ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕೈ ಬೆರಳು ಕಳೆದುಕೊಂಡ ಭಾವುಕ ಕ್ಷಣ ಸ್ಮರಿಸಿದ ಪಾರ್ಥಿವ್ ಪಟೇಲ್!

Parthiv Patel recalls incident when he lost one of his finger

ಬೆಂಗಳೂರು, ಏಪ್ರಿಲ್ 27: 'ಹಾಲುಗಲ್ಲದ ಮಗು' ಅಂತ ಅಡ್ಡ ಹೆಸರಿರುವ ಪಾರ್ಥಿವ್ ಪಟೇಲ್ ಅದ್ಭುತ ವಿಕೆಟ್ ಕೀಪಿಂಗ್ ಕೌಶಲಕ್ಕಾಗಿ ಟೀಮ್ ಇಂಡಿಯಾಕ್ಕೆ ಪಾದಾರ್ಪಣೆ ಮಾಡಿದವರು. 17ನೇ ಹರೆಯದವರಾಗಿದ್ದಾಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯೊಂದಿಗೆ ಪಾರ್ಥಿವ್ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಕಾಲಿರಿಸಿದ್ದರು. ಕ್ರಿಕೆಟ್ ಬಗೆಗಿನ ಹಿಡಿತ ಪಟೇಲ್ ಅವರನ್ನು ಪ್ರೀತಿಯ ಆಟಗಾರನನ್ನಾಗಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೆಲವೊಮ್ಮೆ ಧೋನಿ ಇಲ್ಲದಾಗ ಪಾರ್ಥಿವ್ ಭಾರತದ ವಿಕೆಟ್ ಕೀಪಿಂಗ್ ಜವಾಬ್ದಾರಿ ಹೊತ್ತುಕೊಂಡು ಸೈ ಎನಿಸಿಕೊಂಡಿದ್ದರು.

'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ'ನೀನು ನನ್ನ ಮಗನ ವೃತ್ತಿಬದುಕನ್ನೇ ಮುಗಿಸಿಬಿಟ್ಟೆ!': ಮಾತು ನೆನೆದ ಯುವಿ

ಈಗ 35ರ ಹರೆಯದವರಾಗಿರುವ ಪಾರ್ಥಿವ್ ಪಟೇಲ್ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ರಾಯಲ್ ಚಾಲೆಂಜರ್ಸ್ (ಐಪಿಎಲ್) ಪರ ಮತ್ತು ರಣಜಿ ಟ್ರೋಫಿಯಲ್ಲಿ ಗುಜರಾತ್ ತಂಡದ ಪರ ಆಡುತ್ತಿದ್ದಾರೆ. ಭಾರತ ತಂಡದಲ್ಲಿ ಪಾರ್ಥಿವ್ ಇತ್ತೀಚೆಗೆ ಕಾಣಿಸಿಕೊಂಡಿದ್ದಿಲ್ಲ.

ಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆಎಲ್ಲಾ ಮಾದರಿಯ ಕ್ರಿಕೆಟ್‌ನಿಂದ ಉಮರ್ ಅಕ್ಮಲ್‌ಗೆ 3 ವರ್ಷ ಅಮಾನತು ಶಿಕ್ಷೆ

ಪ್ರತಿಭಾನ್ವಿತ ಆಟಗಾರನಾಗಿರುವ ಪಾರ್ಥಿವ್‌ ಅವರ ಕೈಯಲ್ಲಿ ಒಂದು ಕಿರುಬೆರಳಿಲ್ಲ. ಈ ಬೆರಳು ಕಳೆದುಕೊಂಡಿದ್ದು ಹೇಗೆಂಬುದರ ಬಗ್ಗೆ ಪಟೇಲ್ ಭಾವನಾತ್ಮಕವಾಗಿ ಮಾತನಾಡಿದ್ದಾರೆ.

ಎಳವೆಯಲ್ಲೇ ಕೈ ಬೆರಳು ಕಟ್

ಎಳವೆಯಲ್ಲೇ ಕೈ ಬೆರಳು ಕಟ್

ತಾನು ಕೈಬೆರಳು ಕಳೆದುಕೊಂಡಿದ್ದರ ಬಗ್ಗೆ ಮತ್ತು ಅದರಿಂದ ತಾನು ಅನುಭವಿಸಿದ ಕಷ್ಟಗಳ ಬಗ್ಗೆ ಪಾರ್ಥಿವ್ ಪಟೇಲ್ ಇನ್‌ಸ್ಟಾಗ್ರಾಮ್ ಲೈವ್‌ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. 6ರ ಹರೆಯದ ಬಾಲಕನಾಗಿದ್ದಾಗಲೇ ಪಾರ್ಥಿವ್ ತನ್ನ ಒಂದು ಕಿರುಬೆರಳನ್ನು ಕಳೆದುಕೊಂಡಿದ್ದರು. ಆದರೆ ಪಟೇಲ್‌ಗೆ 9 ಕೈಬೆರಳು ಇರುವ ವಿಚಾರ ಅನೇಕರಿಗೆ ಗೊತ್ತಿಲ್ಲ.

ಬೆರಳು ಕಳೆದುಕೊಂಡಿದ್ದೇಗೆ?

ಬೆರಳು ಕಳೆದುಕೊಂಡಿದ್ದೇಗೆ?

ಸದ್ಯ ಬರೀ 9 ಕೈ ಬೆರಳುಗಳನ್ನು ಹೊಂದಿರುವ ಪಾರ್ಥಿವ್ ಪಟೇಲ್ ತನ್ನ ಕೈ ಬೆರಳು ಕಳೆದುಕೊಂಡಿದ್ದೇಗೆ ಎಂದು ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. 'ನಾನು 6 ವರ್ಷದವನಾಗಿದ್ದಾಗ ಬಾಗಿಲಿನ ಸಂದಿಗೆ ಕೈ ಬೆರಳು ಸಿಲುಕಿ ತುಂಡಾಯಿತು,' ಎಂದು ಪಾರ್ಥಿವ್ ಭಾವನಾತ್ಮಕ ಕ್ಷಣ ಸ್ಮರಿಸಿಕೊಂಡರು.

ಗ್ಲೌಸ್‌ಗೆ ಟೇಪ್ ಕಟ್ಟುತ್ತಿದ್ದೆ

ಗ್ಲೌಸ್‌ಗೆ ಟೇಪ್ ಕಟ್ಟುತ್ತಿದ್ದೆ

'ಕಿರುಬೆರಳು ತುಂಡಾಗಿದ್ದರಿಂದ ಕೀಪಿಂಗ್ ಮಾಡೋಕೆ ಕಷ್ಟ ಅನ್ನಿಸುತ್ತಿತ್ತು. ಯಾಕೆಂದರೆ ಕೊನೇ ಬೆರಳು ಗ್ಲೌಸ್‌ನಲ್ಲಿ ಸರಿಯಾಗಿ ಕೂರುತ್ತಿರಲಿಲ್ಲ. ಹೀಗಾಗಿ ನಾನು ಗ್ಲೌಸ್‌ನ ಕೆಳಭಾಗದಲ್ಲಿ ಟೇಪ್ ಹಾಕುತ್ತಿದ್ದೆ. ಒಂದು ವೇಳೆ ನನ್ನ ಎಲ್ಲಾ ಕೈ ಬೆರಳುಗಳು ಇದ್ದಿದ್ದರೆ ಹೇಗಿರುತ್ತಿತ್ತು ಅಂತ ನಾನು ಅನೇಕ ಬಾರಿ ಯೋಚಿಸಿದ್ದೇನೆ. ಏನೇ ಇರಲಿ; 9 ಕೈ ಬೆರಳುಗಳಲ್ಲಿ ನಾನು ಟೀಮ್ ಇಂಡಿಯಾ ಪ್ರತಿನಿಧಿಸಿದ್ದೇನೆ ಅಂದುಕೊಳ್ಳೋದಕ್ಕೆ ಖುಷಿ ಅನ್ನಿಸುತ್ತೆ,' ಎಂದು ಪಾರ್ಥಿವ್ ಖುಷಿಯಲ್ಲಿ ನುಡಿದಿದ್ದಾರೆ.

ಪಾರ್ಥಿವ್ ಪಟೇಲ್ ಸಾಧನೆ

ಪಾರ್ಥಿವ್ ಪಟೇಲ್ ಸಾಧನೆ

2002ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಪಾರ್ಥಿವ್, 2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕಡೇಯ (ಟೆಸ್ಟ್) ಪಂದ್ಯವನ್ನಾಡಿದ್ದರು. 2016-17ರ ರಣಜಿಯಲ್ಲಿ ಪಾರ್ಥಿವ್ ನಾಯಕತ್ವದಲ್ಲಿ ಗುಜರಾತ್ ತಂಡ ಟ್ರೋಫಿ ಗೆದ್ದಿತ್ತು. ಆವತ್ತು ಫೈನಲ್‌ನಲ್ಲಿ ಮುಂಬೈ ವಿರುದ್ಧ ಪಟೇಲ್ ಕ್ರಮವಾಗಿ 90 ಮತ್ತು 143 ರನ್ ಬಾರಿಸಿದ್ದರು. ಭಾರತ ಪರ ಪಾರ್ಥಿವ್ 25 ಟೆಸ್ಟ್ ಪಂದ್ಯಗಳಲ್ಲಿ 934 ರನ್, 38 ಏಕದಿನ ಪಂದ್ಯಗಳಲ್ಲಿ 736 ರನ್ ಗಳಿಸಿದ್ದಾರೆ.

Story first published: Monday, April 27, 2020, 20:32 [IST]
Other articles published on Apr 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X