ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಭಾರತ-ಇಂಗ್ಲೆಂಡ್ ಮ್ಯಾಚಿನಿಂದ ವಿಶ್ವಕಪ್‌ನಲ್ಲಿ ಪಾಕ್ ಹೊರ ಬಿದ್ದಿದ್ದಲ್ಲ!': ಹಫೀಜ್

Pakistan was not eliminated on the basis of India-England match says Mohammad Hafeez

ಲಾಹೋರ್: 2019ರ ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ಬೀಳೋದಕ್ಕೆ ಭಾರತ-ಇಂಗ್ಲೆಂಡ್ ಪಂದ್ಯ ಕಾರಣ ಅಂತ ಕ್ರಿಕೆಟ್ ವಲಯ ಮಾತನಾಡಿಕೊಳ್ಳುತ್ತಿದೆ. ಮುಖ್ಯವಾಗಿ ಪಾಕ್‌ ಕೆಲ ಆಟಗಾರರೇ ಇಂಥದ್ದೊಂದು ಆರೋಪ ಮಾಡುತ್ತಿದ್ದಾರೆ. ಆದರೆ ಪಾಕ್ ಅನುಭವಿ ಆಲ್ ರೌಂಡರ್ ಮೊಹಮ್ಮದ್ ಹಫೀಜ್ ಇದಕ್ಕೆ ಕೊಂಚ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಪಂದ್ಯ ಗೆದ್ದರೆ ಮುಂದಿನ ಸುತ್ತಿಗೆ ಹೋಗಲು ಪಾಕಿಸ್ತಾನಕ್ಕೆ ಅವಕಾಶ ಸಿಗಲಿದೆ ಎಂದು ಭಾರತ ತಂಡಕ್ಕೆ ಆವತ್ತು ಗೊತ್ತಿತ್ತು. ಅದಕ್ಕಾಗೇ ಅವರು ಗೆಲ್ಲುವ ಉದ್ದೇಶದಿಂದ ಆಡಲಿಲ್ಲ ಎಂದು ಹಫೀಜ್ ಹೇಳಿದ್ದಾರೆ.

ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್ಕೊಹ್ಲಿಗಿರುವ ಈ ಸಾಮರ್ಥ್ಯ ರೋಹಿತ್, ಗೇಲ್, ಎಬಿಡಿಗೂ ಇಲ್ಲ!: ಗಂಭೀರ್

ಉಳಿದ ಪಾಕಿಸ್ತಾನ ಆಟಗಾರರು ಹೇಳಿದ ರೀತಿಯಲ್ಲೇ ಹಫೀಜ್ ಹೇಳಿಕೆ ನೀಡಿದ್ದಾರೆಯಾದರೂ ಇವರ ಹೇಳಿಕೆಯಲ್ಲಿ ಕೊಂಚ ಬದಲಾವಣೆಯೂ ಮಾಡಿಕೊಂಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಗೆಲ್ಲುವತ್ತ ಮನಸಿಟ್ಟು ಆಡಲಿಲ್ಲ. ಹಾಗಂತ ಬರೀ ಇಂಗ್ಲೆಂಡ್-ಭಾರತ ಪಂದ್ಯದಿಂದಲೇ ಪಾಕಿಸ್ತಾನ ತಂಡ ಟೂರ್ನಿಯಿಂದ ಹೊರ ಬಿದ್ದಿತು ಎನ್ನಲಾಗೋಲ್ಲ ಎಂದು ಹಫೀಜ್ ಅಭಿಪ್ರಾಯಿಸಿದ್ದಾರೆ.

ಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನಪಾಕಿಸ್ತಾನಕ್ಕೆ ಭಾರತ ಸತತ 7ನೇ ವಿಶ್ವಕಪ್‌ ಸೋಲುಣಿಸಿದ್ದು ಇದೇ ದಿನ

ಆನ್ ಲೈನ್ ಕಾನ್ಫರೆನ್ಸ್‌ನಲ್ಲಿ ಮಾತನಾಡಿದ ಹಫೀಜ್, ಭಾರತ vs ಇಂಗ್ಲೆಂಡ್ ಪಂದ್ಯದ ಬಗ್ಗೆ ಏನೆಲ್ಲ ವಿಚಾರ ಹಂಚಿಕೊಂಡಿದ್ದಾರೆ ನೋಡಿ.

ಆ ಪಂದ್ಯದಿಂದಲೇ ಹೊರ ಬಿದ್ದಿಲ್ಲ

ಆ ಪಂದ್ಯದಿಂದಲೇ ಹೊರ ಬಿದ್ದಿಲ್ಲ

'ನೀವೊಂದು ವೇಳೆ ಯಾವುದೇ ಕ್ರಿಕೆಟ್ ಅಭಿಮಾನಿಗೆ ಆ ಪಂದ್ಯವನ್ನು 100 ಬಾರಿ ತೋರಿಸಿದರೂ ಆ ಅಭಿಮಾನಿ ಕೇವಲ ಒಂದೇ ಫಲಿತಾಂಶವನ್ನು ಆ ಪಂದ್ಯದಿಂದ ತೆಗೆದುಕೊಳ್ಳುತ್ತಾನೆ. ಪ್ರತಿಯೊಬ್ಬರಿಗೂ ಆ ಪಂದ್ಯದ ಫಲಿತಾಂಶ ಹೇಗೆ ಪರಿಣಾಮ ಬೀರಿದೆ ಎಂಬುದು ನನಗೆ ಗೊತ್ತಿಲ್ಲ. ಆದರೆ ಪಾಕಿಸ್ತಾನ ತಂಡ ಇಂಗ್ಲೆಂಡ್-ಭಾರತ ಪಂದ್ಯದಿಂದಾಗಿಯೇ ಹೊರಬಿದ್ದಿಲ್ಲ,' ಎಂದು ಹಫೀಜ್ ಹೇಳಿದ್ದಾರೆ.

ನಮ್ಮ ತಪ್ಪುಗಳಿಂದಾಗಿ ಸೋತೆವು

ನಮ್ಮ ತಪ್ಪುಗಳಿಂದಾಗಿ ಸೋತೆವು

ಮಾತು ಮುಂದುವರೆಸಿದ ಹಫೀಜ್, '2019ರ ವಿಶ್ವಕಪ್‌ನಲ್ಲಿ ನಾವು ಚೆನ್ನಾಗಿ ಆಡಿದ್ದೇವೆ. ಆದರೆ ನಾವು ಟೂರ್ನಿಯಿಂದ ಹೊರ ಬಿದ್ದಿದ್ದು ನಾವು ಮಾಡಿದ ತಪ್ಪುಗಳಿಂದಾಗಿ. ನಮ್ಮ ಸೋಲಿಗೆ ನಾನು ಯಾರನ್ನೂ ದೂರುವುದಿಲ್ಲ. ಆದರೆ ಯಾವುದೋ ಒಂದು ಫಲಿತಾಂಶದಿಂದಾಗಿ ನಾವು ಟೂರ್ನಿಯಿಂದ ಹೊರ ಬಿದ್ದೆವು ನಾವು ಯೋಚಿಸಬಾರದು,' ಎಂದರು.

ಚರ್ಚೆ ಶುರುವಾಗಿದ್ಯಾಕೆ?!

ಚರ್ಚೆ ಶುರುವಾಗಿದ್ಯಾಕೆ?!

ಇಂಗ್ಲೆಂಡ್ vs ಭಾರತ ಪಂದ್ಯ ನಡೆದಿದ್ದು ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಸ್ಟೇಡಿಯಂನಲ್ಲಿ. ವಿಶ್ವಕಪ್ 38ನೇ ಪಂದ್ಯವಾಗಿ ಇತ್ತಂಡಗಳು ಅಂದು ಕಾದಾಡಿದ್ದವು. ಒಂದು ಲೆಕ್ಕಾಚಾರದ ಪ್ರಕಾರ ಈ ಪಂದ್ಯದಲ್ಲಿ ಭಾರತ ಗೆದ್ದಿದ್ದರೆ ಪಾಕಿಸ್ತಾನ ತಂಡದ ಸೆಮಿಫೈನಲ್ ಪ್ರವೇಶ ಜೀವಂತವಾಗಿರುತ್ತಿತ್ತು. ಆದರೆ ದುರದೃಷ್ಟವಶಾತ್ ಆ ಪಂದ್ಯದಲ್ಲಿ ಭಾರತ ಸೋತಿತು.

ಇತ್ತಂಡಗಳ ಸ್ಕೋರ್‌

ಇತ್ತಂಡಗಳ ಸ್ಕೋರ್‌

ಅಂದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಇಯಾನ್ ಮಾರ್ಗನ್ ಬಳಗ, ಜೇಸನ್ ರಾಯ್ 66, ಜಾನಿ ಬೇರ್ಸ್ಟೋವ್ 111, ಜೋ ರೂಟ್ 44, ಬೆನ್ ಸ್ಟೋಕ್ಸ್ 79 ರನ್‌ನೊಂದಿಗೆ 50 ಓವರ್‌ಗೆ 7 ವಿಕೆಟ್ ನಷ್ಟದಲ್ಲಿ 337 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಕೊಹ್ಲಿ ಪಡೆ, ರೋಹಿತ್ ಶರ್ಮಾ 102, ವಿರಾಟ್ 66, ರಿಷಬ್ ಪಂತ್ 32, ಹಾರ್ದಿಕ್ ಪಾಂಡ್ಯ 45, ಎಂಎಸ್ ಧೋನಿ 42 ರನ್‌ನೊಂದಿಗೆ 50 ಓವರ್‌ಗೆ 5 ವಿಕೆಟ್ ಕಳೆದು 306 ರನ್ ಕಲೆ ಹಾಕಿ, 31 ರನ್‌ನಿಂದ ಸೋಲೊಪ್ಪಿಕೊಂಡಿತ್ತು.

Story first published: Tuesday, June 16, 2020, 21:16 [IST]
Other articles published on Jun 16, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X