ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್ ಆತಿಥ್ಯ ಪಾಕಿಸ್ತಾನಕ್ಕಿಲ್ಲ: ಕಾರಣ ಭಾರತ !

Pakistan Will Not Host The Asia Cup 2020

ಏಷ್ಯಾಕಪ್ ಟಿ20 ಕ್ರಿಕೆಟ್ ಟೂರ್ನಿ ಈ ಬಾರಿ ಪಾಕಿಸ್ತಾನದಲ್ಲಿ ಆಯೋಜನೆಗೊಳ್ಳಲು ತೀರ್ಮಾನಿಸಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಏಷ್ಯಾಕಪ್ ಆತಿಥ್ಯ ಪಾಕಿಸ್ತಾನದ ಕೈ ತಪ್ಪುವ ಸಾಧ್ಯತೆ ನಿಚ್ಚಳವಾಗಿದೆ. ಈ ಬಗ್ಗೆ ಮಾಧ್ಯಮಗಳು ವರದಿ ಮಾಡಿದ್ದು ಇದು ನಿಜವಾದಲ್ಲಿ ಪಾಕಿಸ್ತಾನಕ್ಕೆ ಮತ್ತೆ ದೊಡ್ಡ ಹಿನ್ನಡೆಯಾಗಲಿದೆ.

ಪಾಕಿಸ್ತಾನದಿಂದ ಏಷ್ಯಾಕಪ್ ಕ್ರಿಕೆಟ್‌ ಕೈ ತಪ್ಪಲು ಕಾರಣ ಏನು ಅನ್ನೋದನ್ನು ನೋಡಿದರೆ ಸಿಗುವ ಉತ್ತರ, ಭಾರತ.! ಹೌದು ಭಾರತ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ಸುತಾರಾಮ್ ಒಪ್ಪಿಗೆ ಸೂಚಿಸುವುದಿಲ್ಲ. ರಾಜಕೀಯವಾಗಿ ಭಾರತ ಪಾಕಿಸ್ತಾನ ಸಂಬಂಧ ತೀರಾ ಹಳೆಗೆಟ್ಟಿದೆ. ಈ ಸಂದರ್ಭದಲ್ಲಿ ಭಾರತ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ಒಪ್ಪಿಗೆ ಸೂಚಿಸಲಿದೆ ಎಂದು ಸ್ವತಃ ಪಾಕಿಸ್ತಾನಕ್ಕೂ ಎಳ್ಳಷ್ಟೂ ನಂಬಿಕೆಯಿಲ್ಲ. ಹೀಗಾಗಿ ಪಾಕ್ ಕನಸು ಭಗ್ನಗೊಂಡಿದೆ.

ಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡಭಾರತ vs ಆಸ್ಟ್ರೇಲಿಯಾ: ದ್ವಿತೀಯ ಏಕದಿನಕ್ಕೆ ಭಾರತ ಸಂಭಾವ್ಯ ತಂಡ

ಮಾಧ್ಯಮಗಳ ವರದಿಯ ಪ್ರಕಾರ ಏಷ್ಯಾಕಪ್ ಹಾಲಿ ಮತ್ತು ಅತಿ ಹೆಚ್ಚು ಬಾರಿ ಚಾಂಪಿಯನ್ ಆಗಿರುವ ಭಾರತ ತಂಡ ಪಾಕಿಸ್ತಾನಕ್ಕೆ ತೆರಳದ ಕಾರಣ ಪಾಕಿಸ್ತಾನಕ್ಕೆ ಈ ಮಹತ್ವದ ಟೂರ್ನಿ ಆಯೋಜನೆ ಕೈ ತಪ್ಪಲಿದೆ ಎನ್ನಲಾಗಿದೆ. ಹೀಗಾಗಿ ಬೇರೊಂದು ಸ್ಥಳದಲ್ಲಿ ಏಷ್ಯಾಕಪ್ ಆಯೋಜನೆಗೊಳ್ಳುವ ಸಾಧ್ಯತೆ ಹೆಚ್ಚಾಗಿದೆ.

ಏಷ್ಯಾ ಖಂಡದಲ್ಲಿ ಕ್ರಿಕೆಟ್‌ನ ಬೆಳವಣಿಗೆಗೆ ಏಷ್ಯಾಕಪ್ ಟೂರ್ನಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. 15ನೇ ಆವೃತ್ತಿಯ ಈ ಟೂರ್ನಿ ಪಾಕಿಸ್ತಾನದಲ್ಲಿ ಆಯೋಜನೆ ಮಾಡಲು ಆರಂಭದಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿತ್ತು. ಈ ಹಿಂದಿನ ಅಂದರೆ 2018ರ ಏಷ್ಯಾಕಪ್ ಏಕದಿನ ಮಾದರಿಯಲ್ಲೇ ಆಯೋಜನೆಯಾಗಿತ್ತು. ಟೀಮ್ ಇಂಡಿಯಾ ಇದರಲ್ಲಿ ಜಯಭೇರಿ ಬಾರಿಸಿತ್ತು.

ಮತ್ತೆ ಮೂರನೇ ಕ್ರಮಾಂಕದಲ್ಲೇ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿಮತ್ತೆ ಮೂರನೇ ಕ್ರಮಾಂಕದಲ್ಲೇ ಕಣಕ್ಕಿಳಿಯಲಿರುವ ವಿರಾಟ್ ಕೊಹ್ಲಿ

ಈ ಬಾರಿಯ ಏಷ್ಯಾಕಪ್ ಟಿ20 ಮಾದರಿಯಲ್ಲಿರಲಿದೆ. ಏಷ್ಯಾ ಕಪ್ ಇತಿಹಾಸದಲ್ಲಿ ಕೇವಲ ಎರಡನೇ ಬಾರಿಗೆ ಟಿ20 ಮಾದರಿಯಲ್ಲಿ ಆಡಲಾಗುತ್ತಿದೆ.2016ರಲ್ಲಿ ಮೊದಲ ಬಾರಿಗೆ ಏಷ್ಯಾಕಪ್ ಟೂರ್ನಿ ಟಿ20 ಮಾದರಿಯಲ್ಲಿ ಆಯೋಜನೆಗೊಂಡಿತ್ತು.

Story first published: Friday, January 17, 2020, 11:25 [IST]
Other articles published on Jan 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X