ಐಪಿಎಲ್‌ನಲ್ಲಿ ಆಡದಿರುವುದು ಪಾಕಿಸ್ತಾನಿ ಕ್ರಿಕೆಟಿಗರಿಗೆ ದೊಡ್ಡ ನಷ್ಟ: ಶಾಹಿದ್ ಅಫ್ರಿದಿ

ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಐಪಿಎಲ್ ಬಗ್ಗೆ ಪ್ರಮುಖ ಹೇಳಿಕೆಯನ್ನು ನೀಡಿದ್ದಾರೆ. ಪಾಕಿಸ್ತಾನಿ ಆಟಗಾರರು ಐಪಿಎಲ್‌ನಲ್ಲಿ ಆಡದೆ ಇರುವುದು ದೊಡ್ಡ ಅವಕಾಶವೊಂದನ್ನು ಕಳೆದುಕೊಂಡಂತೆ ಎಂದು ವ್ಯಾಖ್ಯಾನಿಸಿದ್ದಾರೆ. ಐಪಿಎಲ್ ಕ್ರಿಕೆಟ್ ಜಗತ್ತಿನ ದೊಡ್ಡ ಬ್ರ್ಯಾಂಡ್ ಎಂದು ಅಫ್ರಿದಿ ಹೇಳಿದ್ದಾರೆ.

ನನಗೆ ಗೊತ್ತಿದೆ ಐಪಿಎಲ್ ಎಂಬುದು ದೊಡ್ಡ ಬ್ಯ್ರಾಂಡ್ ಆಗಿದೆ. ಬಾಬರ್ ಅಜಂ ಆಗಿರಬಹುದು ಅಥವಾ ಪಾಕಿಸ್ತಾನದ ಯಾವುದೇ ಕ್ರಿಕೆಟಿಗನಿಗೂ ಭಾರತಕ್ಕೆ ತೆರಳಿ ಒತ್ತಡದ ಮಧ್ಯೆ ಕ್ರಿಕೆಟ್ ಆಡುವುದು ಹಾಗೂ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವುದು ದೊಡ್ಡ ಅವಕಾಶವಾಗಿತ್ತು. ನನ್ನ ಪ್ರಕಾರ ಪಾಕಿಸ್ತಾನಿ ಆಟಗಾರರು ಈ ದೊಡ್ಡ ಅವಕಾಶವೊಂದನ್ನು ಕಳೆದುಕೊಳ್ಳುತ್ತಿದ್ದಾರೆ ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

ಆತ ಬ್ಯಾಟಿಂಗ್‌ಗೆ ಹೋಗೋದು ನೋಡಲು ಭಯಾನಕವಾಗಿರುತ್ತೆ: ಡಿಕೆ

ದ್ವಿಪಕ್ಷೀಯ ಸರಣಿಗೆ ಪಾಕ್ ಸಿದ್ಧ

ದ್ವಿಪಕ್ಷೀಯ ಸರಣಿಗೆ ಪಾಕ್ ಸಿದ್ಧ

ಇನ್ನು ಇದೇ ಸಂದರ್ಭದಲ್ಲಿ ಭಾರತ ಪಾಕಿಸ್ತಾನ ದ್ವಿಪಕ್ಷೀಯ ಕ್ರಿಕೆಟ್ ಸರಣಿಯ ಬಗ್ಗೆಯೂ ಶಾಹಿದ್ ಅಫ್ರಿದಿ ಮಾತನಾಡಿದ್ದು ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ಅಸ್ತಿತ್ವದಲ್ಲಿ ಇರುವವರೆಗೆ ಭಾರತ ಪಾಕಿಸ್ತಾನ ಸರಣಿ ನಡೆಯುವುದು ಅಸಾಧ್ಯ ಎಂದಿದ್ದಾರೆ. ಪಾಕಿಸ್ತಾನ ಸರ್ಕಾರ ಭಾರತ ಪಾಕ್ ಸರಣಿಗೆ ಯಾವಾಗಲೂ ಸಿದ್ಧವಿದೆ ಎಂಬುದನ್ನು ಅಫ್ರಿದಿ ಹೇಳಿಕೆಯನ್ನು ನೀಡಿದ್ದಾರೆ.

ಭಾರತೀಯರಿಂದ ಅಪಾರ ಪ್ರೀತಿ

ಭಾರತೀಯರಿಂದ ಅಪಾರ ಪ್ರೀತಿ

ಅರಬ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಶಾಹಿದ್ ಅಫ್ರಿದಿ ಭಾರತದ ನೆಲದಲ್ಲಿ ಕ್ರಿಕೆಟ್ ಆಡಿದ ಅನುಭವವನ್ನು ಕೂಡ ಹಂಚಿಕೊಂಡಿದ್ದಾರೆ. 'ನಾನು ಭಾರತದಲ್ಲಿ ಕ್ರಿಕೆಟ್ ಆಡಿದ ಅನುಭವವನ್ನು ಯಾವಾಗಲೂ ಆನಂದಿಸಿದ್ದೇನೆ. ಭಾರತೀಯರಿಂದ ಪ್ರೀತಿ ಹಾಗೂ ಗೌರವವನ್ನು ಪಡೆದುಕೊಂಡಿರುವುದನ್ನು ನಾನು ಯಾವಾಗಲೂ ಮೆಚ್ಚಿದ್ದೇನೆ. ಈಗಲೂ ನಾನು ಸಾಮಾಜಿಕ ಜಾಲತಾಣದಲ್ಲಿ ಮಾತನಾಡುವಾಗ ಭಾರತೀಯರಿಂದಲು ಹಲವು ಸಂದೇಶಗಳು ಬರುತ್ತವೆ' ಎಂದಿದ್ದಾರೆ.

ಐಪಿಎಲ್ ಮೊದಲ ವಾರದಲ್ಲಿ ಭರ್ಜರಿ ಮನರಂಜನೆ

ಐಪಿಎಲ್ ಮೊದಲ ವಾರದಲ್ಲಿ ಭರ್ಜರಿ ಮನರಂಜನೆ

ಸುದೀರ್ಘ ವಿರಾಮದ ಬಳಿಕ ಈ ಬಾರಿಯ ಐಪಿಎಲ್ ಯುಎಇನಲ್ಲಿ ಸೆಪ್ಟೆಂಬರ್ 19ರಿಂದ ಆರಂಭವಾಗಿದೆ. ಮೊದಲ ವಾರ ಅದ್ಭುತವಾಗಿ ಅಂತ್ಯವಾಗಿದ್ದು ಏಳು ಪಂದ್ಯಗಳು ನಡೆದಿದೆ. ಕ್ರಿಕೆಟ್ ಅಭಿಮಾನಿಗಳು ಸಾಕಷ್ಟು ಮನರಂಜನೆಯನ್ನು ಮೊದಲ ವಾರದಿಂದಲೇ ಪಡೆದುಕೊಳ್ಳುತ್ತಿದ್ದು, ಒಂದು ಸೂಪರ್ ಓವರ್, ಒಂದು ದಾಖಲೆಯ ಶತಕ ಹಾಗೂ ಸಿಕ್ಸರ್‌ಗಳ ಸುರಿಮಳೆಯನ್ನು ವೀಕ್ಷಕರು ಆನಂದಿಸಿದ್ದಾರೆ.

ಐಪಿಎಲ್‌ನಲ್ಲಿ ಪಾಕ್ ಆಟಗಾರರು

ಐಪಿಎಲ್‌ನಲ್ಲಿ ಪಾಕ್ ಆಟಗಾರರು

ಐಪಿಎಲ್‌ನ ಈ ಹಿಂದೆ ಪಾಕಿಸ್ತಾನದ ಆಟಗಾರರು ಪಾಲ್ಗೊಂಡಿರುವ ಇತಿಹಾಸವಿದೆ. ಐಪಿಎಲ್‌ನ ಆರಂಭಿಕ ಆವೃತ್ತಿಯಲ್ಲಿ ಶಾಹಿದ್ ಅಫ್ರಿದಿ ಸಹಿತ ಶೋಯೆಬ್ ಅಖ್ತರ್, ಯೂನಿಸ್ ಖಾನ್, ಸಲ್ಮಾನ್ ಭಟ್, ಮಿಸ್ಬಾ ಉಲ್ ಹಕ್, ಸೋಹೈಲ್ ತನ್ವೀರ್, ಉಮರ್ ಗುಲ್, ಶೋಯೆಬ್ ಮಲಿಕ್, ಕಮ್ರಾನ್ ಅಕ್ಮಲ್, ಮೊಹಮದ್ ಆಸಿಫ್ ಮತ್ತು ಮೊಹಮದ್ ಹಫೀಜ್ ಐಪಿಎಲ್‌ನ ಭಾಗವಾಗಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, September 27, 2020, 10:28 [IST]
Other articles published on Sep 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X