ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿಯ ಮಾಜಿ ದಿಗ್ಗಜ ಆಟಗಾರನೇ ನನಗೆ ಆದರ್ಶ ಕ್ರಿಕೆಟಿಗ ಎಂದ ಬಾಬರ್ ಅಜಂ

Pakistan skipper Babar Azam said AB de Villiers is My role model I love the way he plays

ಈ ಬಾರಿಯ ಟಿ20 ವಿಶ್ವಕಪ್‌ನಲ್ಲಿ ಫೈನಲ್ ಹಂತಕ್ಕೆ ಪ್ರವೇಶಿಸಿದ ಪಾಕಿಸ್ತಾನ ತಂಡ ರನ್ನರ್‌ಅಪ್ ಪ್ರಶಸ್ತಿಗೆ ತೃಪ್ತವಾಗಿದೆ. ಇದೀಗ ಇಂಗ್ಲೆಂಡ್ ತಂಡದ ವಿರುದ್ಧ ಟೆಸ್ಟ್ ಸರಣಿಗೆ ಸಜ್ಜಾಗಿದೆ. ಈ ಸಂದರ್ಭದಲ್ಲಿ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಮಾತನಾಡಿದ್ದು ತನ್ನ ನೆಚ್ಚಿನ ಕ್ರಿಕೆಟ್ ಆಟಗಾರನನ್ನು ಹೆಸರಿಸಿದ್ದಾರೆ.

ವಿಶ್ವ ಕ್ರಿಕೆಟ್‌ನಲ್ಲಿ ಅದ್ಭುತ ಪ್ರದರ್ಶನದ ಮೂಲಕ ಮಿಂಚುತ್ತಿರುವ ಪಾಕಿಸ್ತಾನದ ನಾಯಕ ಬಾಬರ್ ಅಜಂ ಇತ್ತೀಚಿನ ದಿನಗಳಲ್ಲಿ ಸ್ವಲ್ಪ ಮಂಕಾಗಿದ್ದಾರೆ. ಅದರಲ್ಲೂ ಕಳೆದ ಟಿ20 ವಿಶ್ವಕಪ್‌ನಲ್ಲಿ ಬಾಬರ್ ಅಜಂ ಸಂಪೂರ್ಣವಾಗಿ ಫಾರ್ಮ್ ಕಳೆದುಕೊಂಡಿದ್ದರು. ಸೆಮಿಫೈನಲ್‌ನಲ್ಲಿ ಮಾತ್ರವೇ ಅದ್ಭುತ ಪ್ರದರ್ಶನ ನೀಡಿ ನ್ಯೂಜಿಲೆಂಡ್ ವಿರುದ್ಧ ಗೆಲುವಿಗೆ ಕಾರಣವಾಗಿದ್ದರು. ಇದೀಗ ಟೆಸ್ಟ್ ಸರಣಿಯ ಮೇಲೆ ಚಿತ್ತ ನೆಟ್ಟಿರುವ ಬಾಬರ್ ಅಜಂ ತನ್ನ ನೆಚ್ಚಿನ ಕ್ರಿಕೆಟಿಗ ಯಾರು ಎಂಬುದನ್ನು ಹೇಳಿಕೊಂಡಿದ್ದಾರೆ. ಆರ್‌ಸಿಬಿ ತಂಡದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ನನಗೆ ಆದರ್ಶ ಎಂದಿದ್ದಾರೆ ಬಾಬರ್ ಅಜಂ. ಹಾಗಾದರೆ ಬಾಬರ್ ಅಜಂ ಹೇಳಿದ ಆ ಆಟಗಾರ ಯಾರು? ಮುಂದೆ ಓದಿ..

ಫಿಫಾ ವಿಶ್ವಕಪ್ 2022: ಆತಿಥೇಯ ಕತಾರ್‌ಗೆ ಸೋಲುಣಿಸಿ 16ರ ಘಟ್ಟಕ್ಕೆ ಲಗ್ಗೆ ಇಟ್ಟ ನೆದರ್ಲ್ಯಾಂಡ್ಸ್ಫಿಫಾ ವಿಶ್ವಕಪ್ 2022: ಆತಿಥೇಯ ಕತಾರ್‌ಗೆ ಸೋಲುಣಿಸಿ 16ರ ಘಟ್ಟಕ್ಕೆ ಲಗ್ಗೆ ಇಟ್ಟ ನೆದರ್ಲ್ಯಾಂಡ್ಸ್

ಇಂಗ್ಲೆಂಡ್ ಆಟಗಾರರಿಗೆ ಸ್ವಾಗತ ಎಂದ ಬಾಬರ್

ಇಂಗ್ಲೆಂಡ್ ಆಟಗಾರರಿಗೆ ಸ್ವಾಗತ ಎಂದ ಬಾಬರ್

ಇಂಗ್ಲೆಂಡ್ ತಂಡ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡು ಟೆಸ್ಟ್ ಸರಣಿಯಲ್ಲಿ ಭಾಗಿಯಾಗಿರುವ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನದಲ್ಲಿ ಭಾಗಿಯಾಗಿದ್ದರು ಬಾಬರ್ ಅಜಂ. ಈ ಸಂದರ್ಭದಲ್ಲಿ ಪಾಕಿಸ್ತಾನಕ್ಕೆ ಆಗಮಿಸಿರುವ ಇಂಗ್ಲೆಂಡ್ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ ಎಂದಿದ್ದಾರೆ. "ನಾವು ಈ ಸರಣಿಗಾಗಿ ಎದುರುನೋಡುತ್ತಿದ್ದೇವೆ. ಮೊದಲನೆಯದಾಗಿ ನಾನು ಇಂಗ್ಲೆಂಡ್ ತಂಡಕ್ಕೆ ಸ್ವಾಗತ ಕೋರುತ್ತಿದ್ದೇನೆ. ಟಿ20 ಸರಣಿಗಾಗಿ ಕೆಲ ಆಟಗಾರರು ಆಗಮಿಸಿದ್ದರು. ಅವರು ಇಲ್ಲಿನ ಸಮಯವನ್ನು ಆನಂದಿಸುತ್ತಾರೆ. ಇಲ್ಲಿನ ವಾತಾವರಣ, ಪಾಕಿಸ್ತಾನದ ಆತಿಥ್ಯವನ್ನು ಆನಂದಿಸಲಿದ್ದಾರೆ. ಈಗ ನಾವು ಸರಣಿಗಾಗಿ ಎದುರುನೋಡುತ್ತಿದ್ದೇವೆ. ಎಲ್ಲರು ಕೂಡ ಅತ್ಯುತ್ತಮ ಕ್ರಿಕೆಟ್‌ ಆಡಲು ಬಯಸುತ್ತಿದ್ದೇವೆ" ಎಂದಿದ್ದಾರೆ ಬಾಬರ್ ಅಜಂ.

ಎಬಿ ಡಿವಿಲಿಯರ್ಸ್ ನನಗೆ ಆದರ್ಶ ಎಂದ ಬಾಬರ್

ಎಬಿ ಡಿವಿಲಿಯರ್ಸ್ ನನಗೆ ಆದರ್ಶ ಎಂದ ಬಾಬರ್

ಇನ್ನು ಈ ಸಂದರ್ಭದಲ್ಲಿ ತನ್ನ ಆದರ್ಶ ಕ್ರಿಕೆಟಿಗ ದಕ್ಷಿಣ ಆಫ್ರಿಕಾದ ದಿಗ್ಗಜ ಆಟಗಾರ ಆರ್‌ಸಿಬಿ ತಂಡದ ಸ್ಟಾರ್ ಕ್ರಿಕೆಟಿಗನಾಗಿದ್ದ ಎಬಿ ಡಿವಿಲಿಯರ್ಸ್ ಎಂಬುದನ್ನು ಬಾಬರ್ ಅಜಂ ಬಹಿರಂಗಪಡಿಸಿದ್ದಾರೆ. "ಪ್ರಾಮಾಣಿಕವಾಗಿ ಹೇಳಬೇಕೆಂದರೆ ನನಗೆ ಆದರ್ಶ ಕ್ರಿಕೆಟಿಗ ಎಂದರೆ ಎಬಿಡಿ ವಿಲಿಯರ್ಸ್. ನನಗೆ ಅವರೆಂದರೆ ಇಷ್ಟ. ವಿಶೇಷವಾಗಿ ಅವರು ಆಡುವ ಶೈಲಿ ಹಾಗೂ ಶಾಟ್‌ಗಳು ಬಹಳ ಇಷ್ಟ. ಅವರು ಆಡುವುದನ್ನು ಟಿವಿಯಲ್ಲಿ ನೋಡಿದ ಬಳಿಕ ಮರುದಿನ ನಾನು ನೆಟ್ಸ್‌ನಲ್ಲಿ ಅದೇ ರೀತಿಯಾಗಿ ಅಭ್ಯಾಸ ನಡೆಸುತ್ತಿದ್ದೆ. ನನಗೆ ಅವರು ಆದರ್ಶ ಕ್ರಿಕೆಟಿಗನಾಗಿದ್ದ ಕಾರಣದಿಂದಾಗಿ ಅವರಂತೆ ಆಡಲು ನಾನು ಪ್ರಯತ್ನಿಸುತ್ತೇನೆ" ಎಂದಿದ್ದಾರೆ ಬಾಬರ್ ಅಜಂ.

ಫಿಫಾ ವಿಶ್ವಕಪ್ 2022: ಈಕ್ವೆಡಾರ್ ಸೋಲಿಸಿ 20 ವರ್ಷಗಳ ನಂತರ ನಾಕೌಟ್ ಹಂತ ತಲುಪಿದ ಸೆನೆಗಲ್

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿ

ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿ

ಇನ್ನು ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮುಖಾಮುಖಿಯಾಗಲಿದ್ದು ಡಿಸೆಂಬರ್ 1ರಿಂದ ಮೊದಲ ಪಂದ್ಯ ಆರಂಭವಾಗಲಿದೆ. ರಾವಲ್ಪಿಂಡಿಯ ರಾವಲ್ಪಿಂಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಮೊದಲ ಪಂದ್ಯ ನಡೆಯಲಿದ್ದು ಕುತೂಹಲ ಮೂಡಿಸಿದೆ. ಇನ್ನು ತವರಿನಲ್ಲಿ ನಡೆದ ಟಿ20 ಸರಣಿಯಲ್ಲಿ 3-4 ಅಂತರದಿಂದ ಇಂಗ್ಲೆಂಡ್ ತಂಡಕ್ಕೆ ಶರಣಾಗಿದ್ದ ಪಾಕಿಸ್ತಾನ ಟೆಸ್ಟ್ ಸರಣಿಯ ಮೂಲಕ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದೆ. ಮತ್ತೊಂದೆಡೆ ಇಂಗ್ಲೆಂಡ್ ತಂಡ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್‌ನಲ್ಲಿ ಚಾಂಪಿಯನ್ ಪಟ್ಟಕ್ಕೇರಿದ್ದರೂ ಬಳಿಕ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ವೈಟ್‌ವಾಶ್ ಮುಖಭಂಗಕ್ಕೆ ಒಳಗಾಗಿತ್ತು ಎಂಬುದು ಗಮನಾರ್ಹ.

Story first published: Wednesday, November 30, 2022, 14:10 [IST]
Other articles published on Nov 30, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X