ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆರ್‌ಸಿಬಿ ಯುವ ಆಟಗಾರನ ಪ್ರದರ್ಶನಕ್ಕೆ ಪಾರ್ಥಿವ್ ಪಟೇಲ್ ಮೆಚ್ಚುಗೆ

Parthiv Patel praises young RCB pacers performances in IPL 2021

ನವದೆಹಲಿ: ವಿರಾಟ್ ಕೊಹ್ಲಿ ನಾಯಕಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು 2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಆರಂಭದಿಂದಲೂ ಅದ್ಭುತ ಪ್ರದರ್ಶನ ನೀಡಿತ್ತು. ಇದಕ್ಕೆ ಪ್ರಮುಖ ಕಾರಣ ತಂಡದ ಯುವ ವೇಗಿ ಹರ್ಷಲ್ ಪಟೇಲ್ ಮತ್ತು ಮೊಹಮ್ಮದ್ ಸಿರಾಜ್. ಆರ್‌ಸಿಬಿಗೆ ಬೌಲಿಂಗ್‌ ಬಲ ತುಂಬಿದ್ದ ಇಬ್ಬರೂ ಟೂರ್ನಿಯುದ್ದಕ್ಕೂ ಗಮನಾರ್ಹ ಪ್ರದರ್ಶನ ತೋರಿದ್ದರು.

IPL 2021 Revenue : ಬಿಸಿಸಿಐಗೆ ನಷ್ಟವಾದರೂ ಐಪಿಎಲ್ ಆಟಗಾರರಿಗೆ ಸಂಪೂರ್ಣ ಹಣ ಕೊಡಲೇಬೇಕು!IPL 2021 Revenue : ಬಿಸಿಸಿಐಗೆ ನಷ್ಟವಾದರೂ ಐಪಿಎಲ್ ಆಟಗಾರರಿಗೆ ಸಂಪೂರ್ಣ ಹಣ ಕೊಡಲೇಬೇಕು!

14ನೇ ಆವೃತ್ತಿಯ ಐಪಿಎಲ್ 29 ಪಂದ್ಯಗಳ ಬಳಿಕ ಅಮಾನತಾಯಿತಾದರೂ ಆದ ಪಂದ್ಯಗಳಲ್ಲಿ ಅತ್ಯಧಿಕ ವಿಕೆಟ್ ಪಟ್ಟಿ ಗಮನಿಸಿದರೆ ಅಲ್ಲಿ ನಂ.1 ಸ್ಥಾನದಲ್ಲಿ ಹರ್ಷಲ್ ಪಟೇಲ್ ಕಾಣಿಸುತ್ತಾರೆ. ಇದೊಂದೇ ನಿದರ್ಶನ ಸಾಕು ಆರ್‌ಸಿಬಿ ಈ ಬಾರಿ ಗೆಲುವಿನ ಲಯಕ್ಕೆ ಬರಲು ಪಟೇಲ್ ಕೊಡುಗೆ ಮಹತ್ವದ್ದಾಗಿತ್ತು ಅನ್ನೋದಕ್ಕೆ. ಇತ್ತ ಸಿರಾಜ್ ಹೆಚ್ಚು ವಿಕೆಟ್ ಪಡೆದಿಲ್ಲವಾದರೂ ಡೆತ್ ಓವರ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶಿಸಿದ್ದರು.

ಹೈದರಾಬಾದ್ ವೇಗಿಯಾಗಿರುವ ಮೊಹಮ್ಮದ್ ಸಿರಾಜ್ ಅವರನ್ನು ಆರ್‌ಸಿಬಿ ಮಾಜಿ ಆಟಗಾರ ಪಾರ್ಥಿವ್ ಪಟೇಲ್ ಶ್ಲಾಘಿಸಿದ್ದಾರೆ. ಈ ಐಪಿಎಲ್‌ ಸೀಸನ್‌ನ ಸ್ಟೋರಿಯೇ ಸಿರಾಜ್ ಎಂದು ಪಾರ್ಥಿವ್ ಹೊಗಳಿದ್ದಾರೆ. ಆರ್‌ಸಿಬಿ ತನ್ನ ಡೆತ್ ಓವರ್‌ ಸಮಸ್ಯೆಯನ್ನು ನಿವಾರಿಸಿಕೊಂಡಿದೆ ಎಂದವರು ಹೇಳಿದ್ದಾರೆ.

ಡೇವಿಡ್ ವಾರ್ನರ್‌ಗೆ ಮನ ಕಲುಕುವ ಸಂದೇಶ ಬರೆದ ಪುತ್ರಿಯರುಡೇವಿಡ್ ವಾರ್ನರ್‌ಗೆ ಮನ ಕಲುಕುವ ಸಂದೇಶ ಬರೆದ ಪುತ್ರಿಯರು

'ಡೆತ್‌ ಓವರ್‌ಗೆ ಸಂಬಂಧಿಸಿದ ಸಮಸ್ಯೆಯನ್ನು ಆರ್‌ಸಿಬಿ ಅದ್ಭುತ ರೀತಿಯಲ್ಲಿ ಬಗೆಹರಿಸಿಕೊಂಡಿದೆ. ಮೊಹಮ್ಮದ್ ಸಿರಾಜ್ ಈ ಸೀಸನ್‌ನಲ್ಲಿ ಬೌಲಿಂಗ್‌ ಮಾಡಿದ ರೀತಿ ನೋಡಿದರೆ ಆತ ಈ ಸೀಸನ್‌ನ ಪ್ರಮುಖ ಸ್ಟೋರಿಯಾಗಿ ಕಾಣಿಸುತ್ತಾರೆ. ಈ ಸೀಸನ್‌ನಲ್ಲಿ ಸಿರಾಜ್ ಯಾರ್ಕರ್ ಬೌಲಿಂಗ್‌ಗಾಗಿ ಗಮನ ಸೆಳೆದಿದ್ದಾರೆ,' ಎಂದು ಪಾರ್ಥಿವ್ ಹೇಳಿದ್ದಾರೆ.

Story first published: Thursday, May 6, 2021, 19:11 [IST]
Other articles published on May 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X