ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಸದ್ಯದ ಇಬ್ಬರು ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳನ್ನು ಹೆಸರಿಸಿದ ಗಂಗೂಲಿ

Pant and Saha are our two best wicketkeeper-batsmen in the country: Sourav Ganguly

ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯನ್ನು ಪಡೆದ ಬಳಿಕ ಟೀಮ್ ಇಂಡಿಯಾ ಸೂಕ್ತ ವಿಕೆಟ್ ಕೀಪರ್ ಹೊಂದಲು ಸಾಧ್ಯವಾಗಿಲ್ಲ. ಸಾಕಷ್ಟು ಅವಕಾಶಗಳು ಪ್ರಯತ್ನಗಳ ಬಳಿಕವೂ ಸೂಕ್ತವಾದ ಆಯ್ಕೆಯಲ್ಲಿ ವಿಫಲವಾಗಿದೆ. ಆದರೆ ಟೆಸ್ಟ್ ಕ್ರಿಕೆಟ್‌ನಲ್ಲಿ ವೃದ್ಧಿಮಾನ್ ಸಾಹಾ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದಾರೆ.

ಬಿಸಿಸಿಐನ ಅಧ್ಯಕ್ಷ ಸೌರವ್ ಗಂಗೂಲಿ ಟೀಮ್ ಇಂಡಿಯಾದ ವಿಕೆಟ್ ಕೀಪರ್ ಬಗ್ಗೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈವರೆಗಿನ ಪ್ರದರ್ಶನಗಳನ್ನು ಗಮನಿಸಿದ ಬಳಿಕ ಸೌರವ್ ಗಂಗೂಲಿ ಇಬ್ಬರು ಆಟಗಾರರನ್ನು ಸದ್ಯ ಭಾರತದ ತಂಡದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂದು ಹೆಸರಿಸಿದ್ದಾರೆ.

India vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯIndia vs Australia: ಕನ್ನಡ ಕಾಮೆಂಟರಿಗೆ ಅಭಿಮಾನಿಗಳ ಒತ್ತಾಯ

ಹಾಗಾದರೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಮೆಚ್ಚುಗೆಯಾದ ಆ ಇಬ್ಬರು ಆಟಗಾರರು ಯಾರು? ಮುಂದೆ ಓದಿ

ಧೋನಿ ಕ್ರಿಕೆಟ್‌ನಿಂದ ದೂರವಾದ ನಂತರ

ಧೋನಿ ಕ್ರಿಕೆಟ್‌ನಿಂದ ದೂರವಾದ ನಂತರ

ಕಳೆದ ವರ್ಷದ ವಿಶ್ವಕಪ್‌ನಂತರ ಸೀಮಿತ ಓವರ್‌ಗಳ ಕ್ರಿಕೆಟ್‌ನಿಂದಲೂ ಎಂಎಸ್ ಧೋನಿ ದೂರುಳಿದರು. ಅದಾದಬಳಿಕ ಟೀಮ್ ಇಂಡಿಯಾದಲ್ಲಿ ವಿಕೆಟ್ ಕೀಪಿಂಗ್ ಸ್ಥಾನಕ್ಕೆ ಸಾಕಷ್ಟು ಪ್ರಯೋಗ ನಡೆಸಿತು. ರಿಷಭ್ ಪಂತ್, ಸಂಜು ಸ್ಯಾಮ್ಸನ್, ಕೆಎಲ್ ರಾಹುಲ್ ಈ ಸಂದರ್ಭದಲ್ಲಿ ಅವಕಾಶವನ್ನು ಪಡೆದುಕೊಂಡರು. ಆದರೆ ಈ ಪ್ರಶ್ನೆಗೆ ಸ್ಪಷ್ಟವಾದ ಉತ್ತರ ಇನ್ನೂ ದೊರೆತಿಲ್ಲ.

ಗಂಗೂಲಿ ಹೇಳಿದ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಗಂಗೂಲಿ ಹೇಳಿದ ಬೆಸ್ಟ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್

ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಯಾರು ಎಂಬುದಕ್ಕೆ ಇಬ್ಬರು ಆಟಗಾರರನ್ನು ಹೆಸರಿಸಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಖಾಯಂ ವಿಕೆಟ್ ಕೀಪರ್ ಆಗಿರುವ ವೃದ್ಧಿಮಾನ್ ಸಾಹಾ ಹಾಗೂ ರಿಷಭ್ ಪಂತ್ ಭಾರತದ ಸದ್ಯದ ಅತ್ಯುತ್ತಮ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

ಪಂತ್‌ಗೆ ಸಿಕ್ಕಿದೆ ಭರಪೂರ ಅವಕಾಶ

ಪಂತ್‌ಗೆ ಸಿಕ್ಕಿದೆ ಭರಪೂರ ಅವಕಾಶ

ಮಹೇಂದ್ರ ಸಿಂಗ್ ದೋನಿ ನಂತರ ಖಾಯಂ ವಿಕೆಟ್ ಕೀಪರ್ ಆಗಬಲ್ಲ ನಿರೀಕ್ಷೆ ಮೂಡಿಸಿದ್ದ ರಿಷಭ್ ಪಂತ್‌ಗೆ ಸಾಕಷ್ಟು ಅವಕಾಶಗಳನ್ನು ನೀಡಲಾಯಿತು. ಆದರೆ ರಿಷಭ್ ಪಂತ್ ಮಾತ್ರ ತಮ್ಮ ಮೇಲಿನ ನಿರೀಕ್ಷೆಗೆ ತಕ್ಕ ಪ್ರದರ್ಶನ ನೀಡಲೇ ಇಲ್ಲ. ಹಾಗಿದ್ದರೂ ಮಾಜಿ ಆಟಗಾರರು ಪಂತ್ ಬಗ್ಗೆ ಅಪಾರವಾದ ವಿಶ್ವಾಸವನ್ನು ವ್ಯಕ್ತಪಡಿಸಿಕೊಂಡೇ ಬಂದಿದ್ದಾರೆ. ಕಳೆದ ನ್ಯೂಜಿಲೆಂಡ್ ವಿರುದ್ದದ ಸರಭಿಯಲ್ಲೂ ಇದೇ ಮುಮದುವರಿದಾಗ ಒಂದೆರಡು ಅವಕಾಶಗಳು ಸಂಜು ಸ್ಯಾಮ್ಸನ್‌ಗೆ ದೊರೆಯಿತಾದರೂ ಆ ಸಂದರ್ಭದಲ್ಲಿ ಅದನ್ನು ಎರಡೂ ಕೈಗಳಿಂದ ಬಳಸಿಕೊಳ್ಳಲು ಸಂಜು ವಿಫಲರಾದರು. ಅನಿವಾರ್ಯವಾಗಿ ವಿಕೆಟ್ ಕೀಪಿಂಗ್ ಜವಾಬ್ಧಾರಿ ಕೂಡ ಕೆಎಲ್ ರಾಹುಲ್ ಹೆಗಲಿಗೆ ಬಿದ್ದಿತ್ತು. ಈ ಎರಡು ಜವಾಬ್ಧಾರಿಯನ್ನು ರಾಹುಲ್ ಸಮರ್ಥವಾಗಿ ನಿರ್ವಹಿಸಿದ್ದಾರು.

ಐಪಿಎಲ್‌ನಲ್ಲೂ ಪಂತ್ ವಿಫಲ

ಐಪಿಎಲ್‌ನಲ್ಲೂ ಪಂತ್ ವಿಫಲ

ಇನ್ನು ರಿಷಭ್ ಪಂತ್ ಈ ಬಾರಿಯ ಐಪಿಎಲ್‌ನಲ್ಲೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದಾರೆ. ಇಡೀ ಟೂರ್ನಿಯಲ್ಲಿ ಪಂತ್ ಫೈನಲ್ ಪಂದ್ತದಲ್ಲಿ ಸಿಡಿಸಿದ ಅರ್ಧ ಶತಕವೇ ಏಕೈಕ ಅರ್ಧ ಶತಕವಾಗಿದೆ. ಹಾಗಿದ್ದರೂ ಪಂತ್ ಮೇಲೆ ಮಾಜಿ ಕ್ರಿಕೆಟಿಗರ ವಿಶ್ವಾಸ ಕಡಿಮೆಯಾಗಿಲ್ಲ. ಈಗ ಸೌರವ್ ಗಂಗೂಲಿ ಕೂಡ ಇದೇ ವಿಶ್ವಾಸವನ್ನು ವ್ಯಕ್ತಪಡಿಸುತ್ತಿದ್ದಾರೆ. ಆದರೆ ಪಂತ್ ಮಾತ್ರ ತನ್ನ ನೈಜ ಸಾಮರ್ಥ್ಯದ ಪ್ರದರ್ಶನವನ್ನು ಯಾವಾಗ ನೀಡುತ್ತಾರೆ ಎಂಬುದು ಅಬಿಮಾನಿಗಳ ಪ್ರಶ್ನೆಯಾಗಿದೆ.

Story first published: Wednesday, November 25, 2020, 15:00 [IST]
Other articles published on Nov 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X