ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ vs ವಿಂಡೀಸ್ ಏಕದಿನ ಸರಣಿ: 3ನೇ ಏಕದಿನ ಪಂದ್ಯದ ಟಾಸ್ ವರದಿ ಹಾಗೂ ಆಡುವ ಬಳಗ

Pakistan vs West Indies ODI Series: 3rd match at Multan, Live score and Playing XI

ಪಾಕಿಸ್ತಾನ ಹಾಗೂ ವೆಸ್ಟ್ ಇಂಡೀಸ್ ತಂಡಗಳ ನಡುವಿನ ತಂಡಗಳ ಏಕದಿನ ಸರಣಿಯ ಅಂತಿಮ ಪಂದ್ಯ ಆರಂಭವಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ಪಾಕಿಸ್ತಾನ ತಂಡ ಮೊದಲಿಗೆ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಮೂರು ಏಕದಿನ ಪಂದ್ಯಗಳ ಈ ಸರಣಿಯಲ್ಲಿ ಆತಿಥೇಯ ಪಾಕಿಸ್ತಾನ ಮೊದಲ ಎರಡು ಪಂದ್ಯಗಳಲ್ಲಿಯೂ ಭರ್ಜರಿ ಗೆಲುವು ಸಾಧಿಸಿದ್ದು ಸರಣಿಯನ್ನು ಈಗಾಗಲೇ ತನ್ನ ವಶಕ್ಕೆ ಪಡೆದುಕೊಂಡಿದೆ.

ಪಾಕಿಸ್ತಾನ ತಂಡದ ಬ್ಯಾಟಿಂಗ್ ವಿಭಾಗ ಸಾಕಷ್ಟು ಉತ್ತಮ ಪ್ರದರ್ಶನ ನೀಡುತ್ತಿದ್ದು ಅದ್ಭುತ ಆತ್ಮವಿಶ್ವಾಸದಲ್ಲಿದೆ. ಹೀಗಾಗಿ ಈ ಪಂದ್ಯವನ್ನು ಕೂಡ ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಆಡುವ ವಿಶ್ವಾಸದಲ್ಲಿದೆ ಪಾಕಿಸ್ತಾನ ತಂಡ. ಸ್ವತಃ ನಾಯಕ ಬಾಬರ್ ಅಜಂ ಕೂಡ ಅದ್ಭುತ ಪಾರ್ಮ್‌ನಲ್ಲಿದ್ದು ತಂಡವನ್ನು ಅದ್ಣುತವಾಗಿ ಮುನ್ನಡೆಸುತ್ತಿದ್ದಾರೆ.

Live ಸ್ಕೋರ್‌ಕಾರ್ಡ್ ಹೀಗಿದೆ

1
52480

ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ಐದು ವಿಕೆಟ್‌ಗಳ ಅಂತರದಿಂದ ಗೆಲುವು ಸಾಧಿಸಿತ್ತು. ಆ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಮೊದಲಿಗೆ ಬ್ಯಾಟಿಂಗ್ ಮಾಡಿ ಭರ್ಜರಿ 305 ರನ್‌ಗಳನ್ನು ಗಳಿಸಿತ್ತು. ಆದರೆ ಈ ಬೃಹತ್ ಮೊತ್ತವನ್ನು ಬೆನ್ನಟ್ಟಿದ ಪಾಕಿಸ್ತಾನ ತಂಡಕ್ಕೆ ನಾಯಕ ಬಾಬರ್ ಅಜಂ ಆಸರೆಯಾದರು. 103 ರನ್‌ಗಳನ್ನು ಗಳಿಸುವ ಮೂಲಕ ಮಿಂಚಿದರು. ಇದರೊಂದಿಗೆ ಪಾಕಿಸ್ತಾನ ಬೃಹತ್ ಮೊತ್ತವನ್ನು ಸುಕಭವಾಗಿ ಮೀರಿ ನಿಲ್ಲಲು ಸಾಧ್ಯವಾಯಿತು. ಐದು ವಿಕೆಟ್‌ಗಳ ಅಂತರದಿಂದ ಪಾಕಿಸ್ತಾನ ಗೆಲುವು ಸಾಧಿಸಿತ್ತು.

ಇನ್ನು ಎರಡನೇ ಪಂದ್ಯದಲ್ಲಿಯೂ ಪಾಕಿಸ್ತಾನ ಅದ್ಭಯತ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿಯೂ ನಾಯಕ ಬಾಬರ್ ಅಜಂ ಹಾಗೂ ಇಮಾಮ್ ಉಲ್ ಹಕ್ ಅವರ ಅರ್ಧ ಶಥಕದ ನೆರವಿನಿಂದಾಗಿ ಪಾಕಿಸ್ತಾನ 275 ರನ್‌ಗಳನ್ನು ಗಳಿಸಿತ್ತು. ಆದರೆ ಇದನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ಎರಡನೇ ಪಂದ್ಯದಲ್ಲಿ 155 ರನ್‌ಗಳಿಗೆ ಮುಗ್ಗರಿಸುವ ಮೂಲಕ 120 ರನ್‌ಗಳ ಬೃಹತ್ ಅಂತರದಿಂದ ಸೋಲು ಅನುಭವಿಸಿದೆ.

ಪಾಕಿಸ್ತಾನ ಆಡುವ ಬಳಗ: ಫಖರ್ ಜಮಾನ್, ಇಮಾಮ್-ಉಲ್-ಹಕ್, ಬಾಬರ್ ಅಜಮ್ (ನಾಯಕ), ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಖುಶ್ದಿಲ್ ಶಾ, ಮೊಹಮ್ಮದ್ ಹ್ಯಾರಿಸ್, ಶಾದಾಬ್ ಖಾನ್, ಮೊಹಮ್ಮದ್ ನವಾಜ್, ಹಸನ್ ಅಲಿ, ಶಹನವಾಜ್ ದಹಾನಿ, ಮೊಹಮ್ಮದ್ ವಾಸಿಮ್ ಜೂನಿಯರ್
ಬೆಂಚ್: ಶಹೀನ್ ಅಫ್ರಿದಿ, ಇಫ್ತಿಕರ್ ಅಹ್ಮದ್, ಅಬ್ದುಲ್ಲಾ ಶಫೀಕ್, ಜಾಹಿದ್ ಮಹಮೂದ್, ಹಾರಿಸ್ ರೌಫ್

ವೆಸ್ಟ್ ಇಂಡೀಸ್ ಆಡುವ ಬಳಗ: ಶಾಯ್ ಹೋಪ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಶಮರ್ಹ್ ಬ್ರೂಕ್ಸ್, ಕೀಸಿ ಕಾರ್ಟಿ, ನಿಕೋಲಸ್ ಪೂರನ್ (ನಾಯಕ), ರೋವ್‌ಮನ್ ಪೊವೆಲ್, ಕೀಮೋ ಪೌಲ್, ರೊಮಾರಿಯೋ ಶೆಫರ್ಡ್, ಅಕೆಲ್ ಹೊಸೈನ್, ಜೇಡನ್ ಸೀಲ್ಸ್, ಹೇಡನ್ ವಾಲ್ಷ್
ಬೆಂಚ್: ಬ್ರಾಂಡನ್ ಕಿಂಗ್, ಅಲ್ಜಾರಿ ಜೋಸೆಫ್, ಆಂಡರ್ಸನ್ ಫಿಲಿಪ್, ಶೆರ್ಮನ್ ಲೆವಿಸ್, ಎನ್ಕ್ರುಮಾ ಬೋನರ್

Story first published: Sunday, June 12, 2022, 17:23 [IST]
Other articles published on Jun 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X