ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ವಿರುದ್ಧ ನ್ಯೂಜಿಲೆಂಡ್‌ಗೆ ರೋಚಕ ಜಯ ತಂದಿತ್ತ 'ಮುಂಬೈ' ಬೌಲರ್!

ಅಬುದಾಬಿ, ನವೆಂಬರ್ 19: ಯುಎಇಯ ಶೇಖ್ ಜಾಯೇದ್ ಸ್ಟೇಡಿಯಂನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ನ್ಯೂಜಿಲೆಂಡ್ ನಾಲ್ಕು ರನ್‌ಗಳ ರೋಚಕ ಗೆಲುವು ಪಡೆದಿದೆ.

ಸೋಲುವ ಹಂತದಲ್ಲಿದ್ದ ನ್ಯೂಜಿಲೆಂಡ್‌ಗೆ ಮೊದಲ ಅಂತಾರಾಷ್ಟ್ರೀಯ ಪಂದ್ಯ ಆಡುತ್ತಿರುವ ಎಡಗೈ ಸ್ಪಿನ್ನರ್ ಅಜಾಜ್ ಪಟೇಲ್ ಗೆಲುವು ತಂದಿತ್ತರು.

ನಮ್ಮ ಗುರುತನ್ನು ಆಸ್ಟ್ರೇಲಿಯಾದಲ್ಲಿ ಉಳಿಸಲು ಬಯಸಿದ್ದೇವೆ: ರೋ'ಹಿಟ್'ನಮ್ಮ ಗುರುತನ್ನು ಆಸ್ಟ್ರೇಲಿಯಾದಲ್ಲಿ ಉಳಿಸಲು ಬಯಸಿದ್ದೇವೆ: ರೋ'ಹಿಟ್'

ಎರಡನೆಯ ಇನ್ನಿಂಗ್ಸ್‌ನಲ್ಲಿ 59 ರನ್ ನೀಡಿ 5 ವಿಕೆಟ್ ಪಡೆದ ಪಟೇಲ್, ಚೊಚ್ಚಲ ಪಂದ್ಯದಲ್ಲಿಯೇ ಪಂದ್ಯ ಶ್ರೇಷ್ಠ ಗೌರವಕ್ಕೂ ಪಾತ್ರರಾದರು. 30 ವರ್ಷದ ಅಜಾಜ್ ಪಟೇಲ್ ಮುಂಬೈ ಮೂಲದವರು. ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಅವರು, ಮೊದಲ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಕ್ಕೆ ಆಯ್ಕೆಯಾಗಿದ್ದರು.

ಇದರಿಂದ ನ್ಯೂಜಿಲೆಂಡ್ ಮೂರು ಟೆಸ್ಟ್‌ಗಳ ಸರಣಿಯಲ್ಲಿ 1-0ಯ ಮುನ್ನಡೆ ಸಾಧಿಸಿದೆ. 176 ರನ್‌ಗಳ ಗುರಿ ಬೆನ್ನತ್ತಿದ್ದ ಪಾಕಿಸ್ತಾನ, ಒಂದು ಹಂತದಲ್ಲಿ 130ಕ್ಕೆ ಕೇವಲ ಮೂರು ವಿಕೆಟ್ ಕಳೆದುಕೊಂಡಿತ್ತು. ಆದರೆ ಗೆಲುವಿಗೆ ಕೇವಲ ನಾಲ್ಕು ರನ್ ಬೇಕಿರುವಾಗ 171 ರನ್‌ಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.

ರಣಜಿ : ಮುಂಬೈ ವಿರುದ್ಧದ ಪಂದ್ಯಕ್ಕೆ ಕರುಣ್, ಸಮರ್ಥ್ ಇಲ್ಲ ರಣಜಿ : ಮುಂಬೈ ವಿರುದ್ಧದ ಪಂದ್ಯಕ್ಕೆ ಕರುಣ್, ಸಮರ್ಥ್ ಇಲ್ಲ

ಒಂಬತ್ತನೇ ವಿಕೆಟ್ ಪತನಗೊಂಡಿದ್ದಾಗ ಪಾಕಿಸ್ತಾನ ತಂಡಕ್ಕೆ ಗೆಲುವಿಗೆ ಇನ್ನೂ 12 ರನ್‌ಗಳ ಅವಶ್ಯಕತೆ ಇತ್ತು. ಒಂದೆಡೆ ಕ್ರೀಸ್‌ಗೆ ಅಂಟಿ ಕುಳಿತಿದ್ದ ಅಜರ್ ಅಲಿ ಮೇಲೆ ಪಾಕಿಸ್ತಾನ ಭರವಸೆ ಹೊಂದಿತ್ತು. ಮತ್ತೊಂದೆಡೆ ಅನನುಭವಿ ಮೊಹಮ್ಮದ್ ಅಬ್ಬಾಸ್ ಅವರನ್ನು ಇರಿಸಿಕೊಂಡು ಅಜರ್ ಅಲಿ ಗೆಲುವಿನ ದಡ ಸೇರಿಸುವ ಸೂಚನೆ ನೀಡಿದ್ದರು.

ಅಜರ್ ಅಲಿಗೆ ಸಾಥ್ ನೀಡಿದ್ದ ಅಬ್ಬಾಸ್, ಖಾತೆ ತೆರೆಯದೆ ಇದ್ದರೂ ಹತ್ತು ಎಸೆತಗಳನ್ನು ಸಮರ್ಥವಾಗಿ ಎದುರಿಸಿ ವಿಕೆಟ್ ಉಳಿಸಿಕೊಂಡಿದ್ದರು.

ಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತಮಹಿಳಾ ಟಿ20: ಆಸ್ಟ್ರೇಲಿಯಾ ತಂಡವನ್ನು 48 ರನ್‌ನಿಂದ ಕೆಡವಿದ ಭಾರತ

ಜಯಕ್ಕೆ ನಾಲ್ಕು ರನ್‌ಗಳು ಮಾತ್ರ ಬೇಕಿದ್ದಾಗಲೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸ್ ತಮ್ಮ ಚೊಚ್ಚಲ ಪಂದ್ಯವಾಡುತ್ತಿರುವ ಅಜಾಜ್ ಪಟೇಲ್ ಮೇಲೆ ಭರವಸೆ ಇರಿಸಿ ಅವರಿಗೆ ಚೆಂಡು ಹಸ್ತಾಂತರಿಸಿದರು.

ಕೊನೆಯ ಓವರ್ ನಾಲ್ಕು ಎಸೆತ

ಕೊನೆಯ ಓವರ್ ನಾಲ್ಕು ಎಸೆತ

ಮೊದಲ ಮೂರು ಎಸೆತಗಳಲ್ಲಿ ಅಜರ್ ಅಲಿ ಯಾವುದೇ ರನ್ ಗಳಿಸಲಿಲ್ಲ. ನಾಲ್ಕನೆಯ ಎಸೆತ ಅಜರ್ ಅಲಿ ಅವರ ಪ್ಯಾಡ್‌ಗೆ ಅಪ್ಪಳಿಸಿತು. ನ್ಯೂಜಿಲೆಂಡ್ ಎಲ್‌ಬಿಡಬ್ಲ್ಯೂ ಮನವಿಗೆ ಸ್ಪಂದಿಸಿದ ಅಂಪೈರ್ ಔಟ್ ಎಂದು ತೀರ್ಪಿತ್ತರು. ಅಜರ್ ಅಲಿ ತಮಗಿದ್ದ ತೀರ್ಪು ಮರುಪರಿಶೀಲನಾ ಸವಲತ್ತನ್ನು ಬಳಸಿಕೊಂಡರೂ ಅದರಿಂದ ಲಭ್ಯವಾಗಲಿಲ್ಲ. ಹೀಗೆ ತಮ್ಮ ಮೊದಲ ಪಂದ್ಯದಲ್ಲಿಯೇ ಅಜಾಜ್ ಪಟೇಲ್ ತಂಡಕ್ಕೆ ಸ್ಮರಣೀಯ ಗೆಲುವು ತಂದಿತ್ತರು.

ಅತಿ ಸಮೀಪದ ಗೆಲುವುಗಳು

1 ರನ್- ವೆಸ್ಟ್ ಇಂಡೀಸ್ vs ಆಸ್ಟ್ರೇಲಿಯಾ
2 ರನ್- ಇಂಗ್ಲೆಂಡ್ vs ಆಸ್ಟ್ರೇಲಿಯಾ
3 ರನ್ ಆಸ್ಟ್ರೇಲಿಯಾ vs ಇಂಗ್ಲೆಂಡ್
3 ರನ್ ಇಂಗ್ಲೆಂಡ್ vs ಆಸ್ಟ್ರೇಲಿಯಾ
4 ರನ್ ನ್ಯೂಜಿಲೆಂಡ್ vs ಪಾಕಿಸ್ತಾನ

ಅತಿ ಕೆಟ್ಟ ಚೇಸಿಂಗ್

ಕಳೆದ ಹಲವು ವರ್ಷಗಳಿಂದ ರನ್ ಚೇಸಿಂಗ್‌ನಲ್ಲಿ ಕೆಟ್ಟ ಆಟವಾಡುತ್ತಿದೆ. ತುಂಬಾ ಸಲ ಕೆಟ್ಟದಾಗಿ ಆಡಿದೆ. ಆದರೆ, ಇದಕ್ಕಿಂತ ಕೆಟ್ಟ ಆಟವನ್ನು ಹಿಂದೆಂದೂ ನೋಡಿಲ್ಲ ಎಂದು ಸಾಜ್ ಸಾದಿಕ್ ಎಂಬುವವರು ಹೇಳಿದ್ದಾರೆ.

ಅದ್ಭುತ ಪಂದ್ಯ

ಅದ್ಭುತ ಆಟ. ನ್ಯೂಜಿಲೆಂಡ್ ತಂಡದವರು ಕೊನೆಯವರೆಗೂ ಪಂದ್ಯ ಉಳಿಸಿಕೊಂಡು ಉತ್ತಮವಾಗಿ ಆಡಿದರು. ಓ ಡಿಯರ್ ಪಾಕಿಸ್ತಾನ್! ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿದ್ದಾರೆ.

ಅದ್ಭುತ ಪಂದ್ಯ

ಅದ್ಭುತ ಆಟ. ನ್ಯೂಜಿಲೆಂಡ್ ತಂಡದವರು ಕೊನೆಯವರೆಗೂ ಪಂದ್ಯ ಉಳಿಸಿಕೊಂಡು ಉತ್ತಮವಾಗಿ ಆಡಿದರು. ಓ ಡಿಯರ್ ಪಾಕಿಸ್ತಾನ್! ಎಂದು ಶ್ರೀಲಂಕಾದ ಮಾಜಿ ಕ್ರಿಕೆಟಿಗ ರಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿದ್ದಾರೆ.

ಪಾಕ್ ಕಾಲೆಳೆದ ಕೈಫ್

ಗೆಲ್ಲಲು 176 ರನ್ ಬೇಕಿದ್ದಾಗ 147/4 ಇದ್ದ ಸ್ಥಿತಿಯಿಂದ ಪಾಕಿಸ್ತಾನ ಸೋಲು ಅನುಭವಿಸಲು ನ್ಯೂಜಿಲೆಂಡ್ ಮಾತ್ರವಲ್ಲ, ಪಾಕಿಸ್ತಾನಕ್ಕೂ ವಿಶೇಷ ಪ್ರಯತ್ನದ ಅಗತ್ಯವಿತ್ತು. ಸುಲಭದ ಗೆಲುವುಗಳಲ್ಲಿ ಪಾಕಿಸ್ತಾನ ಮಾತ್ರ ಅಂತಹ ರೋಚಕತೆಯನ್ನು ನೀಡಬಲ್ಲದು ಎಂದು ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ ಪಾಕ್ ತಂಡವನ್ನು ಟ್ರಾಲ್ ಮಾಡಿದ್ದಾರೆ.

Story first published: Monday, November 19, 2018, 18:28 [IST]
Other articles published on Nov 19, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X