಿದೆ. ಇದಕ್ಕೂ ಮುನ್ನ ಜುಲೈ ಅಥವಾ ಆಗಸ್ಟ್‌ನಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ(ಇಸಿಬಿ)ಯ ನಿಯೋಗ ಪಾಕಿಸ್ತಾನಕ್ಕೆ ಭೆಟಿ ನೀಡುವ ಸಾಧ್ಯತೆಯಿದೆ.

ಕರಾಚಿ ಹಾಗೂ ಲಾಹೋರ್ ಮುಖ್ಯ ತಾಣಗಳು

ಕರಾಚಿ ಹಾಗೂ ಲಾಹೋರ್ ಮುಖ್ಯ ತಾಣಗಳು

ಮೂಲಗಳ ಮಾಹಿತಿಯ ಪ್ರಕಾರ ಕರಾಚಿ ಹಾಗೂ ಲಾಹೋರ್‌ ಕ್ರೀಡಾಂಗಣಗಳನ್ನು ಈ ಸರಣಿಗೆ ಪ್ರಮುಖ ತಾಣಗಳಾಗಿ ಗುರುತಿಸಲಾಗಿದೆ. ರಾವಲ್ಪಿಂಡಿ ಕ್ರೀಡಾಂಗಣವನ್ನು ಬದಲಿ ತಾಣವಾಗಿ ಗುರುತಿಸಲಾಗಿದೆ. ಈ ಬಗ್ಗೆ ಇನ್ನಷ್ಟೇ ಅಧಿಕೃತ ನಿರ್ಧಾರವನ್ನು ಪಾಕಿಸ್ತಾನ ಮಂಡಳಿ ತೆಗೆದುಕೊಳ್ಳಬೇಕಿದೆ.

ಕ್ರಿಕೆಟರ್ಸ್ ರೂಲ್ಸ್ ಫಾಲೋ ಮಾಡಿದ್ರೂ ಕಷ್ಟ ಮಾಡದಿದ್ರೂ ಕಷ್ಟ?ಟೀಂ ಇಂಡಿಯಾಗೆ ಸಂಕಷ್ಟ | Oneindia Kannada
17 ವರ್ಷಗಳ ಬಳಿಕ ಪಾಕ್‌ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್

17 ವರ್ಷಗಳ ಬಳಿಕ ಪಾಕ್‌ ಪ್ರವಾಸ ಕೈಗೊಳ್ಳಲಿರುವ ಇಂಗ್ಲೆಂಡ್

ಈ ಸರಭಿ ಅಧಿಕೃತವಾಗಿ ಆಯೋಜೆನಯಾದಲ್ಲಿ ಸುದೀರ್ಘ 17 ವರ್ಷಗಳ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಂತಾಗುತ್ತದೆ. ಇದಕ್ಕೂ ಮುನ್ನ 2005ರಲ್ಲಿ ಇಂಗ್ಲೆಂಡ್ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಕೊನೇಯ ಬಾರಿಗೆ ಪ್ರವಾಸ ಕೈಗೊಂಡಿತ್ತು. ಕಳೆದ ವರ್ಷ ಟಿ20 ವಿಶ್ವಕಪ್‌ಗೆ ಮುನ್ನವೇ ಇಂಗ್ಲೆಂಡ್ ತಂಡ ಪಾಕಿಸ್ತಾನ ಪ್ರವಾಸ ಕೈಗೊಮಡು ಎರಡು ಪಂದ್ಯಗಳ ಟಿ20 ಸರನಿಯಲ್ಲಿ ಆಡಬೇಕಾಗಿತ್ತು. ಆದರೆ ಅಂತಿಮ ಹಂತದಲ್ಲಿ ಈ ಪ್ರವಾಸವನ್ನು ಇಂಗ್ಲೆಂಡ್ ರದ್ದುಕೊಳಿಸಿ ಪಾಕಿಸ್ತಾನಕ್ಕೆ ಆಘಾತ ನೀಡಿತ್ತು. ಇದಕ್ಕೂ ಕೆಲವೇ ದಿನಗಳ ಮುನ್ನ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಸರಣಿ ಆರಂಭಕ್ಕೆ ಕೆಲವೇ ನಿಮಿಷಗಳಿರುವಾದ ಭದ್ರತೆಯ ಕಾರಣವನ್ನು ಮುಂದಿಟ್ಟು ಸರಣಿ ರದ್ದುಕೊಳಿಸಿ ಆಘಾತ ನೀಡಿತ್ತು

Story first published: Wednesday, June 29, 2022, 17:11 [IST]
Other articles published on Jun 29, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X