ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

8 ತಿಂಗಳ ಬಳಿಕ ಪಾಕಿಸ್ತಾನ್ ಸೂಪರ್‌ ಲೀಗ್‌ಗೆ ಮರು ಚಾಲನೆ

Pakistan Super League playoffs resume after 8-month delay

ಕರಾಚಿ: ಕೊರೊನಾ ವೈರಸ್ ಭೀತಿ ವಿಶ್ವವನ್ನು ಕಾಡತೊಡಗಿದಾಗ ನಿಲುಗಡೆಯಾಗಿದ್ದ ಪಾಕಿಸ್ತಾನ್ ಸೂಪರ್ ಲೀಗ್ ಸುಮಾರು 8 ತಿಂಗಳ ಬಳಿಕ ಮತ್ತೆ ಮರು ಚಾಲನೆಗೊಳ್ಳಲಿದೆ. ನವೆಂಬರ್ 14ರ ಶನಿವಾರದಿಂದ ಪಿಎಸ್‌ಎಲ್ ಪ್ಲೇ ಆಫ್ ಹಂತದ ಪಂದ್ಯಗಳು ಚಾಲನೆಗೊಳ್ಳಲಿವೆ.

ಕೊರೊನಾ ಆರಂಭವಾದಾಗ ಪಾಕಿಸ್ತಾನ್ ಸೂಪರ್‌ ಲೀಗ್‌ನ ಲೀಗ್‌ ಹಂತದ ಪಂದ್ಯಗಳು ಮುಕ್ತಾಯ ಹಂತದಲ್ಲಿತ್ತು. ಕೊರೊನಾ ಭೀತಿ ಶುರುವಾದಾಗಲೂ ಪಿಎಸ್‌ಎಲ್ ನಡೆಯುತ್ತಲೇ ಇತ್ತು. ಕೊನೆಗೆ ಆಟಗಾರರ ಒತ್ತಾಯದ ಮೇರೆಗೆ ಟೂರ್ನಿ ನಿಲ್ಲಿಸುವ ನಿರ್ಧಾರಕ್ಕೆ ಪಿಸಿಬಿ ಬಂದಿತ್ತು.

ಕೊರೊನಾವೈರಸ್ ಅಂತಿಮ ಪರೀಕ್ಷೆಯಲ್ಲೂ ವೆಸ್ಟ್ ಇಂಡೀಸ್ ಪಾಸ್ಕೊರೊನಾವೈರಸ್ ಅಂತಿಮ ಪರೀಕ್ಷೆಯಲ್ಲೂ ವೆಸ್ಟ್ ಇಂಡೀಸ್ ಪಾಸ್

ಶನಿವಾರದಿಂದ ಆರಂಭವಾಗುವ ಪ್ಲೇ ಆಫ್ ಪಂದ್ಯಗಳಲ್ಲಿ ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ತಮ್ಮ ಚೊಚ್ಚಲ ಟ್ರೋಫಿ ಗೆಲ್ಲಲು ಮುಲ್ತಾನ್ ಸುಲ್ತಾನ್ಸ್, ಕರಾಚಿ ಕಿಂಗ್ಸ್, ಲಾಹೋರ್ ಕಲಂದರ್ಸ್ ತಂಡಗಳಿಗೆ ಅವಕಾಶವಿದೆ. ಟೂರ್ನಿಯ ನಾಲ್ಕನೇ ತಂಡ ಪೇಶ್ವರ್ ಝಲ್ಮಿ 2017ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

ಮೊದಲ ಕ್ವಾಲಿಫೈಯರ್‌ನಲ್ಲಿ ಮುಲ್ತಾನ್ ಸುಲ್ತಾನ್ ಮತ್ತು ಕರಾಚಿ ಕಿಂಗ್ಸ್ ತಂಡಗಳು ಕಾದಾಡಲಿವೆ. ಇಲ್ಲಿ ಗೆಲ್ಲುವ ತಂಡ ಫೈನಲ್‌ಗೆ ಅರ್ಹತೆ ಗಿಟ್ಟಿಸಿಕೊಳ್ಳಲಿದೆ. ಸೋಲುವ ತಂಡಕ್ಕೆ ಎರಡನೇ ಅವಕಾಶವಿದೆ. ಅದು ಲಾಹೋರ್ ಮತ್ತು ಪೇಶ್ವರ್ ನಡುವಿನ ಎಲಿಮಿನೇಟರ್‌ನಲ್ಲಿ ಗೆಲ್ಲುವ ತಂಡದ ವಿರುದ್ಧ ಎರಡನೇ ಕ್ವಾಲಿಫೈಯರ್‌ನಲ್ಲಿ ಸ್ಪರ್ಧಿಸಲಿದೆ.

Story first published: Saturday, November 14, 2020, 9:49 [IST]
Other articles published on Nov 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X