ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ವಾರಂಟೈನ್ ಮುಗಿಸಿ ಬಂದ ಕಮಿನ್ಸ್ ಬಿಗಿದಪ್ಪಿದ ಗರ್ಭಿಣಿ ಪತ್ನಿ: ವಿಡಿಯೋ

Pat Cummins Bear-Hugged By Pregnant Partner After Exiting Quarantine
ಕ್ವಾರಂಟೈನ್ ಮುಗಿಸಿ ಬಂದ ಕಮಿನ್ಸ್ ಬಿಗಿದಪ್ಪಿ ಕಣ್ಣೀರು ಹಾಕಿದ ಗರ್ಭಿಣಿ ಪತ್ನಿ | Oneindia Kannada

ಸಿಡ್ನಿ: ಪ್ಯಾಟ್ ಕಮಿನ್ಸ್, ಟೇವಿಡ್ ವಾರ್ನರ್, ಸ್ಟೀವ್ ಸ್ಮಿತ್ ಸೇರಿದಂತೆ ಇಂಡಿಯನ ಪ್ರೀಮಿಯರ್ ಲೀಗ್‌ (ಐಪಿಎಲ್) 2021ರ ಆವೃತ್ತಿಯಲ್ಲಿ ಪಾಲ್ಗೊಂಡಿದ್ದ ಆಸ್ಟ್ರೇಲಿಯಾ ಆಟಗಾರರು, ಅಧಿಕಾರಿಗಳು, ಕಾಮೆಂಟೇಟರ್‌ಗಳ ತಂಡ ಕ್ವಾರಂಟೈನ್ ಮುಗಿಸಿ ತಮ್ಮ ತಮ್ಮ ಕುಟುಂಬಸ್ಥರನ್ನು ಸೇರಿಕೊಳ್ಳುತ್ತಿದ್ದಾರೆ.

ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ಆಟಗಾರ ಈಗ ಕಾರ್ಪೆಂಟರ್!ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ಆಟಗಾರ ಈಗ ಕಾರ್ಪೆಂಟರ್!

ಐಪಿಎಲ್ 14ನೇ ಆವೃತ್ತಿ ಮುಂದೂಡಿದ ಬಳಿಕ ಆಸ್ಟ್ರೇಲಿಯಾ ಆಟಗಾರರು ಸ್ವದೇಶಕ್ಕೆ ತೆರಳಲು ಪರದಾಡಿದ್ದರು. ಭಾರತದಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಿದ್ದರಿಂದ ಭಾರತದಿಂದ ಬರುವ ಪ್ರಯಾಣಿಕರಿಗೆ ಆಸ್ಟ್ರೇಲಿಯಾ ದೇಶ ನಿರ್ಬಂಧ ಹೇರಿತ್ತು. ಹೀಗಾಗಿ ಐಪಿಎಲ್ ಮುಂದೂಡಿಕೆ ಬಳಿಕ ಆಸೀಸ್ ಆಟಗಾರರು ಮಾಲ್ಡೀವ್ಸ್‌ಗೆ ತೆರಳಿ ಅಲ್ಲಿಂದ ಮತ್ತೆ ಆಸ್ಟ್ರೇಲಿಯಾಕ್ಕೆ ಬಂದಿದ್ದರು. ಇಷ್ಟರಲ್ಲಾಗಲೇ ಕಾಂಗರೂ ದೇಶದ ಆಟಗಾರರು ಭಾರತದಲ್ಲಿ, ಮಾಲ್ಡೀವ್ಸ್‌ನಲ್ಲಿ ಮತ್ತು ಆಸ್ಟ್ರೇಲಿಯಾಕ್ಕೆ ವಾಪಸ್ ಬಂದ ಮೇಲೂ ಸಾಲು ಸಾಲು ಕ್ವಾರಂಟೈನ್ ಅನುಭವಿಸಿ ಸುಸ್ತಾಗಿದ್ದರು.

WTC Final: ಆ ಆಟಗಾರ ತಂಡದಲ್ಲಿ ಇಲ್ಲದಿರುವುದು ಭಾರತಕ್ಕೆ ಸಮಸ್ಯೆಯಾಗಬಹುದು ಎಂದ ಮಾಜಿ ಕ್ರಿಕೆಟಿಗWTC Final: ಆ ಆಟಗಾರ ತಂಡದಲ್ಲಿ ಇಲ್ಲದಿರುವುದು ಭಾರತಕ್ಕೆ ಸಮಸ್ಯೆಯಾಗಬಹುದು ಎಂದ ಮಾಜಿ ಕ್ರಿಕೆಟಿಗ

ಸಿಡ್ನಿ ಹೋಟೆಲ್‌ನಲ್ಲಿ 14 ದಿನಗಳ ಕ್ವಾರಂಟೈನ್ ಮುಗಿಸಿ ಪ್ಯಾಟ್ ಕಮಿನ್ಸ್ ತನ್ನ ಜೊತೆಗಾತಿಯನ್ನು ಸೇರಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೋಟೆಲ್‌ನಿಂದ ಬಂದ ಕಮಿನ್ಸ್ ಅವರನ್ನು ಅವರ ಗರ್ಭಿಣಿ ಪತ್ನಿ ಬೆಕಿ ಗಟ್ಟಿಯಾಗಿ ಅಪ್ಪುತ್ತಿರುವ ವಿಡಿಯೋ ಮನಕೆ ತಾಗುವಂತಿದೆ.

ಐಪಿಎಲ್ 14ನೇ ಆವೃತ್ತಿಯ ಪಂದ್ಯಗಳು ಅರ್ಧದಷ್ಟು ಪಂದ್ಯಗಳು ಮುಗಿದಿದ್ದಾಗ ಬಯೋ ಬಬಲ್ ಒಳಗೆ ಕೋವಿಡ್-19 ಸೋಂಕಿನ ಪ್ರಕರಣಗಳು ಕಾಣಿಸಿಕೊಂಡವು. ಕೋಲ್ಕತ್ತಾ ನೈಟ್ ರೈಡರ್ಸ್ ನ ವರುಣ್ ಚಕ್ರವರ್ತಿ, ಸಂದೀಪ್ ವಾರಿಯರ್, ಸನ್ ರೈಸರ್ಸ್ ಹೈದರಾಬಾದ್‌ನ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನ ಅಮಿತ್ ಮಿಶ್ರಾ, ಚೆನ್ನೈ ಸೂಪರ್ ಕಿಂಗ್ಸ್‌ನ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಐಪಿಎಲ್ ನಿಲುಗಡೆಯಾದಾಗ ಕಮಿನ್ಸ್‌ಗೂ ಕೋವಿಡ್ ಸೋಂಕು ತಗುಲಿತ್ತು.

Story first published: Tuesday, June 1, 2021, 9:50 [IST]
Other articles published on Jun 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X