ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗಿಲ್‌ಕ್ರಿಸ್ಟ್‌ ಬಳಿಕ ಈ ಸಾಧನೆ ಮಾಡಿದ ಮೊದಲ ವಿಕೆಟ್ ಕೀಪರ್ ರಿಷಭ್ ಪಂತ್

Rishabh pant

ಕೇಪ್‌ಟೌನ್ ಟೆಸ್ಟ್‌ನಲ್ಲಿ ಟೀಂ ಇಂಡಿಯಾಕ್ಕೆ ಹೋರಾಟದ ಮೊತ್ತವನ್ನ ತಂದುಕೊಟ್ಟ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಅನೇಕ ದಾಖಲೆಗಳನ್ನ ತನ್ನ ಹೆಸರಿಗೆ ದಾಖಲಿಸಿಕೊಂಡಿದ್ದಾರೆ. ಭಾರತ ಪರ ಏಕಾಂಗಿ ಹೋರಾಟ ಪ್ರದರ್ಶಿಸಿ, ಟೀಂ ಇಂಡಿಯಾ ಪಂದ್ಯದಲ್ಲಿ ಇನ್ನೂ ಜೀವಂತಾಗಿದ್ರೆ ಅದಕ್ಕೆ ಕಾರಣ ಈ ಎಡಗೈ ಬ್ಯಾಟ್ಸ್‌ಮನ್.

ಮೂರನೇ ದಿನದಾಟದ ಆರಂಭದಲ್ಲೇ ಚೇತೇಶ್ವರ್ ಪೂಜಾರ ಔಟಾದ ನಂತರದ ಓವರ್‌ನಲ್ಲೇ ಅಜಿಂಕ್ಯ ರಹಾನೆ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ರು. ದಿನದ ಮೊದಲೆರಡು ಓವರ್‌ಗಳಲ್ಲಿ ಇಬ್ಬರು ಬ್ಯಾಟ್ಸ್‌ಮನ್‌ಗಳು ವಿಕೆಟ್ ಒಪ್ಪಿಸಿದ್ದು ಭಾರತಕ್ಕೆ ಭಾರೀ ಪೆಟ್ಟು ನೀಡಿತು.

ಆದ್ರೆ ಐದನೇ ವಿಕೆಟ್‌ಗೆ ಜೊತೆಯಾದ ಕೊಹ್ಲಿ ಮತ್ತು ರಿಷಭ್ ಪಂತ್ ಟೀಂ ಇಂಡಿಯಾದ ಲೀಡ್ ಹೆಚ್ಚಿಸಲು ಸಹಾಯ ಮಾಡಿದ್ರು. 94ರನ್‌ಗಳ ಜೊತೆಯಾಟವಾಡಿದ ಈ ಜೋಡಿಯನ್ನ ಲುಂಗಿ ಎನ್‌ಗಿಡಿ ಬೇರ್ಪಡಿಸಿದ್ರು. ಅತ್ಯಂತ ತಾಳ್ಮೆಯ ಆಟವಾಡಿದ್ದ ವಿರಾಟ್ ಕೊಹ್ಲಿ 29 ರನ್‌ಗಳಿಸಿದ್ದಾಗ ಔಟಾಗಿ ಪೆವಿಲಿಯನ್ ಸೇರಿಕೊಂಡ್ರು.

ಇದಾದ ಬಳಿಕ ಬಂದ ಯಾವೊಬ್ಬ ಆಟಗಾರನೂ ಕೂಡ ರಿಷಭ್ ಪಂತ್ ಗೆ ಸಾಥ್ ನೀಡಲಿಲ್ಲ. ಆದ್ರೆ ಏಕಾಂಗಿಯಾಗಿ ಹೋರಾಟ ನಡೆಸಿದ ರಿಷಭ್ ಪಂತ್ ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ಸಿಡಿಸಿ ಮಿಂಚಿದ್ರು. ಅದ್ರಲ್ಲೂ ನಾಲ್ಕನೇ ಇನ್ನಿಂಗ್ಸ್‌ ರಿಷಭ್ ಶತಕ ದಾಖಲಿಸಿದ್ದು ವಿಶೇಷವಾಗಿತ್ತು.

ದಕ್ಷಿಣ ಆಫ್ರಿಕಾದಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ವಿಕೆಟ್ ಕೀಪರ್

ದಕ್ಷಿಣ ಆಫ್ರಿಕಾದಲ್ಲಿ ಶತಕ ದಾಖಲಿಸಿದ ಭಾರತದ ಮೊದಲ ವಿಕೆಟ್ ಕೀಪರ್

139 ಎಸೆತಗಳಲ್ಲಿ ಅಜೇಯ 100 ರನ್ ಕಲೆಹಾಕಿದ ರಿಷಭ್ ಪಂತ್ ದಕ್ಷಿಣ ಆಫ್ರಿಕಾದಲ್ಲಿ ಹೊಸ ಇತಿಹಾಸವನ್ನೇ ಸೃಷ್ಟಿಸಿದ್ರು. ಹರಿಣಗಳ ನಾಡಲ್ಲಿ ಶತಕ ಸಿಡಿಸಿದ ಭಾರತದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ. 6 ಬೌಂಡರಿ ಮತ್ತು 4 ಸಿಕ್ಸರ್ ಸಿಡಿಸಿ ತಂಡದ ಲೀಡ್ ಮೊತ್ತವನ್ನ 200ರ ಗಡಿದಾಟಿಸಿದ್ರು.

ಡಿಆರ್‌ಎಸ್ LBW ನಾಟೌಟ್ ವಿವಾದ: ಜಗತ್ತೇ ನೋಡಿದೆ, ತೀರ್ಪು ಮ್ಯಾಚ್ ರೆಫರಿಗೆ ಬಿಟ್ಟಿದ್ದು ಎಂದ ಬೌಲಿಂಗ್ ಕೋಚ್

ಹರಿಣಗಳ ನಾಡಲ್ಲಿ ಸೆಂಚುರಿ ಸಿಡಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್

ಹರಿಣಗಳ ನಾಡಲ್ಲಿ ಸೆಂಚುರಿ ಸಿಡಿಸಿದ ಏಷ್ಯಾದ ಮೊದಲ ವಿಕೆಟ್ ಕೀಪರ್

ಭಾರತದ ಪರ ಅಷ್ಟೇ ಅಲ್ಲದೆ ರಿಷಭ್ ಪಂತ್ ಇಡೀ ಏಷ್ಯಾ ಕ್ರಿಕೆಟ್ ರಾಷ್ಟ್ರಗಳೇ ಒಮ್ಮೆ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾರೆ. ಹರಿಣಗಳ ನಾಡಲ್ಲಿ ಘಟಾನುಘಟಿ ಬ್ಯಾಟ್ಸ್‌ಮನ್‌ಗಳೇ ಅಲ್ಲಿನ ಪೇಸ್ ಮತ್ತು ಬೌನ್ಸ್ ಎದುರಿಸಲಾಗದೆ ವಿಕೆಟ್ ಒಪ್ಪಿಸಿದ ಉದಾಹರಣೆ ಸಾಕಷ್ಟಿದೆ. ಅಂತದ್ರಲ್ಲಿ ನಾಲ್ಕನೇ ಇನ್ನಿಂಗ್ಸ್‌ನಲ್ಲಿ ಅಜೇಯ ಶತಕ ದಾಖಲಿಸಿದ ರಿಷಭ್ ಈ ಸಾಧನೆ ಮಾಡಿದ ಏಷ್ಯಾದ ಮೊದಲ ವಿಕೆಟ್ ಕೀಪರ್ ಆಗಿದ್ದಾರೆ.

ಗಿಲ್‌ಕ್ರಿಸ್ಟ್ ಬಳಿಕ ರಿಷಭ್ ಅಮೋಘ ಸಾಧನೆ

ಗಿಲ್‌ಕ್ರಿಸ್ಟ್ ಬಳಿಕ ರಿಷಭ್ ಅಮೋಘ ಸಾಧನೆ

ಆಸ್ಟ್ರೇಲಿಯಾದ ದಿಗ್ಗಜ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಕ್ರಿಕೆಟ್ ಲೋಕದಲ್ಲಿ ಹೊಸ ಭಾಷ್ಯ ಬರೆದ ಪ್ಲೇಯರ್ ಆ್ಯಡಂ ಗಿಲ್‌ಕ್ರಿಸ್ಟ್‌ ಟೆಸ್ಟ್ ಕ್ರಿಕೆಟ್‌ನಲ್ಲಿ 6-7 ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿದು ಸುಲಭವಾಗಿ ಸೆಂಚುರಿ ಸಿಡಿಸುತ್ತಿದ್ದ ಸ್ಫೋಟಕ ಬ್ಯಾಟ್ಸ್‌ಮನ್. ಇಂತಹ ಗಿಲ್‌ಕ್ರಿಸ್ಟ್‌ ಹೆಸರಲ್ಲಿದ್ದ ಅಮೂಲ್ಯ ದಾಖಲೆಯನ್ನ ರಿಷಭ್ ತನ್ನ ಖಾತೆಗೆ ಸೇರಿಸಿಕೊಂಡಿದ್ದಾರೆ.

ಇಂಗ್ಲೆಂಡ್, ಆಸ್ಟ್ರೇಲಿಯಾ, ಭಾರತ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಶತಕ ಸಿಡಿಸಿದ ಎರಡನೇ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ಕನೇ ಶತಕ ದಾಖಲಿಸಿದ ರಿಷಭ್‌ರ ನಾಲ್ಕು ಶತಕಗಳು ನಾಲ್ಕು ಬೇರೆ ಬೇರೆ ರಾಷ್ಟ್ರಗಳಲ್ಲಿ ಅನ್ನೋದು ವಿಶೇಷ.

ಐಪಿಎಲ್ 2022 ಮೆಗಾ ಹರಾಜು: ಆಟಗಾರರ ನೋಂದಣಿಗೆ ಅಂತಿಮ ದಿನಾಂಕ ಪ್ರಕಟಿಸಿದ ಬಿಸಿಸಿಐ

ಏಷ್ಯಾದ ಹೊರಗೆ ಮೂರು ಶತಕ ಹೊಂದಿರುವ ಭಾರತದ ಏಕೈಕ ವಿಕೆಟ್ ಕೀಪರ್

ಏಷ್ಯಾದ ಹೊರಗೆ ಮೂರು ಶತಕ ಹೊಂದಿರುವ ಭಾರತದ ಏಕೈಕ ವಿಕೆಟ್ ಕೀಪರ್

ರಿಷಭ್ ಪಂತ್ ಭಾರತದ ಕ್ರಿಕೆಟ್‌ ಇತಿಹಾಸದಲ್ಲಿ ಯಾವೊಬ್ಬ ವಿಕೆಟ್ ಕೀಪರ್ ಮಾಡದ ಸಾಧನೆ ಮಾಡಿದ್ದಾರೆ. ಏಷ್ಯಾದ ಹೊರಗೆ ರಿಷಭ್ ಹೆಸರಿನಲ್ಲಿ ಮೂರು ಶತಕದ ದಾಖಲೆಯಿದೆ. ಆದ್ರೆ ಅದೇ ಭಾರತದ ಹಾಲಿ ಮತ್ತು ಮಾಜಿ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ವಿಜಯ್ ಮಂಜ್ರೇಕರ್, ಅಜಯ್ ರಾತ್ರ, ಮತ್ತು ವೃದ್ದಿಮಾನ್ ಸಾಹಾ ಹೆಸರಲ್ಲಿ ಒಂದು ಶತಕ ದಾಖಲಾಗಿದೆ.

ತನ್ನ ಸ್ಫೋಟಕ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿರುವ ರಿಷಭ್ 2020ರಿಂದ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಚ್ಚು ಸಿಕ್ಸರ್ ಸಿಡಿಸಿದ ಬ್ಯಾಟ್ಸ್‌ಮನ್‌ಗಳಲ್ಲಿ ಇಂಗ್ಲೆಂಡ್‌ನ ಬೆನ್‌ ಸ್ಟೋಕ್ಸ್‌ ಸಮನಾಗಿ 20 ಸಿಕ್ಸರ್ ಸಿಡಿಸಿದ್ದಾರೆ.

Story first published: Friday, January 14, 2022, 11:04 [IST]
Other articles published on Jan 14, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X