ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೀಲ್ಡಿಂಗ್ ವೇಳೆ ವಿಕೆಟ್ ಕೀಪರ್ ಗ್ಲೌಸ್ ತೊಟ್ಟ ಬಾಬರ್: ಮಾಡಿದ ತಪ್ಪಿಗೆ ದಂಡ ತೆತ್ತ ಪಾಕಿಸ್ತಾನ

Pakistan vs West Indies: Why Was Pakistan Given A Five-Run Penalty In The Second ODI

ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಬಾಬರ್ ಅಜಂ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸುದ್ದಿಯಲ್ಲಿದ್ದಾರೆ. ಅದ್ಭುತ ಫಾರ್ಮ್‌ನಲ್ಲಿ ಮಿಂಚುತ್ತಿರುವ ಬಾಬರ್ ಅಜಂ ಒಂದಾದ ಬಳಿಕ ಮತ್ತೊಂದರಂತೆ ದಾಖಲೆಗಳನ್ನು ಮುರಿಯುತ್ತಿದ್ದಾರೆ. ಅದರಲ್ಲೂ ವೈಟ್‌ವಾಲ್ ಕ್ರಿಕೆಟ್‌ನಲ್ಲಿ ಬಾಬರ್ ಅಜಂ ಅವರನ್ನು ಸದ್ಯಕ್ಕೆ ಹಿಡಿಯುವವರು ಯಾರೂ ಇಲ್ಲ ಎನ್ನುವಂತಾಗಿದೆ. ವೆಸ್ಟ್ ಇಂಡೀಸ್ ವಿರುದ್ಧಧ ಏಕದಿನ ಸರಣಿಯಲ್ಲಿಯೂ ಈ ಫಾರ್ಮ್ ಮುಂದುವರಿಸಿದರು ಬಾಬರ್ ಬೇಡದ ಕಾರಣಕ್ಕೂ ಸುದ್ದಿಯಾಗಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದ ಬಾಬರ್ ಅಜಂ ಭರ್ಜರಿ ಶತಕ ಸಿಡಿಸಿದ್ದರು. ಎರಡನೇ ಪಂದ್ಯದಲ್ಲಿಯೂ ಅರ್ಧ ಶತಕ ಸಿಡಿಸಿದ ಬಾಬರ್ ಮತ್ತೊಮ್ಮೆ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದರು. ಆದರೆ ಫೀಲ್ಡಿಂಗ್ ವೇಳೆ ಪಾಡಿದ ಪ್ರಮಾದದ ಕಾರಣಕ್ಕೆ ಪಾಕಿಸ್ತಾನ ತಂಡಕ್ಕೆ ಪೆನಾಲ್ಟಿ ವಿಧಿಸಲಾಯಿತು.

AUS vs SL: 18 ಎಸೆತಕ್ಕೆ 59 ರನ್ ಚೇಸ್ ಮಾಡಿದ ಲಂಕಾ; ಮುನ್ನುಗ್ಗಿ ಪಂದ್ಯ ಗೆಲ್ಲಿಸಿದ ನಾಯಕ ಶನಕAUS vs SL: 18 ಎಸೆತಕ್ಕೆ 59 ರನ್ ಚೇಸ್ ಮಾಡಿದ ಲಂಕಾ; ಮುನ್ನುಗ್ಗಿ ಪಂದ್ಯ ಗೆಲ್ಲಿಸಿದ ನಾಯಕ ಶನಕ

ಸತತ 9ನೇ 50+ ರನ್ ದಾಖಲಿಸಿದ ಬಾಬರ್ ಅಜಂ

ಸತತ 9ನೇ 50+ ರನ್ ದಾಖಲಿಸಿದ ಬಾಬರ್ ಅಜಂ

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ಎಲ್ಲಾ ಮಾದರಿಯಲ್ಲಿ ಸತತ 9ನೇ 50 ಪ್ಲಸ್ ರನ್ ಬಾರಿಸಿದ್ದಾರೆ. ಇದರಿಂದಾಗಿ ಮುಲ್ತಾನ್‌ನಲ್ಲಿ ನಡೆಯುತ್ತಿರುವ ಂಊರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಕಿಸ್ತಾನ 2-0 ಅಂತರದಿಂದ ವಶಕ್ಕೆ ಪಡೆದುಕೊಂಡಿದೆ. ಮೊದಲ ಪಂದ್ಯದಲ್ಲಿ ಭರ್ಜರಿ ಶತಕ ಗಳಿಸಿದ ಬಳಿಕ ಅಜಂ ಎರಡನೇ ಪಂದ್ಯದಲ್ಲಿಯೂ 93 ಎಸೆತಗಳಲ್ಲಿ 77 ರನ್‌ಗಳನ್ನು ಬಾರಿಸಿ ಮಿಂಚಿದ್ದಾರೆ. ಆದರೆ ಫೀಲ್ಡಿಂಗ್‌ನ ಸಂದರ್ಭದಲ್ಲಿ ನಡೆದುಕೊಂಡ ವಿವಾದಾತ್ಮಕ ರೀತಿಯಿಂದಾಗಿ ಪಾಕಿಸ್ತಾನ ತಂಡಕ್ಕೆ ದುಬಾರಿಯಾಯಿತು. ಎದುರಾಳಿ ವೆಸ್ಟ್ ಇಂಡೀಸ್ ತಂಡಕ್ಕೆ ಐದು ರನ್‌ಗಳನ್ನು ದಂಡದ ರೂಪದಲ್ಲಿ ನೀಡಲಾಯಿತು.

ಗ್ಲೌಸ್ ಹಾಕಿಕೊಂಡು ಫಿಲ್ಡಿಂಗ್ ಮಾಡಿದ ಬಾಬರ್

ಗ್ಲೌಸ್ ಹಾಕಿಕೊಂಡು ಫಿಲ್ಡಿಂಗ್ ಮಾಡಿದ ಬಾಬರ್

ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಂ ವಿಕೆಟ್ ಕೀಪರ್ ಧರಿಸುವ ಗ್ಲೌಸ್ ಧರಿಸಿಕೊಂಡು ಫೀಲ್ಡಿಂಗ್ ಮಾಡಿದ್ದಾರೆ. ಪಂದ್ಯದ 29ನೇ ಓವರ್‌ನಲ್ಲಿ ಬಾಬರ್ ಅಜಂ ಒಂದು ಕೈಗೆ ವಿಕೆಟ್ ಕೀಪರ್ ಧರಿಸುವ ಗ್ಲೌಸ್ ಬಳಸಿಕೊಂಡು ಚೆಂಡೆಸಿದ್ದಾರೆ. ಇದು ಆಟದ ನಿಯಮಕ್ಕೆ ವಿರುದ್ಧವಾಗಿದ್ದು ಮೈದಾನದ ಅಂಪೈರ್‌ಗಳು ತಕ್ಷಣವೇ ಇದನ್ನು ಗುರಿತಿಸಿದ್ದಾರೆ. ಈ ಕಾರಣದಿಂದಾಗಿ ಎದುರಾಳಿ ತಂಡಕ್ಕೆ ಐದು ರನ್‌ಗಳನ್ನು ನೀಡಲಾಗಿದೆ.

ಕ್ರಿಕೆಟ್ ಕಾನೂನಿನಲ್ಲಿ ಸ್ಪಷ್ಟ ಉಲ್ಲೇಖ

ಕ್ರಿಕೆಟ್ ಕಾನೂನಿನಲ್ಲಿ ಸ್ಪಷ್ಟ ಉಲ್ಲೇಖ

ವಿಕೆಟ್ ಕೀಪರ್ ಧರಿಸುವ ಗ್ಲೌಸ್ ವಿಚಾರವಾಗಿ ಕ್ರಿಕೆಟ್ ಕಾನೂನಿನಲ್ಲಿ ಸ್ಪಷ್ಟ ಉಲ್ಲೇಖವಿದೆ. ವಿಕೆಟ್ ಕೀಪರ್ ಹೊರತುಪಡಿಸಿ ಇತರ ಫಿಲ್ಡರ್‌ಗಳು ಗ್ಲೌಸ್ ಬಳಸುವಂತಿಲ್ಲ. ಆದರೆ ಅಂಪೈರ್‌ಗಳ ಅನುಮತಿಯನ್ನು ಪಡೆದು ಕೈ ಅಥವಾ ಬೆರಳುಗಳಿಗೆ ರಕ್ಷಣೆಯನ್ನು ಪಡೆದುಕೊಳ್ಳಬಹುದು ಎಂದು ಕ್ರಿಕೆಟ್ ನಿಯಮದಲ್ಲಿ ಉಲ್ಲೇಖಿಸಲಾಗಿದೆ.

ಭಾರೀ ಅಂತರದಿಂದ ಸೋತ ವಿಂಡೀಸ್

ಭಾರೀ ಅಂತರದಿಂದ ಸೋತ ವಿಂಡೀಸ್

ಇನ್ನು ಈ ಹೆಚ್ಚುವರಿ ಐದು ಅಂಕಗಳನ್ನು ಪಡೆದರೂ ಇದರಿಂದ ಪಾಕಿಸ್ತಾನ ತಂಡಕ್ಕೆ ದೊಡ್ಡ ನಷ್ಟವೇನೂ ಆಗಲಿಲ್ಲ. ಪಾಕಿಸ್ತಾನ ನೀಡಿದ 276 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡದ ಪರವಾಗಿ ಬ್ಯಾಟರ್‌ಗಳು ಮಿಂಚಲು ವಿಫಲವಾಗಿದ್ದಾರೆ. ಕೇವಲ 32.2 ಓವರ್‌ಗಳಲ್ಲಿಯೇ ವೆಸ್ಟ್ ಇಂಡೀಸ್ ತಂಡದ ಆಟಗಾರರು 155 ರನ್‌ಗಳಿಗೆ ಆಲೌಟ್ ಆದರು. ಹೀಗಾಗಿ ಪಾಕಿಸ್ತಾನ 120 ರನ್‌ಗಳ ಅಂತರದ ಬೃಹತ್ ಸೋಲು ಅನುಭವಿಸಿದೆ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಪಾಕಿಸ್ತಾನಕ್ಕೆ ಒಪ್ಪಿಸಿದೆ ವೆಸ್ಟ್ ಇಂಡೀಸ್ ತಂಡ.

Story first published: Sunday, June 12, 2022, 11:15 [IST]
Other articles published on Jun 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X