ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ತಂಡದಲ್ಲಿ ಸ್ಥಾನ ಭದ್ರಪಡಿಸಬೇಕಾದರೆ ಆಸ್ಟ್ರೇಲಿಯಾದಲ್ಲಿ ಆತ ರನ್ ಗಳಿಸಬೇಕು: ಹರ್ಭಜನ್ ಸಿಂಗ್

Pant is a quality player and we expect him to do well in Australia: Harbhajan Singh

ಟೀಮ್ ಇಂಡಿಯಾದ ಯುವ ಆಟಗಾರನ ಪ್ರದರ್ಶನದ ಬಗ್ಗೆ ಅನುಭವಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಮಾತನಾಡಿದ್ದಾರೆ. ತಂಡದಲ್ಲಿ ಆ ಆಟಗಾರ ತನ್ನ ಸ್ಥಾನವನ್ನು ಭದ್ರಪಡಿಸಬೇಕಾದರೆ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿ ಆತ ಉತ್ತಮವಾಗಿ ರನ್ ಗಳಿಸಬೇಕು ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಹರ್ಭಜನ್ ಸಿಂಗ್ ಈ ರೀತಿಯಾಗಿ ಮಾತನಾಡಿದ್ದು ಸಾಕಷ್ಟು ಭರವಸೆಯನ್ನು ಹುಟ್ಟುಹಾಕಿದ್ದ ರಿಷಭ್ ಪಂತ್ ಬಗ್ಗೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅವಕಾಶಗಳನ್ನು ನೀಡಿಯೂ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ಪಂತ್ ವಿಫಲರಾಗಿದ್ದಾರೆ. ಜೊತೆಗೆ ಈ ಬಾರಿಯ ಐಪಿಎಲ್‌ನಲ್ಲೂ ಹೇಳಿಕೊಳ್ಳುವಂತಾ ಪ್ರದರ್ಶನ ಪಂತ್ ಬ್ಯಾಟ್‌ನಿಂದ ಹೊರಬರಲಿಲ್ಲ.

ವಿರಾಟ್ ಕೊಹ್ಲಿಯ ತಂಡದ ಜೊತೆಗಿರಲು ಇಷ್ಟಪಡುತ್ತೇನೆ: ಬಾರ್ಡರ್ವಿರಾಟ್ ಕೊಹ್ಲಿಯ ತಂಡದ ಜೊತೆಗಿರಲು ಇಷ್ಟಪಡುತ್ತೇನೆ: ಬಾರ್ಡರ್

ಆದರೆ ಹರ್ಭಜನ್ ಸಿಂಗ್ ರಿಷಭ್ ಪಂತ್ ಸಾಮರ್ಥ್ಯದ ಬಗ್ಗೆ ವಿಸ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಭಾರತ ತಂಡದಲ್ಲಿ ಮೂರು ಮಾದರಿಗಳಲ್ಲೂ ವಿಕೆಟ್ ಕೀಪರ್ ಅಗುವ ಅರ್ಹತೆ ರಿಷಬ್ ಪಂತ್‌ಗೆ ಇದೆ. ತನಗೆ ಸಿಕ್ಕ ಅವಕಾಶಗಳನ್ನು ಆತ ಉತ್ತಮವಾಗಿ ಉಪಯೋಗಿಸಿಕೊಳ್ಳಬೇಕಿದೆ ಎಂದು ಭಜ್ಜಿ ಹೇಳಿದ್ದಾರೆ.

"ರಿಷಭ್ ಪಂತ್ ಅವರಿಂದ ಬಯಸುತ್ತಿರುವ ಪ್ರದರ್ಶನವನ್ನು ನಿಡಲು ಅವರಿಂದ ಸಾಧ್ಯವಾಗಿಲ್ಲ. ಆದರೆ ಆತ ಇನ್ನೂ ಯುವ ಆಟಗಾರ. ಆತನಲ್ಲಿ ಸಾಖಷ್ಟು ಸಾಮರ್ಥ್ಯವಿದೆ ಎಮದು ನಮಗೆ ತಿಳಿದಿದೆ. ಆತ ಭವಿಷ್ಯದಲ್ಲಿ ಅತ್ಯುತ್ತಮವಾಗಿ ರೂಪುಗೊಳ್ಳುವ ಸಾಧ್ಯತೆಯಿದೆ" ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋಬ್ಯಾಟಿಂಗ್ ಮಾಡಿದ ಚಾಹಲ್ ಕಾಲೆಳೆದ ಡೇಲ್ ಸ್ಟೇನ್: ವಿಡಿಯೋ

"ಇತ್ತೀಚೆಗೆ ಅಂತ್ಯವಾದ ಐಪಿಎಲ್ 2020ಯಲ್ಲೂ ರಿಷಭ್ ಪಂತ್ ದೊಡ್ಡ ಯಶಸ್ಸನ್ನು ಕಾಣಲಿಲ್ಲ. ಡೆಲ್ಲಿ ತಂಡದ ಪರವಾಗಿ ಹೆಚ್ಚನ ರನ್ ಗಳಿಸಲು ಸಾಧ್ಯವಾಗಲಿಲ್ಲ. ಆದೆ ಆತನೋರ್ವ ಉತ್ತಮ ಆಟಗಾರ ಎಮಬುದು ನಮಗೆ ತಿಳಿದಿದೆ. ಆತ 3 ಮಾದರಿಗಳಲ್ಲೂ ಕಮ್‌ಬ್ಯಾಕ್ ಮಾಡಲು ಬಯಸಿದರೆ ಬಳಿಕ ಆತ ಉತ್ತಮ ರನ್ ಗಳಿಸಲು ಸಾಧ್ಯವಿದೆ. ಹಾಗೂ ತನ್ನ ಸಾಮರ್ಥ್ಯವನ್ನು ತೋರ್ಪಡಿಸಲಿದ್ದಾರೆ. ಅತಿ ಶೀಘ್ರದಲ್ಲಿಯೇ ಇದು ನಡೆಯಲಿದೆ" ಎಂದು ಹರ್ಭಜನ್ ಸಿಂಗ್ ರಿಷಭ್ ಪಂತ್ ಬಗ್ಗೆ ಇಶ್ವಾಸದ ಮಾತುಗಳನ್ನು ಆಡಿದ್ದಾರೆ.

Story first published: Friday, November 20, 2020, 12:36 [IST]
Other articles published on Nov 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X