ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಂತ್ & ನಾನು ಒಳ್ಳೆಯ ಫ್ರೆಂಡ್ಸ್, ಸ್ಪರ್ಧೆಯಾಗಿ ಆತನ ನೋಡಲಾರೆ: ಸ್ಯಾಮ್ಸನ್

Pant & I are good friends, dont see him as competition says Samson

ನವದೆಹಲಿ, ಜೂನ್ 8: ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ 2015ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಆವತ್ತಿನ ಪಂದ್ಯದಲ್ಲಿ ಅಜಿಂಕ್ಯ ರಹಾನೆ ಟೀಮ್ ಇಂಡಿಯಾ ಮುನ್ನಡೆಸಿದ್ದರು. ಮುರಳಿ ವಿಜಯ್ ಅವರಿಂದ ಸಂಜು ಭಾರತ ತಂಡದ ಕ್ಯಾಪ್ ಪಡೆದುಕೊಂಡಿದ್ದರು.

ತೆಲುಗು ಸಾಂಗಿನ ಚಂದದ ವೀಡಿಯೋ ಹಂಚಿಕೊಂಡ ಡೇವಿಡ್ ವಾರ್ನರ್ತೆಲುಗು ಸಾಂಗಿನ ಚಂದದ ವೀಡಿಯೋ ಹಂಚಿಕೊಂಡ ಡೇವಿಡ್ ವಾರ್ನರ್

ಆ ದಿನ 7ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಸಂಜು ಸ್ಯಾಮ್ಸನ್ 19 ಎಸೆತಗಳಲ್ಲಿ 24 ರನ್ ಬಾರಿಸಿದ್ದರು. ಅದಾಗಿ 5 ವರ್ಷಗಳ ಬಳಿಕ ಅಂದರೆ 2020ರಲ್ಲಿ ಬೇ ಓವಲ್‌ನಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಆಡಿದ್ದರು. ಕಡಿಮೆ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದರೂ ಸಂಜು ಪ್ರತಿಭಾನ್ವಿತ ಆಟಗಾರನೆನ್ನುವುದರಲ್ಲಿ ಅನುಮಾನವಿಲ್ಲ.

13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!13ನೇ ಆವೃತ್ತಿಯ ಐಪಿಎಲ್ ಯುಎಇಯಲ್ಲಿ ನಡೆಯೋ ಸಾಧ್ಯತೆ ಹೆಚ್ಚು!

ಇದೇ ಸಂಜು, ತನ್ನ ಮತ್ತು ರಿಷಬ್ ಪಂತ್ ನಡುವಿನ ಸ್ಪರ್ಧೆಯ ಬಗ್ಗೆ ಅನಿಸಿಕೆ ಹಂಚಿಕೊಂಡಿದ್ದಾರೆ. 'ತಂಡದಲ್ಲಿ ಆಡಲು ಅವಕಾಶ ಒದಗೋದು ತಂಡದ ಕಾಂಬಿನೇಶನ್‌ ಅವಲಂಬಿಸಿದೆ. ನಾನು (ರಿಷಬ್ ಪಂತ್ ಜೊತೆಗಿನ ಸ್ಪರ್ಧೆ) ಇಂಥದ್ದನ್ನೆಲ್ಲಾ ಯೋಚಿಸಿಲ್ಲ. ಕ್ರಿಕೆಟರ್ ಆಗಿದ್ದುಕೊಂಡು, ತಂಡದಲ್ಲಿ ಆಯ್ಕೆ ಸಿಗಬೇಕಾದರೆ ಸ್ಪರ್ಧೆ ಮುಖ್ಯ ಅನ್ನುತ್ತಾರೆ, ಇನ್ನೊಬ್ಬರ ಮೇಲೆ ಕಣ್ಣಿಟ್ಟಿರಬೇಕು ಅನ್ನುತ್ತಾರೆ. ಆದರೆ ಕ್ರಿಕೆಟ್ ಆಡುವ ರೀತಿ ಅದೆಂದು ನಾನು ಅಂದುಕೊಳ್ಳಲಾರೆ,' ಎಂದು ಸ್ಯಾಮ್ಸನ್ ಹೇಳಿದ್ದಾರೆ.

ಭಾರತ ಇನ್ನೂ ವಿಶ್ವಕಪ್ ಸೋಲಿನ ನೋವಿನಿಂದ ಹೊರಬಂದಿಲ್ಲ: ಬೌಲಿಂಗ್ ಕೋಚ್ ಭರತ್ ಅರುಣ್ಭಾರತ ಇನ್ನೂ ವಿಶ್ವಕಪ್ ಸೋಲಿನ ನೋವಿನಿಂದ ಹೊರಬಂದಿಲ್ಲ: ಬೌಲಿಂಗ್ ಕೋಚ್ ಭರತ್ ಅರುಣ್

'ನನ್ನ ಮತ್ತು ರಿಷಬ್ ಪಂತ್ ನಡುವಿನ ಸ್ಪರ್ಧೆಯ ಬಗ್ಗೆ ಜನ ಮಾತನಾಡುವಾಗ ನಾನು ಮತ್ತು ಪಂತ್ ಜೊತೆಯಾಗಿ ಆಡಿದ್ದು ನನಗೆ ನೆನಪಾಗುತ್ತಿರುತ್ತದೆ. ಜೊತೆಯಾಗಿ ಆಡಿದ್ದಷ್ಟೇ ಅಲ್ಲ, ತರ್ಲೆ-ತಮಾಷೆ ಹೀಗೆ ನಾವಿಬ್ಬರು ಸಾಕಷ್ಟು ಖುಷಿಪಟ್ಟಿದ್ದೇವೆ. ಪಂತ್-ನಾನು ಬೌಲರ್‌ಗಳ ವಿರುದ್ಧ ಪಾರಮ್ಯ ಮೆರೆಯುತ್ತಿದ್ದೆವು. ಹೀಗಾಗಿ ಆತನ ಜೊತೆ ಆಡಲು ನಾನು ಯಾವತ್ತಿಗೂ ಮುಂದೆ ಬರುತ್ತೇನೆ. ಪಂತ್ ಜೊತೆಗೆ ಸ್ಪರ್ಧಿಸುವುದನ್ನು ಸ್ವತಃ ನಾನೇ ಪರಿಗಣಿಸಲಾರೆ,' ಎಂದು ಸಂಜು ವಿವರಿಸಿದರು.

Story first published: Monday, June 8, 2020, 23:01 [IST]
Other articles published on Jun 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X