ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದಿಂದ ಸಹಾಯ ಪಡೆದು ತಿರುಗಿ ಬಿದ್ದ ಅಫ್ರಿದಿ ವಿರುದ್ಧ ಕೆಂಡ ಕಾರಿದ ಪಾಕ್ ಮಾಜಿ ಸ್ಪಿನ್ನರ್

Pakistan Spinner Danish Kaneria Slams Shahid Afridi For Speech In Pok

ಪಾಕಿಸ್ತಾನದ ಮಾಜಿ ಆಟಗಾರ ಶಾಹಿದ್ ಅಫ್ರಿದಿ ಇತ್ತೀಚೆಗೆ ಪಿಒಕೆಯಲ್ಲಿ ಮಾತನಾಡುತ್ತಾ ಭಾರತದ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಹೇಳಿಕೆಯನ್ನು ನೀಡಿದ್ದರು. ಈ ಹೇಳಿಕೆಗೆ ಭಾರತದ ಕ್ರಿಕೆಟಿಗರಾದ ಗೌತಮ್ ಗಂಭೀರ್ ಹರ್ಭಜನ್ ಸಿಂಗ್ ಯುವರಾಜ್ ಸಿಂಗ್ ಸುರೇಶ್ ರೈನಾ ಸೇರಿ ಹಲವರು ಕಟು ಮಾತುಗಳಲ್ಲಿ ಅಫ್ರಿದಿಯನ್ನು ಟೀಕಿಸಿದ್ದರು.

ಈಗ ಸ್ವತಃ ಪಾಕಿಸ್ತಾನದ ಮಾಜಿ ಸ್ಪಿನ್ನರ್ ಕೂಡ ಶಾಹಿದ್ ಅಫ್ರಿದಿ ನಿಲುವು ಮತ್ತು ಹೇಳಿಕೆಯನ್ನು ಖಂಡಿಸಿದ್ದಾರೆ. ಜೊತೆಗೆ ಇದು ಯಾವ ರೀತಿಯ ಗೆಳೆತನ ನಿಮ್ಮದು ಎಂದು ಹೀಯಾಳಿಸಿದ್ದಾರೆ. ಪಾಕಿಸ್ತಾನದ ಮಾಜಿ ಸ್ಪಿನ್ನರ್ ದಾನೀಶ್ ಕನೇರಿಯ ಶಾಹಿದ್ ಅಫ್ರಿದಿ ವಿರುದ್ಧ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

ಭಾರತದ ಕ್ರಿಕೆಟಿಗರ ಜೊತೆಗೆ ಅಫ್ರಿದಿ ಗೆಳೆತನ

ಭಾರತದ ಕ್ರಿಕೆಟಿಗರ ಜೊತೆಗೆ ಅಫ್ರಿದಿ ಗೆಳೆತನ

ಭಾರತದ ಕ್ರಿಕೆಟಿಗರ ಜೊತೆಗೆ ಉತ್ತಮ ಬಾಂದವ್ಯವನ್ನು ಅಫ್ರಿದಿ ಹೊಂದಿದ್ದರು. ಅಫ್ರಿದಿ ಪರವಾಗಿ ಭಾರತದ ಕ್ರಿಕೆಟಿಗರಾದ ಯುವರಾಜ್ ಸಿಂಗ್ ಮತ್ತು ಹರ್ಭಜನ್ ಸಿಂಗ್ ದೇಣಿಗೆ ಸಂಗ್ರಹಕ್ಕೆ ಸಹಕಾರ ನೀಡುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದರು. ಹಾಗಿದ್ದರೂ ಅಫ್ರಿದಿ ರೀತಿ ಆಡಿದ ಮಾತುಗಳನ್ನು ಉದ್ದೇಶಿಸಿ ಕನೇರಿಯ ಅಫ್ರಿದಿ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

ರಾಜಕಾರಣಿಯಂತೆ ಮಾತಾಡುವುದಾದರೆ ಕ್ರಿಕೆಟ್‌ನಿಂದ ದೂರವಿರಿ

ರಾಜಕಾರಣಿಯಂತೆ ಮಾತಾಡುವುದಾದರೆ ಕ್ರಿಕೆಟ್‌ನಿಂದ ದೂರವಿರಿ

ಶಾಹಿದ್ ಅಫ್ರಿದಿ ಯಾವುದೇ ವಿಚಾರವಾಗಿ ಮಾತನಾಡುವುದಾದರೂ ಮತ್ತೊಂದು ಬಾರಿ ಯೋಚಿಸಬೇಕು. ಅವರು ರಾಜಕಾರಣವನ್ನು ಪ್ರವೇಶಿಸಬೇಕು ಎಂದುಕೊಂಡಿದ್ದರೆ ಕ್ರಿಕೆಟ್ ಜೊತೆಗಿನ ಎಲ್ಲಾ ನಂಟನ್ನು ಬಿಟ್ಟು ಬಿಡಬೇಕು. ರಾಜಕಾರಣಿಯ ರೀತಿ ಮಾತನ್ನಾಡುವಾಗ ಕ್ರಿಕೆಟ್‌ನಿಂದ ದೂರವಿರುವುದು ಉತ್ತಮ ಎಂದು ಕನೇರಿಯಾ ಹೇಳಿಕೆಯನ್ನು ನೀಡಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಕೆಟ್ಟ ಅಭಿಪ್ರಾಯ

ಪಾಕಿಸ್ತಾನ ಕ್ರಿಕೆಟ್ ಬಗ್ಗೆ ಕೆಟ್ಟ ಅಭಿಪ್ರಾಯ

ಈ ರೀತಿಯಲ್ಲಿ ಮಾತನ್ನಾಡುವುದರಿಂದ ಪಾಕಿಸ್ತಾನ ಕ್ರಿಕೆಟ್ ಬಗ್ಗೆ ನಕಾರಾತ್ಮಕ ಭಾವನೆ ಮೂಡುತ್ತದೆ. ಭಾರತದಲ್ಲಿ ಮಾತ್ರಲ್ಲ ವಿಶ್ವ ಕ್ರಿಕೆಟ್‌ನ ಮೇಲು ಇದು ಪರಿಣಾಮವನ್ನು ಬೀರುತ್ತದ ಎಂದು ಅಭಿಪ್ರಾಯಪಟ್ಟಿದ್ದಾರೆ ದಾನೀಶ್ ಕನೇರಿಯ. ಇಂಡಿಯಾ ಟಿವಿ ಜೊತೆಗೆ ಮಾತನಾಡಿದ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಸಹಕಾರ ಸಿಕ್ಕ ನಂತರ ನಕಾರಾತ್ಮಕ ಮಾತು

ಸಹಕಾರ ಸಿಕ್ಕ ನಂತರ ನಕಾರಾತ್ಮಕ ಮಾತು

ಆತ ಭಾರತೀಯರಿಂದ ಸಹಕಾರವನ್ನು ಬೇಡುವಂತೆ ಟೀಮ್ ಇಂಡಿಯಾ ಕ್ರಿಕೆಟಿಗರಲ್ಲಿ ಕೇಳಿಕೊಂಡಿದ್ದ. ಆದರೆ ಸಹಕಾರ ಸಿಕ್ಕ ಬಳಿಕ ಅವರ ದೇಶ ಮತ್ತು ಪ್ರಧಾನಿ ಬಗ್ಗೆ ನಕಾರಾತ್ಮಕವಾಗಿ ಮಾತನಾಡಿ ಮುಕ್ತಾಯಗೊಳಿಸಿದ. ಇದು ಯಾವ ರೀತಿಯ ಗೆಳೆತನ ಎಂದು ದಾನಿಶ್ ಕನೆರಿಯ ಪ್ರಶ್ನಿಸಿದ್ದಾರೆ.

Story first published: Tuesday, May 26, 2020, 12:59 [IST]
Other articles published on May 26, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X