ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಶಕದ ಬಳಿಕ ಪಾಕ್ ನೆಲದಲ್ಲಿ ಟೆಸ್ಟ್; ತಟಸ್ಥ ಸ್ಥಳದ ಬದಲು ಪಾಕ್‌ನಲ್ಲೆ ಪಂದ್ಯ ಎಂದ ಪಿಸಿಬಿ ಅಧ್ಯಕ್ಷ

Pakistan will not play at neutral venues for home international matches: PCB

ದಶಕದ ಬಳಿಕ ಪಾಕಿಸ್ತಾನ ತನ್ನ ನೆಲದಲ್ಲೇ ಟೆಸ್ಟ್‌ ಪಂದ್ಯವನ್ನು ಆಯೋಜನೆ ಮಾಡುತ್ತಿದೆ. ನಾಳೆಯಿಂದ ಶ್ರೀಲಂಕಾ ವಿರುದ್ಧ ಸರಣಿ ಆರಂಭವಾಗಲಿದ್ದು ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ ಅದ್ಯಕ್ಷ ಇಹ್ಸಾನ್ ಮನಿ ಎಪಿ ಸುದ್ದಿ ಸಂಸ್ಥೆಯ ಜೊತೆ ಮಾತನಾಡಿದರು. ಈ ವೇಳೆ ಮುಂದಿನ ದಿನಗಳಲ್ಲಿ ಪಾಕಿಸ್ತಾನದ ತವರು ಪಂದ್ಯಗಳನ್ನು ಆಡುವ ಎದುರಾಳಿಗಳು ಪಾಕಿಸ್ತಾನದ ನೆಲದಲ್ಲೇ ಕ್ರಿಕೆಟ್ ಆಡಬೇಕು. ನಾವು ಯಾವುದೇ ತಟಸ್ಥ ದೇಶದಲ್ಲಿ ಪಂದ್ಯಗಳನ್ನು ಆಯೋಜಿಸುವುದಿಲ್ಲ ಎಂದು ತಿಳಿಸಿದ್ದಾರೆ. ನಮ್ಮ ದೇಶ ಸುರಕ್ಷಿತವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಭದ್ರತೆಯ ಕಾರಣದಿಂದ ಪಾಕಿಸ್ತಾನದಲ್ಲಿ ಕ್ರಿಕೆಟ್ ಆಡಲು ವಿಶ್ವ ಕ್ರಿಕೆಟ್‌ ತಂಡಗಳು ಮುಂದೆ ಬರುತ್ತಿಲ್ಲ. ಈ ಹಿಂದೆ ನಡೆದಿರುವ ಘಟನೆಗಳು ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಲು ಇತರ ತಂಡಗಳು ಹಿಂದೆ ಮುಂದೆ ನೋಡುವ ಸ್ಥಿತಿಯಿದೆ. ಆದರೆ ಈ ವಿಚಾರವಾಗಿ ಪಾಕಿಸ್ತಾನ ಮಹತ್ವದ ನಿರ್ಧಾರಕ್ಕೆ ಬಂದಂತೆ ಕಾಣಿತ್ತಿದೆ. ತವರಿನ ಪಂದ್ಯಗಳಲ್ಲಿ ಭಾಗವಹಿಸಬೇಕಾದರೆ ತಟಸ್ಥ ದೇಶಗಳನ್ನು ಅವಲಂಬಿಸುವಂತಾಗಿದೆ.

ಕಳೆದ ಒಂದು ದಶಕದಿಂದ ಪಾಕಿಸ್ತಾನದಲ್ಲಿ ಯಾವ ಅಂತರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್ ಕೂಡ ನಡೆದಿಲ್ಲ. 2009 ಇಸವಿಯಲ್ಲಿ ಶ್ರೀಲಂಕಾ ತಂಡ ಸರಣಿಯನ್ನು ಆಡುವ ಸಲುವಾಗಿ ಆಗಮಿಸಿ ಉಗ್ರರ ದಾಳಿಯಿಂದ ಸ್ವಲ್ಪದರಲ್ಲೇ ಪಾರಾಗಿತ್ತು. ಈ ಘಟನೆಯಲ್ಲಿ 8 ಮಂದಿ ಸಾರ್ವಜನಿಕರು ಮೃತಪಟ್ಟಿದ್ದರೆ, ಕೆಲ ಆಟಗಾರರು ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡದ ಅಧಿಕಾರಿಗಳು ಗಾಯಗೊಂಡಿದ್ದರು.ಅದೇ ಕೊನೆ ಆ ಬಳಿಕ ಅಲ್ಲಿ ಯಾವ ದೇಶದ ಆಟಗಾರರು ಹೋಗಲು ಭಯ ಪಡುತ್ತಿದ್ದಾರೆ.

ಆದರೆ ಇದೀಗ ಮತ್ತೆ ಹೊಸ ಆಶಾಕಿರಣವನ್ನು ಪಾಕಿಸ್ತಾನ ಎದುರು ನೋಡುತ್ತಿದೆ. ಪಾಕಿಸ್ತಾನದ ನೆಲದಲ್ಲಿ ದಶಕದ ಬಳಿಕ ಮೊದಲ ಅಂತರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ನಡೆಯುತ್ತಿದೆ. ಶ್ರೀಲಂಕಾ ತಂಡ ಪಾಕಿಸ್ತಾನದ ವಿರುದ್ಧ ಟೆಸ್ಟ್ ಪಂದ್ಯವನ್ನಾಡಲು ಸಿದ್ಧವಾಗಿದ್ದು ನಾಳೆಯಿಂದ(11 ಡಿಸೆಂಬರ್ 2019) ಪಿಂಡಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ ಆರಂಭವಾಗಲಿದೆ. ಎರಡನೇ ಟೆಸ್ಟ್‌ ಪಂದ್ಯ ಇದೇ 19-23ರ ವರೆಗೆ ಕರಾಚಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಕಳೆದ ನಾಲ್ಕು ವರ್ಷಗಳಿಂದ ಪಾಕಿಸ್ತಾನದಲ್ಲಿ ಸೀಮಿತ ಓವರ್‌ಗಳ ಸರಣಿಯನ್ನು ಆಡಿಸುವ ಪ್ರಯತ್ನಗಳಾಗಿತ್ತು. ಆದರೆ ಜಿಂಬ್ವಾಬೆ, ವೆಸ್ಟ್‌ ಇಂಡಿಸ್, ಶ್ರೀಲಂಕಾ ತಂಡಗಳು ಮಾತ್ರವೇ ಸರಣಿಯಲ್ಲಿ ಪಾಲ್ಗೊಳ್ಳಲು ಒಪ್ಪಿ ಏಕದಿನ ಹಾಗೂ ಟಿ20 ಸರಣಿಗಳಲ್ಲಿ ಪಾಲ್ಗೊಂಡಿದ್ದವು. ನಾಳೆಯಿಂದ ಟೆಸ್ಟ್‌ ಸರಣಿಯನ್ನೂ ಆಯೋಜಿಸಿದೆ.

Story first published: Tuesday, December 10, 2019, 20:06 [IST]
Other articles published on Dec 10, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X