ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಪ್ಲೇಯಿಂಗ್ XI' ಬಗ್ಗೆ ಚಿಂತೆಯೇ ಮಾಡದ ಐಪಿಎಲ್ ತಂಡ ಹೆಸರಿಸಿದ ಪಾರ್ಥಿವ್

Parthiv Patel says one IPL team that dont have to tinnk a lot with their playing XI

ಮುಂಬೈ: ತಮ್ಮ 'ಪ್ಲೇಯಿಂಗ್‌ XI'ನ ಬಗ್ಗೆ ಚಿಂತೆ ಮಾಡುವ ಅಗತ್ಯವೇ ಇಲ್ಲದ ಇಂಡಿಯನ್ ಪ್ರೀಮಿಯರ್ ಲೀಗ್‌ ತಂಡವನ್ನು ಭಾರತದ ಮಾಜಿ ಬ್ಯಾಟ್ಸ್‌ಮನ್ ಕಮ್ ವಿಕೆಟ್ ಕೀಪರ್ ಪಾರ್ಥಿವ್ ಪಟೇಲ್ ಹೆಸರಿಸಿದ್ದಾರೆ. ಹಾಲಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್‌ಗೆ ಆಡುವ ತಂಡದ ಬಗ್ಗೆ ಚಿಂತೆ ಮಾಡಬೇಕಾದ ಅಗತ್ಯವೇ ಇಲ್ಲ ಎಂದು ಪಟೇಲ್ ಹೇಳಿದ್ದಾರೆ.

ಚೊಚ್ಚಲ ಐಪಿಎಲ್ ಪಂದ್ಯಕ್ಕೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI ಪ್ರಕಟಿಸಿದ ಹಾಗ್ಚೊಚ್ಚಲ ಐಪಿಎಲ್ ಪಂದ್ಯಕ್ಕೆ ಆರ್‌ಸಿಬಿ ಬಲಿಷ್ಠ ಪ್ಲೇಯಿಂಗ್ XI ಪ್ರಕಟಿಸಿದ ಹಾಗ್

ಏಪ್ರಿಲ್ 9ರಿಂದ ಮೇ 30ರ ವರೆಗೆ 14ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯಲಿದೆ. 2019 ಮತ್ತು 2020ರ ಸೀಸನ್‌ಗಳಲ್ಲಿ ಸತತ ಚಾಂಪಿಯನ್ಸ್ ಎನಿಸಿರುವ ಮುಂಬೈ ಇಂಡಿಯನ್ಸ್ ಬಗ್ಗೆ ಕ್ರಿಕೆಟ್‌ ಅಭಿಮಾನಿಗಳು ಕುತೂಹಲ ತಾಳಿದ್ದಾರೆ. ಯಾಕೆಂದರೆ ಈ ಸೀಸನ್‌ನಲ್ಲೂ ಎಂಐ ಗೆದ್ದರೆ ಐಪಿಎಲ್ ಇತಿಹಾಸದಲ್ಲೇ ಹ್ಯಾಟ್ರಿಕ್ ಟ್ರೋಫಿ ಗೆದ್ದ ಹಿರಿಮೆ ರೋಹಿತ್ ಶರ್ಮಾ ಪಡೆಯದ್ದಾಗಲಿದೆ.

'ತಾನು ಮುಂದೆ ಎಲ್ಲಿ ಆಡುತ್ತಿದ್ದೇನೆ ಅನ್ನೋದರ ಬಗ್ಗೆ ಮುಂಬೈ ಇಂಡಿಯನ್ಸ್‌ ಯೋಚಿಸುತ್ತದೆ ಎಂದು ನನಗನ್ನಿಸುತ್ತಿಲ್ಲ. ಉಳಿದ ಎಲ್ಲಾ ತಂಡಗಳು ಮೊದಲು ಎಲ್ಲಿ ಆಡುತ್ತಿದ್ದೇವೆ, ಯಾವ ತಂಡವನ್ನು ಆಡಿಸುತ್ತಿದ್ದೇವೆ, ಬೆಸ್ಟ್ ಪ್ಲೇಯಿಂಗ್ XI ಯಾವುದು ಎಂಬ ಬಗ್ಗೆ ಅವರು ತಲೆಕೆಡಿಸಿಕೊಳ್ಳುತ್ತಾರೆ. ಆದರೆ ಮುಂಬೈ ಈ ಸಂಗತಿಗಳ ಬಗ್ಗೆ ಯೋಚಿಸುತ್ತದೆ ಎಂದು ನನಗನ್ನಿಸುತ್ತಿಲ್ಲ,' ಎಂದು ಸ್ಟಾರ್‌ಸ್ಪೋರ್ಟ್ಸ್‌ನ ಗೇಮ್‌ ಪ್ಲ್ಯಾನ್‌ನಲ್ಲಿ ಮಾತನಾಡಿದ ಪಾರ್ಥೀವ್ ಪಟೇಲ್ ಹೇಳಿದ್ದಾರೆ.

ಆರ್‌ಸಿಬಿಗೆ ಕಪ್‌ ಗೆಲ್ಲಿಸಿಕೊಡಬಲ್ಲ 3 ಅನ್‌ಕ್ಯಾಪ್ಡ್ ಭಾರತೀಯರ ಹೆಸರಿಸಿದ ಹೆಸನ್!ಆರ್‌ಸಿಬಿಗೆ ಕಪ್‌ ಗೆಲ್ಲಿಸಿಕೊಡಬಲ್ಲ 3 ಅನ್‌ಕ್ಯಾಪ್ಡ್ ಭಾರತೀಯರ ಹೆಸರಿಸಿದ ಹೆಸನ್!

'ಒಂದು ವೇಳೆ ಚೆನ್ನೈನಲ್ಲಿ ಆಡುತ್ತಿದ್ದರೆ ನೀವು ಕೆಲವು ಸ್ಪಿನ್ನರ್‌ಗಳನ್ನು ನಿರೀಕ್ಷಿಸಬಹುದು. ಆದರೆ ಮುಂಬೈ ಇಂಡಿಯನ್ಸ್ ದೃಷ್ಟಿಕೋನದಲ್ಲಿ ಅವರು ತಮ್ಮ ಪ್ಲೇಯಿಂಗ್ XI ಬಗ್ಗೆ ಜಾಸ್ತಿ ಯೋಚಿಸುತ್ತಾರೆ ಎಂದು ನನಗನ್ನಿಸುವುದಿಲ್ಲ,' ಎಂದು ಪಟೇಲ್ ವಿವರಿಸಿದ್ದಾರೆ. ಏಪ್ರಿಲ್ 9ರಂದು ಚೆನ್ನೈನಲ್ಲಿ ನಡೆಯುವ ಆರಂಭಿಕ ಪಂದ್ಯದಲ್ಲಿ ಮುಂಬೈ ಮತ್ತು ಬೆಂಗಳೂರು ಕಾದಾಡಲಿವೆ.

Story first published: Saturday, April 3, 2021, 10:59 [IST]
Other articles published on Apr 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X