ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಲ್ಲಾ ಕ್ರಿಕೆಟ್ ಮಾದರಿಗೆ ನಿವೃತ್ತಿ ಘೋಷಿಸಿದ ಪಾರ್ಥಿವ್ ಪಟೇಲ್

Parthiv patel announced his retirement for all formats of the game

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿ ಆಡುತ್ತಿದ್ದ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ಬುಧವಾರ (ಡಿಸೆಂಬರ್ 9) ನಿವೃತ್ತಿ ಘೋಷಿಸಿದ್ದಾರೆ.

ಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನಿಂದ ಡೇವಿಡ್ ವಾರ್ನರ್ ಹೊರಕ್ಕೆಭಾರತ ವಿರುದ್ಧದ ಆರಂಭಿಕ ಟೆಸ್ಟ್‌ನಿಂದ ಡೇವಿಡ್ ವಾರ್ನರ್ ಹೊರಕ್ಕೆ

35ರ ಹರೆಯದ ಪಾರ್ಥಿವ್ ಪಟೇಲ್ 17ರ ಹರೆಯದವರಾಗಿದ್ದಾಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ವೃತ್ತಿ ಜೀವನದಲ್ಲಿ ಒಟ್ಟು 25 ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡ ಪ್ರತಿನಿಧಿಸಿರುವ ಪಾರ್ಥಿವ್ 31.13ರ ಸರಾಸರಿಯಂತೆ 934 ರನ್ ಗಳಿಸಿದ್ದಾರೆ.

ಇನ್ನು 38 ಏಕದಿನ ಪಂದ್ಯಗಳಲ್ಲಿ 23.74ರ ಸರಾಸರಿಯಂತೆ 736 ರನ್, 4 ಅರ್ಧ ಶತಕ, 2 ಟಿ20ಐ ಪಂದ್ಯಗಳಲ್ಲಿ 36 ರನ್, 139 ಐಪಿಎಲ್ ಪಂದ್ಯಗಳಲ್ಲಿ 2848 ರನ್ ಗಳಿಸಿದ್ದಾರೆ. ಐಪಿಎಲ್‌ನಲ್ಲಿ ಪಾರ್ಥಿವ್ ಅವರು ಚೆನ್ನೈ ಸೂಪರ್ ಕಿಂಗ್ಸ್, ಡೆಕನ್ ಚಾರ್ಜರ್ಸ್, ಸನ್ ರೈಸರ್ಸ್ ಹೈದರಾಬಾದ್, ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಪರ ಆಡಿದ್ದಾರೆ.

ಟೀಮ್ ಇಂಡಿಯಾದ ಭವಿಷ್ಯವಾಗುವ ಸಾಮರ್ಥ್ಯ ಸಂಜು ಸ್ಯಾಮ್ಸನ್ ಬಳಿಯಿದೆ: ಹರ್ಭಜನ್ ಸಿಂಗ್ಟೀಮ್ ಇಂಡಿಯಾದ ಭವಿಷ್ಯವಾಗುವ ಸಾಮರ್ಥ್ಯ ಸಂಜು ಸ್ಯಾಮ್ಸನ್ ಬಳಿಯಿದೆ: ಹರ್ಭಜನ್ ಸಿಂಗ್

ಚಿಕ್ಕ ವಯಸ್ಸಿನಲ್ಲಿ ಪಾರ್ಥಿವ್ ಭಾರತಕ್ಕೆ ಆಡುತ್ತಿದ್ದಾಗ ಅವರಿಗೆ 'ಹಾಲು ಗಲ್ಲದ ಮಗು' ಅನ್ನೋ ಅಡ್ಡ ಹೆಸರಿತ್ತು. ಟ್ವಿಟರ್ ಮೂಲಕ ನಿವೃತ್ತಿ ನಿರ್ಧಾರ ಪ್ರಕಟಿಸಿರುವ ಪಾರ್ಥಿವ್, 'ಎಲ್ಲಾ ಕ್ರಿಕೆಟ್‌ ಮಾದರಿಗಳಿಂದ ನಾನು ಇವತ್ತು ನಿವೃತ್ತಿ ಘೋಷಿಸುತ್ತಿದ್ದೇನೆ. 18 ವರ್ಷಗಳ ನನ್ನ ಕ್ರಿಕೆಟ್ ಪ್ರಯಾಣಕ್ಕೆ ಇಂದು ಕೊನೆ ಹಾಡುತ್ತಿದ್ದೇನೆ. ನಾನು ಅನೇಕರಿಗೆ ಆಭಾರಿಯಾಗಿದ್ದೇನೆ,' ಎಂದು ಬರೆದುಕೊಂಡಿದ್ದಾರೆ.

Story first published: Wednesday, December 9, 2020, 14:17 [IST]
Other articles published on Dec 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X