ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪೇಶ್ವರ್ ಝಲ್ಮಿ ಸೋಲಿಸಿ ಪಿಎಸ್‌ಎಲ್ ಚೊಚ್ಚಲ ಟ್ರೋಫಿ ಎತ್ತಿದ ಮುಲ್ತಾನ್ ಸುಲ್ತಾನ್

Pakistan Super League 2021: Multan Sultans Beat Peshawar Zalmi To Win Maiden Title

ಅಬುಧಾಬಿ: ಅಬುಧಾಬಿಯ ಶೈಕ್ ಝಾಯೆದ್ ಸ್ಟೇಡಿಯಂನಲ್ಲಿ ನಡೆದ ಪಾಕಿಸ್ತಾನ್ ಸೂಪರ್ ಲೀಗ್ (ಪಿಎಸ್‌ಎಲ್) ಫೈನಲ್ ಪಂದ್ಯದಲ್ಲಿ ಪೇಶ್ವರ್ ಝಲ್ಮಿ ಸೋಲಿಸಿರುವ ಮುಲ್ತಾನ್ ಸುಲ್ತಾನ್ಸ್‌ ಚೊಚ್ಚಲ ಬಾರಿಗೆ ಚಾಂಪಿಯನ್ಸ್ ಪಟ್ಟ ಅಲಂಕರಿಸಿದೆ. ಫೈನಲ್‌ನಲ್ಲಿ ಸೊಹೈಬ್ ಮಕ್ಸೂದ್, ರಿಲೀ ರೊಸ್ಸೌ ಬ್ಯಾಟಿಂಗ್‌ ಕೊಡುಗೆಯೊಂದಿಗೆ ಸುಲ್ತಾನ್ 47 ರನ್ ಜಯ ಗಳಿಸಿದೆ.

World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಮುಲ್ತಾನ್‌ ಸುಲ್ತಾನ್ಸ್‌ನಿಂದ ಶಾನ್ ಮಸೂದ್ 37, ಮೊಹಮ್ಮದ್ ರಿಝ್ವಾನ್ 30, ಸೊಹೈಬ್ ಮಕ್ಸೂದ್ 65 (35 ಎಸೆತ), ರಿಲೀ ರೊಸ್ಸೌ 50 (21), ಖುಷ್ದಿಲ್ ಶಾ 15 ರನ್ ಸೇರಿಸಿದರು. ಸುಲ್ತಾನ್ 20 ಓವರ್‌ಗೆ 4 ವಿಕೆಟ್ ನಷ್ಟದಲ್ಲಿ 206 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಪೇಶ್ವರ್ ಝಲ್ಮಿ, ಕಮ್ರನ್ ಅಕ್ಮಲ್ 36, ಶೋಯೆಬ್ ಮಲಿಕ್ 48 (28 ಎಸೆತ), ರೋಮನ್ ಪೊವೆಲ್ 23, ಶರ್ಪೇನ್ ರುದಫೋರ್ಡ್ 18, ಅಮದ್ ಬಟ್ 7, ಸಮೀನ್ ಗುಲ್ 7 ರನ್‌ನೊಂದಿಗೆ 20 ಓವರ್‌ಗೆ 9 ವಿಕೆಟ್ ಕಳೆದು 159 ರನ್ ಗಳಿಸಿತು.

ವಿರಾಟ್ ಕೊಹ್ಲಿ ಶತಕ ಬಾರಿಸದೆ ಎಷ್ಟು ವರ್ಷಗಳಾಗಿವೆ? ಅಂಕಿ-ಅಂಶಗಳು ಹೇಗಿವೆ ನೋಡಿ!ವಿರಾಟ್ ಕೊಹ್ಲಿ ಶತಕ ಬಾರಿಸದೆ ಎಷ್ಟು ವರ್ಷಗಳಾಗಿವೆ? ಅಂಕಿ-ಅಂಶಗಳು ಹೇಗಿವೆ ನೋಡಿ!

ಮುಲ್ತಾನ್ ಸುಲ್ತಾನ್ಸ್‌ ಇನ್ನಿಂಗ್ಸ್‌ನಲ್ಲಿ ಪೇಶ್ವರ್ ಝಲ್ಮಿಯ ಸಮೀನ್ ಗುಲ್ 2, ಮೊಹಮ್ಮದ್ ಇಮ್ರಾನ್ 2 ವಿಕೆಟ್ ಪಡೆದರೆ, ಇಮ್ರಾನ್ ಖಾನ್ 2, ಬ್ಲೆಸಿಂಗ್ ಮುಝರ್ಬಾನಿ 2, ಇಮ್ರಾನ್ ತಾಹಿರ್ 3, ಸೊಹೈಲ್ ತನ್ವೀರ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಸೊಹೈಲ್ ಮಕ್ಸೂದ್‌ಗೆ ಪಂದ್ಯಶ್ರೇಷ್ಠ, ಸರಣಿಶ್ರೇಷ್ಠ ಪ್ರಶಸ್ತಿಗಳು ಲಭಿಸಿದವು.

Story first published: Friday, June 25, 2021, 20:09 [IST]
Other articles published on Jun 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X