ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

2021ರಲ್ಲಿ ಪಾಕಿಸ್ತಾನ 10 ದ್ವಿಪಕ್ಷೀಯ ಸರಣಿಗಳ ಆಡಲಿದೆ: ಪಿಸಿಬಿ ಮುಖ್ಯಸ್ಥ

Pakistan to play 10 bilateral series in 2021, says PCB Chief

ಇಸ್ಲಮಾಬಾದ್: ವಿಶ್ವ ಟಿ20 ಕಪ್ ನಿಯೋಜನೆಯ ಹೊರತಾಗಿಯೂ 2021ರಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಒಟ್ಟು 10 ದ್ವಿಪಕ್ಷೀಯ ಸರಣಿಗಳಲ್ಲಿ ಆಡಲಿದೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ (ಪಿಸಿಬಿ) ಮುಖ್ಯಸ್ಥ ಎಹ್ಸಾನ್ ಮನಿ ಹೇಳಿದ್ದಾರೆ. ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯ ಸರಣಿಗಳು ನಿಂತು ಸುಮಾರು 7 ವರ್ಷಗಳು ಕಳೆದಿವೆ. ರಾಜಕೀಯ ಕಾರಣದಿಂದಾಗಿ ಇತ್ತಂಡಗಳ ಮಧ್ಯೆ ಸರಣಿ ನಡೆಯುತ್ತಿಲ್ಲ.

ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ವಿರುದ್ಧ ಆಡೋದೇ ಅದೃಷ್ಟ: ವಿಲಿಯಮ್ಸನ್ವಿರಾಟ್ ಕೊಹ್ಲಿ, ಸ್ಟೀವ್ ಸ್ಮಿತ್ ವಿರುದ್ಧ ಆಡೋದೇ ಅದೃಷ್ಟ: ವಿಲಿಯಮ್ಸನ್

ತಂಡದಲ್ಲಿ ಯಥೇಚ್ಛ ಆಟಗಾರರು ಇರುವುದರಿಂದ 2021ರ ಸೀಸನ್‌ನಲ್ಲಿ ಪಾಕಿಸ್ತಾನ ಒಟ್ಟು ಸುಮಾರು 9 ಟೆಸ್ಟ್ ಪಂದ್ಯಗಳು, 20 ಏಕದಿನ ಪಂದ್ಯಗಳು ಮತ್ತು 39 ಟಿ20ಐ ಪಂದ್ಯಗಳನ್ನು ಆಡಲಿದೆ ಎಂದು ಎಹ್ಸಾನ್ ಮನಿ ಮಾಹಿತಿ ನೀಡಿದ್ದಾರೆ.

ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಪಾಕಿಸ್ತಾನ ತಂಡ ಅಲ್ಲಿ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಡುತ್ತಿದೆ. ಈಗಾಗಲೇ 3 ಪಂದ್ಯಗಳ ಟಿ20ಐ ಸರಣಿ ಮುಕ್ತಾಯಗೊಂಡಿದ್ದು, ನ್ಯೂಜಿಲೆಂಡ್ 2-1ಯ ಜಯ ಗಳಿಸಿದೆ. ಟೆಸ್ಟ್ ಸರಣಿಯಲ್ಲಿ ಕಿವೀಸ್ 1-0ಯ ಮುನ್ನಡೆಯಲ್ಲಿದೆ.

ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್ಅಜಿಂಕ್ಯ ರಹಾನೆ ನಾಯತ್ವದ ಭಾರತ ತಂಡ ಆಸ್ಟ್ರೇಲಿಯಾದಲ್ಲಿ ಗೆಲ್ಲಬೇಕು: ಶೋಯೆಬ್ ಅಖ್ತರ್

ದಕ್ಷಿಣ ಆಫ್ರಿಕಾಕ್ಕೆ ಪಾಕ್‌ ತಂಡವನ್ನು ಆಹ್ವಾನಿಸಿರುವ ದಕ್ಷಿಣ ಆಫ್ರಿಕಾ, ಕೋವಿಡ್-19 ಮತ್ತು ಭದ್ರತೆ ಬಗ್ಗೆ ಮುನ್ನೆಚ್ಚರಿಕೆ ವಹಿಸುವುದಾಗಿ ಹೇಳಿದೆ. ಜನವರಿಯಲ್ಲಿ 2 ಟೆಸ್ಟ್ ಪಂದ್ಯಗಳು ಮತ್ತು 3 ಟಿ20ಐ ಪಂದ್ಯಗಳಿಗಾಗಿ ತನ್ನ ತಂಡವನ್ನೂ ಕಳುಹಿಸುವುದಾಗಿ ಆಫ್ರಿಕಾ ಹೇಳಿರುವುದಾಗಿ ಎಹ್ಸಾನ್ ತಿಳಿಸಿದ್ದಾರೆ.

Story first published: Friday, January 1, 2021, 12:14 [IST]
Other articles published on Jan 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X