ಪಾಂಡ್ಯ ಬ್ರದರ್ಸ್‌ ಖರೀದಿಸಿರುವ ಹೊಸ ಕಾರಿನ ಬೆಲೆಯೆಷ್ಟೂ ಗೊತ್ತಾ?

ಮುಂಬೈ, ಆಗಸ್ಟ್‌ 18: ವೆಸ್ಟ್‌ ಇಂಡೀಸ್‌ ವಿರುದ್ಧದ ಟಿ20 ಸರಣಿಯಲ್ಲಿ ಭರ್ಜರಿ ಆಲ್‌ರೌಂರ್‌ ಪ್ರದರ್ಶನ ನೀಡಿ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಕೃಣಾಲ್‌ ಪಾಂಡ್ಯ, ಇದೀಗ ನೂತನ ಐಶಾರಾಮಿ ಕಾರ್‌ ಒಂದನ್ನು ಖರೀದಿಸಿದ್ದು ಕಿರಿಯ ಸಹೋದರ ಹಾರ್ದಿಕ್‌ ಪಾಂಡ್ಯ ಜೊತೆಗೆ ಮುಂಬೈನ ರಸ್ತೆಗಳಲ್ಲಿ ಅಡ್ಡಾಡುತ್ತಿರುವ ವಿಡಿಯೊ ಸೋಷಿಯಲ್‌ ಮೀಡಿಯಾಗಳಲ್ಲಿ ವೈರಲ್‌ ಆಗಿದೆ.

ಕೃಣಾಲ್‌ ಮತ್ತು ಹಾರ್ದಿಕ್‌ ಇಬ್ಬರೂ ತಮ್ಮ ನೂತನ ಕಿತ್ತಳೆ ಬಣ್ಣದ ಲಂಬರ್ಗಿನಿ ಐಶಾರಾಮಿ ಕಾರ್‌ನೊಂದಿಗೆ ಮುಂಬೈನ ರಸ್ತೆಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಅಂದಹಾಗೆ ಈ ಕಾರಿನ ಬೆಲೆಯಾದರೂ ಎಷ್ಟೂ ಅಂತೀರ. ಅಂದಾಜು ಆರೂವರೆ ಕೋಟಿ ರೂ. ಆಗಲಿದೆ.

ಕೆಪಿಎಲ್‌ 2019: ಕೊನೆಯ ಓವರ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ಗೆ ರೋಚಕ ಜಯ

ಭಾರತ ತಂಡದ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಕೃಣಾಲ್‌ ಪಾಂಡ್ಯ ಅವರಿಗೆ ಟಿ20 ಸರಣಿಯಲ್ಲಿ ಆಡಲು ಮಾತ್ರವೇ ಅವಕಾಶ ನೀಡಲಾಗಿತ್ತು. ಮತ್ತೊಂದೆಡೆ ಫಿಟ್ನೆಸ್‌ ಸಮಸ್ಯೆ ಎದುರಿಸುತ್ತಿದ್ದ ಕಿರಿಯ ಸಹೋದರ ಹಾರ್ದಿಕ್‌ ಪಾಂಡ್ಯಗೆ ವಿಂಡೀಸ್‌ ಪ್ರವಾಸದಿಂದ ಸಂಪೂರ್ಣವಾಗಿ ವಿಶ್ರಾಂತಿ ನೀಡಲಾಗಿತ್ತು.

ಟಿ20 ಸರಣಿಯಲ್ಲಿ ಸರಣಿಯ ಅತ್ಯುತ್ತಮ ಆಟಗಾರನ ಗೌರವ ಪಡೆದ ಬಳಿಕ ಮಾತನಾಡಿದ್ದ ಕೃಣಾಲ್‌, ತಾವು ಏಕದಿನ ಕ್ರಿಕೆಟ್‌ ತಂಡದಲ್ಲೂ ಸ್ಥಾನ ಪಡೆದುಕೊಳ್ಳುವ ಪ್ರಯತ್ನದಲ್ಲಿ ಇರುವುದಾಗಿ ಹೇಳಿಕೊಂಡಿದ್ದರು.

ವಿಂಡೀಸ್‌ ವಿರುದ್ಧದ ಅಭ್ಯಾಸ ಪಂದ್ಯ, ಚೇತೇಶ್ವರ್‌ ಪೂಜಾರ ಶತಕ ವೈಭವ

"ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿ ನನ್ನ ಆತ್ಮವಿಶ್ವಾಸವನ್ನು ಹೆಚ್ಚುವಂತೆ ಮಾಡಿದೆ. ಇದು ಪ್ರಸಕ್ತ ಸಾಲಿನ ಮೊದಲ ಸರಣಿ. ಅದರಲ್ಲೂ ಉತ್ತಮ ತಂಡದ ಎದುರು ಶ್ರೇಷ್ಠ ಪ್ರದರ್ಶನ ನೀಡಿರುವುದು ವಿಶ್ವಾಸ ತಂದುಕೊಟ್ಟಿದೆ. ಇದು ಕೇವಲ ಆರಂಭ ಮಾತ್ರ. ಇದೇ ಲಯವನ್ನು ಮುಂದಿನ ಸರಣಿಗಳಲ್ಲಿ ಮುಂದುವರಿಸಲಿದ್ದೇನೆ. ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಆಡುವುದು ನನ್ನ ಗುರಿ. ಕಳೆದ ಎರಡು ವರ್ಷಗಳಿಂದ ಭಾರತ 'ಎ' ತಂಡದ ಪರ ಏಕದಿನ ಕ್ರಿಕೆಟ್‌ ಆಡಿದ್ದೇನೆ. ಇದು ಉತ್ತಮ ಅನುಭವ ತಂದುಕೊಟ್ಟಿದೆ," ಎಂದು ಕೃಣಾಲ್‌ ಹೇಳಿದ್ದರು.

ಐಸಿಸಿ ಟೆಸ್ಟ್‌ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ 60 ಅಂಕ ಬಾಚಿಕೊಂಡ ಶ್ರೀಲಂಕಾ

ಕೃಣಾಲ್‌ ಮತ್ತು ಹಾರ್ದಿಕ್‌ ಇಬ್ಬರೂ ಈ ಬಾರಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಪ್ರಶಸ್ತಿ ಗೆದ್ದ ಮುಂಬೈ ಇಂಡಿಯನ್ಸ್‌ ತಂಡದ ಸ್ಟಾರ್‌ ಆಲ್‌ರೌಂಡರ್‌ಗಳಾಗಿದ್ದಾರೆ. ಮುಂಬೈ ಇಂಡಿಯನ್ಸ್‌ ಮೂಲಕವೇ ತಮ್ಮ ಪ್ರತಿಭೆ ಅನಾವರಣ ಪಡಿಸಿ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿದ್ದಾರೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, August 18, 2019, 16:55 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X