ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕಿಸ್ತಾನ ತಂಡದಲ್ಲಿ ಕ್ರಿಕೆಟಿಗರಿಗಿಂತ ಹೆಚ್ಚಾಗಿ ರೆಸ್ಲರ್‌ಗಳು ಇದ್ದಾರೆ: ಪಾಕ್ ಮಾಜಿ ಕ್ರಿಕೆಟಿಗನ ವ್ಯಂಗ್ಯ

Pakistan t20 cricket team has more wrestlers than cricketers says Aaqib Javed

ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ 0-3 ಅಂತರದಿಂದ ಪಾಕಿಸ್ತಾನ ಸೋಲು ಕಂಡ ನಂತರ ಪಾಕ್ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಪಾಕಿಸ್ತಾನ ಕ್ರಿಕೆಟ್ ತಮಡದ ಅಭಿಮಾನಿಗಳು ಹಾಗೂ ಮಾಜಿ ಕ್ರಿಕೆಟಿಗರು ತಂಡದ ಪ್ರದರ್ಶನದ ಬಗ್ಗೆ ಹರಿಹಾಯುತ್ತಿದ್ದಾರೆ. ಕೊರೊನಾವೈರಸ್ ಕಾರಣದಿಂದಾಗಿ ಸಂಪೂರ್ಣ ಹೊಸ ತಂಡ ಪಾಕ್ ವಿರುದ್ಧ ಕಣಕ್ಕಿಳಿದಿದ್ದರೂ ಪಾಕ್ ತಂಡದ ಪ್ರದರ್ಶನ ಪ್ರಶ್ನಾರ್ಹವಾಗಿದೆ.

ಈ ಮಧ್ಯೆ ಪಾಕಿಸ್ತಾನ ಹಾಗೂ ಇಂಗ್ಲೆಂಡ್ ತಂಡಗಳು ಟಿ20 ಸರಣಿಗೆ ಸಜ್ಜಾಗಿದೆ. ಈ ಸರಣಿಯಲ್ಲಿ ಪಾಲ್ಗೊಳ್ಳುವ ಪಾಕಿಸ್ತಾನ ತಂಡದ ಆಟಗಾರರ ಬಗ್ಗೆ ಸ್ವತಃ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಟೀಕೆಯನ್ನು ಮಾಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ತಂಡದಲ್ಲಿ ನಾನು ಕ್ರಿಕೆಟರ್‌ಗಳಿಗಿಂತ ಹೆಚ್ಚಾಗಿ ರೆಸ್ಲರ್‌ಗಳನ್ನು ನೋಡುತ್ತಿದ್ದೇನೆ ಎಂದಿದ್ದಾರೆ.

ಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್‌ ಜಾಗಕ್ಕೆ ಕೆಎಲ್ ರಾಹುಲ್ ಆಯ್ಕೆಅಭ್ಯಾಸ ಪಂದ್ಯದಲ್ಲಿ ರಿಷಭ್ ಪಂತ್‌ ಜಾಗಕ್ಕೆ ಕೆಎಲ್ ರಾಹುಲ್ ಆಯ್ಕೆ

ಪಾಕ್ ತಂಡದ ಬಗ್ಗೆ ಆಕಿಬ್ ಜಾವೇದ್ ಟೀಕೆ

ಪಾಕ್ ತಂಡದ ಬಗ್ಗೆ ಆಕಿಬ್ ಜಾವೇದ್ ಟೀಕೆ

ಪಾಕಿಸ್ತಾನ ಅಂಡರ್ 19 ತಂಡದ ಮುಖ್ಯ ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದ ಅನುಭವವಿರುವ ಆಕಿಬ್ ಜಾವೇದ್ ಈ ಮಾತುಗಳನ್ನು ಆಡಿದ್ದಾರೆ. ಆಕಿಬ್ ಜಾವೇದ್ ಆಡಿದ ಈ ಮಾತುಗಳಿಗೆ ಕಾರಣ ಟಿ20 ಸರಣಿಗೆ ಆಯ್ಕೆಯಾಗಿರುವ ಪಾಕಿಸ್ತಾನ ತಂಡದ ಆಟಗಾರರ ಫಿಟ್‌ನೆಸ್. ಈ ಸಂದರ್ಭದಲ್ಲಿ ಅವರು ಪಾಕಿಸ್ತಾನ ಆಯ್ಕೆ ಸಮಿತಿಯ ನಿರ್ಧಾರಕ್ಕೂ ಟೀಕೆಯನ್ನು ಮಾಡಿದ್ದು ಪಾಕಿಸ್ತಾನ ಮ್ಯಾನೇಜ್‌ಮೆಂಟ್ ಸೂಕ್ತವಾದ ನಿಯಮ ಹಾಗೂ ಯೋಜನೆಯನ್ನೇ ಹೊಂದಿಲ್ಲ ಎಂದಿದ್ದಾರೆ.

ಕ್ರಿಕೆಟಿಗರಿಗಿಂತ ಹೆಚ್ಚು ರೆಸ್ಲರ್‌ಗಳು ಇದ್ದಾರೆ

ಕ್ರಿಕೆಟಿಗರಿಗಿಂತ ಹೆಚ್ಚು ರೆಸ್ಲರ್‌ಗಳು ಇದ್ದಾರೆ

"ಮ್ಯಾನೇಜ್‌ಮೆಂಟ್ ಹಾಗೂ ಆಯ್ಕೆಗಾರರಿಗೆ ಅವರು ಏನು ಮಾಡುತ್ತಿದ್ದಾರೆ, ಅವರ ದಾರಿ ಯಾವ ರೀತಿಯಾಗಿ ಸಾಗಬೇಕು ಎಂಬುದು ತಿಳಿದಿಲ್ಲ. ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ನಾನು ಕ್ರಿಕೆಟಿಗರಿಗಿಂತ ಹೆಚ್ಚಾಗಿ ರೆಸ್ಲರ್‌ಗಳನ್ನು ನೋಡುತ್ತಿದ್ದೇನೆ" ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಆಟಗಾರರ ಫಿಟ್‌ನೆಸ್ ಬಗ್ಗೆ ಜಾವೇದ್ ಪ್ರಶ್ನೆಯನ್ನು ಮಾಡಿದ್ದಾರೆ.

ಅಗತ್ಯ ಫಿಟ್‌ನೆಸ್ ಇಲ್ಲ

ಅಗತ್ಯ ಫಿಟ್‌ನೆಸ್ ಇಲ್ಲ

ಜಿಯೋ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಈ ಮಾತುಗಳನ್ನು ಹೇಳಿದ್ದಾರೆ. ಈ ಸಮದರ್ಭದಲ್ಲಿ ಕೆಲ ಕ್ರಿಕೆಟಿಗರ ಹೆಸರುಗಳನ್ನು ಹೇಳಿರುವ ಆಕಿಬ್ ಜಾವೇದ್ ಈ ಆಟಗಾರರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಆಡಲು ಅಗತ್ಯವಾದ ಫಿಟ್‌ನೆಸ್ ಸಾಮರ್ಥ್ಯವನ್ನು ಹೊಂದಿಲ್ಲ ಎಂದಿದ್ದಾರೆ. "ಪಾಕಿಸ್ತಾನ ಟಿ20 ತಂಡದಲ್ಲಿರುವ ಶಾರ್ಜೀಲ್ ಖಾನ್, ಅಜಂ ಖಾನ್ ಹಾಗೂ ಸೋಹೈಬ್ ಮಾಕ್ಸೂದ್ ಅವರ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಆಡಲು ಅಗತ್ಯವಿರುವ ಫಿಟ್‌ನೆಸ್ ಸಾಮರ್ಥ್ಯದ ಬಗ್ಗೆ ಪ್ರಶ್ನೆಗಳು ಮೂಡುತ್ತವೆ" ಎಂದು ಹೇಳಿಕೆ ನೀಡಿದ್ದಾರೆ.

ಪಾಕ್ ಆಯ್ಕೆ ಮಂಡಳಿಯ ನಿರ್ಧಾರದ ಬಗ್ಗೆ ಪ್ರಶ್ನೆ

ಪಾಕ್ ಆಯ್ಕೆ ಮಂಡಳಿಯ ನಿರ್ಧಾರದ ಬಗ್ಗೆ ಪ್ರಶ್ನೆ

ಪಾಕಿಸ್ತಾನ ಕ್ರಿಕೆಟ್ ತಂಡ ಸದ್ಯ ಸೀಮಿತ ಓವರ್‌ಗಳ ಸರಣಿಯನ್ನಾಡಲು ಇಂಗ್ಲೆಂಡ್‌ನಲ್ಲಿದೆ. ಈ ಸಂದರ್ಭದಲ್ಲಿ ಆಕಿಬ್ ಜಾವೇದ್ ಆಯ್ಕೆ ಸಮಿತಿಯ ಮುಂದಾಲೋಚನೆಯಿಲ್ಲದ ನಿರ್ಧಾರಗಳ ಬಗ್ಗೆಯೂ ಪ್ರಶ್ನಿಸಿದ್ದಾರೆ. "ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ನೀಡಿದ ಪ್ರದರ್ಶನವನ್ನು ನೋಡಿ ಸೋಹೈಬ್ ಮಕ್ಸೂದ್ ಅವರನ್ನು ಪಾಕಿಸ್ತಾನ ಟಿ20 ತಂಡಕ್ಕೆ ಆಯ್ಕೆ ಮಾಡಲಾಗಿದೆ. ಆದರೆ ಅವರು ಯಾವ ಕ್ರಮಾಂಕದಲ್ಲಿ ಆಡಬೇಕೆಂದು ಅವರು ತಿಳಿದುಕೊಂಡೇ ಇಲ್ಲ. ನೀವು ತಂಡವನ್ನು ನೋಡಿದರೆ ಒಂದು ಸ್ಥಾನಕ್ಕೆ ಒಂದೇ ಶೈಲಿಯನ್ನು ಹೊಂದಿರುವ ಸಾಕಷ್ಟು ಆಟಗಾರರು ಇದ್ದಾರೆ. ಇದಾ ನೀವು ತಂಡವನ್ನು ಮುಂದುವರಿಸುವ ರೀತಿ? ಎಂದು ಪ್ರಶ್ನಿಸಿದ್ದಾರೆ.

Story first published: Friday, July 16, 2021, 18:59 [IST]
Other articles published on Jul 16, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X