ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್- ಆಸ್ಟ್ರೇಲಿಯಾ ಟೆಸ್ಟ್: ಪಾದಾರ್ಪಣೆಯಲ್ಲೇ ವಿಶೇಷ ದಾಖಲೆಗಳು

pakistan vs australia 1st test debutant records

ದುಬೈ, ಅಕ್ಟೋಬರ್ 9: ಆಸ್ಟ್ರೇಲಿಯಾ-ಪಾಕಿಸ್ತಾನ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ವಿಶೇಷ ದಾಖಲೆಗಳನ್ನು ಸೃಷ್ಟಿಸಿದೆ.

ಈ ಪಂದ್ಯದಲ್ಲಿ ನಾಲ್ವರು ಕ್ರಿಕೆಟಿಗರು ಟೆಸ್ಟ್‌ಗೆ ಪಾದಾರ್ಪಣೆ ಮಾಡಿದ್ದು ಒಂದು ವಿಶೇಷವಾದರೆ, ಚೊಚ್ಚಲ ಪಂದ್ಯದಲ್ಲಿಯೇ ಪಾಕಿಸ್ತಾನದ ಆಫ್ ಸ್ಪಿನ್ನರ್ ಬಿಲಾಲ್ ಆಸಿಫ್ 6 ವಿಕೆಟ್ ಕಿತ್ತು ಆಸ್ಟ್ರೇಲಿಯನ್ನರ ದಿಢೀರ್ ಪತನಕ್ಕೆ ಕಾರಣವಾಗಿದ್ದು ಮತ್ತೊಂದು ವಿಶೇಷ.

ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ ಅಭಿಮಾನಿಗಳಿಗೆ ನಿರಾಶೆ! ಭಾರತ ವಿರುದ್ಧದ ಸರಣಿಗೆ ಗೇಲ್ ಇಲ್ಲ

ಪಾಕಿಸ್ತಾನದ ಮೊದಲ ಇನ್ನಿಂಗ್ಸ್‌ಗೆ ಉತ್ತರವಾಗಿ ಆಸ್ಟ್ರೇಲಿಯಾ ಅದ್ಭುತ ಆರಂಭ ಪಡೆದುಕೊಂಡಿತ್ತು. ಆದರೆ, ಮೊದಲ ಟೆಸ್ಟ್ ಆಡುತ್ತಿರುವ ಬಿಲಾಲ್ ಆಸಿಫ್ ಅವರ ಆಫ್ ಸ್ಪಿನ್ ಮೋಡಿಗೆ ತತ್ತರಿಸಿ ಏಕಾಏಕಿ ಪತನ ಕಂಡಿತು.

ಈ ಪಂದ್ಯದ ಕೆಲವು ವಿಶೇಷಗಳು ಇಲ್ಲಿವೆ.

ಆಸ್ಟ್ರೇಲಿಯಾ ಕುಸಿತ

ಆಸ್ಟ್ರೇಲಿಯಾ ಕುಸಿತ

ಮೂರು ಏಕದಿನ ಪಂದ್ಯಗಳನ್ನು ಆಡಿರುವ ಸ್ಪಿನ್ನರ್ ಬಿಲಾಲ್ ಆಸಿಫ್‌ಗೆ ಇದು ಮೊದಲ ಟೆಸ್ಟ್ ಪಂದ್ಯ. ಮೊದಲ ಇನ್ನಿಂಗ್ಸ್‌ನಲ್ಲಿಯೇ ಅವರು ಕೇವಲ 36 ರನ್ ನೀಡಿ 6 ವಿಕೆಟ್‌ ಕಬಳಿಸಿದರು. ಅತ್ಯುತ್ತಮ ಆರಂಭ ಒದಗಿಸಿದ್ದ ಆಸ್ಟ್ರೇಲಿಯಾದ ಹಠಾತ್ ಕುಸಿತಕ್ಕೆ ಅವರು ಕಾರಣರಾದರು. ಮೊದಲ ವಿಕೆಟ್‌ಗೆ 142 ಸೇರಿಸಿದ್ದ ಆಸ್ಟ್ರೇಲಿಯಾ ಓಪನರ್‌ಗಳ ಜೋಡಿ ಬೇರ್ಪಟ್ಟ ಬಳಿಕ ತಂಡ ಉಳಿದ ಒಂಬತ್ತು ವಿಕೆಟ್‌ಗಳಿಗೆ ಸೇರಿಸಿದ್ದು 60 ರನ್‌ಗಳನ್ನು ಮಾತ್ರ. ಒಟ್ಟು ನಾಲ್ಕು ಬ್ಯಾಟ್ಸ್‌ಮನ್‌ಗಳು ಮಾತ್ರ ಎರಡಂಕಿ ಮೊತ್ತ ದಾಟಿದರು.

ಅರ್ಧಶತಕ, ಆರು ವಿಕೆಟ್, ಡಕೌಟ್

ಈ ಪಂದ್ಯದ ಮೂಲಕ ಪಾದಾರ್ಪಣೆ ಮಾಡಿದ ಆಸ್ಟ್ರೇಲಿಯಾದ ಆರೋನ್ ಫಿಂಚ್ 62 ರನ್ ಗಳಿಸಿದರೆ, ಪಾಕ್ ಬೌಲರ್ ಆಸಿಫ್ 36 ರನ್ ನೀಡಿ 6 ವಿಕೆಟ್ ಪಡೆದರು. ಆಸ್ಟ್ರೇಲಿಯಾದ ಇನ್ನಿಬ್ಬರು ಬ್ಯಾಟ್ಸ್‌ಮನ್‌ಗಳಾದ ಟ್ರಾವಿಸ್ ಹೆಡ್ ಮತ್ತು ಮರ್ನಸ್ ಲಾಬುಶ್ಚಗ್ನೆ ಅವರಿಗೂ ಮೊದಲ ಟೆಸ್ಟ್ ಇದು. ಆದರೆ, ಇಬ್ಬರೂ ಖಾತೆ ತೆರೆಯದೆ ಡಕ್‌ಔಟ್ ಆದರು.

ಐಸಿಸಿ ಶ್ರೇಯಾಂಕ: ಅಗ್ರಸ್ಥಾನ ಉಳಿಸಿಕೊಂಡ ಕೊಹ್ಲಿ, ಬೂಮ್ರಾ

ಇತಿಹಾಸದ ವಿಶೇಷ

ಇತಿಹಾಸದ ವಿಶೇಷ

ಪಾದಾರ್ಪಣೆ ಪಂದ್ಯವಾಡಿದ ಟ್ರಾವಿಸ್ ಹೆಡ್ ಮತ್ತು ಮರ್ನಸ್ ಲಾಬುಶ್ಚಗ್ನೆ ಇಬ್ಬರೂ ಮತ್ತೊಬ್ಬ ಪಾದಾರ್ಪಣೆ ಮಾಡಿದ ಆಟಗಾರ ಬಿಲಾಲ್ ಆಸಿಫ್ ಅವರ ಒಂದೇ ಓವರ್‌ನಲ್ಲಿ ಔಟ್‌ ಆಗಿದ್ದು ಬಹುಶಃ ಕ್ರಿಕೆಟ್ ಇತಿಹಾಸದಲ್ಲೇ ಮೊದಲು.

30 ವರ್ಷದಲ್ಲಿ ಒಮ್ಮೆ ಮಾತ್ರ ಫಾಲೋಆನ್

30 ವರ್ಷದಲ್ಲಿ ಒಮ್ಮೆ ಮಾತ್ರ ಫಾಲೋಆನ್

ಆಸ್ಟ್ರೇಲಿಯಾ ಕ್ರಿಕೆಟ್ ತನ್ನ ಕ್ರಿಕೆಟ್ ಇತಿಹಾಸದ ಕಳೆದ 30 ವರ್ಷಗಳಲ್ಲಿ ಫಾಲೋಆನ್‌ಗೆ ಒಳಗಾಗಿದ್ದು ಒಮ್ಮೆ ಮಾತ್ರ. 2005ರಲ್ಲಿ ಟ್ರೆಂಟ್ ಬ್ರಿಡ್ಜ್ ಟೆಸ್ಟ್‌ನಲ್ಲಿ ಇಂಗ್ಲೆಂಡ್ ತಂಡವು ಫಾಲೋಆನ್ ಹೇರಿತ್ತು. ಈ ಪಂದ್ಯದಲ್ಲಿ ಆಸ್ಟ್ರೇಲಿಯಾ 280 ರನ್‌ಗಳ ಹಿನ್ನಡೆ ಅನುಭವಿಸಿದ್ದರಿಂದ ಫಾಲೋಆನ್ ಹೇರುವ ಎಲ್ಲ ಅವಕಾಶ ಪಾಕಿಸ್ತಾನಕ್ಕಿತ್ತು. ಆದರೆ, ಪಾಕಿಸ್ತಾನ ಎರಡನೆಯ ಇನ್ನಿಂಗ್ಸ್ ಆರಂಭಿಸಿತು.

ಬಿಸಿಸಿಐ ವಿರುದ್ಧ ದನಿಯೆತ್ತಿದ ಕರುಣ್, ವಿಜಯ್ ಗೆ ಸಂಕಷ್ಟ?

ಹಿರಿಯ ಆಟಗಾರ ಪಾದಾರ್ಪಣೆ

ಪಾಕಿಸ್ತಾನದ ಡೆಬ್ಯುಟೆಂಟ್ ಬಿಲಾಲ್ ಆಸಿಫ್ ಅವರ ವಯಸ್ಸು 33. 1950ರಿಂದ ಇಲ್ಲಿವರೆಗೂ ಮೊದಲ ಪಂದ್ಯದಲ್ಲೇ ಐದು ವಿಕೆಟ್ ತೆಗೆದ 30 ವರ್ಷ ಮೀರಿದ ಕೆಲವು ಬೌಲರ್‌ಗಳು ಇದ್ದಾರೆ.

31 ವರ್ಷದ ತನ್ವೀರ್ ಅಹ್ಮದ್ ದಕ್ಷಿಣ ಆಫ್ರಿಕಾ ವಿರುದ್ಧ 120/6 ವಿಕೆಟ್ ಪಡೆದಿದ್ದರು. 31 ವರ್ಷದ ದಿಲೀಪ್ ದೋಶಿ ಆಸ್ಟ್ರೇಲಿಯಾ ವಿರುದ್ಧ 103/6 ವಿಕೆಟ್ ಸಾಧನೆ ಮಾಡಿದ್ದರು. 31 ವರ್ಷದ ಅಲೆಕ್ಸ್ ಮೋಯಿರ್ ಇಂಗ್ಲೆಂಡ್ ವಿರುದ್ಧ 155/6 ವಿಕೆಟ್ ಪಡೆದುಕೊಂಡಿದ್ದರು.

ಬಿರಿಯಾನಿ ಪ್ರಿಯ ಕೊಹ್ಲಿ, ಶುದ್ಧ ಶಾಖಾಹಾರಿ ಆಗಿದ್ದೇಕೆ?

Story first published: Tuesday, October 9, 2018, 18:21 [IST]
Other articles published on Oct 9, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X