ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಚೊಚ್ಚಲ ನಾಯಕತ್ವದಲ್ಲೇ ದಾಖಲೆ ಬರೆದ ಪ್ಯಾಟ್‌ ಕಮಿನ್ಸ್‌: ಗಬ್ಬಾ ಟೆಸ್ಟ್‌ನ ಮೊದಲ ದಿನದ ದಾಖಲೆಗಳು

Pat cummins
Ashes ಸರಣಿಯ ಮೊದಲನೇ ದಿನ ಮಳೆಯಲ್ಲಿ ಕೊಚ್ಚಿ ಹೋದ England | Oneindia Kannada

ಬ್ರಿಸ್ಬೇನ್‌ನ ಗಬ್ಬಾದಲ್ಲಿ ನಡೆದ ಪ್ರತಿಷ್ಠಿತ ಆ್ಯಷಸ್ ಟೆಸ್ಟ್ ಸರಣಿ ಮೊದಲ ದಿನದಾಟದಲ್ಲಿ ಕಾಂಗರೂಗಳ ದಾಳಿಗೆ ಇಂಗ್ಲೆಂಡ್ ನೆಲಕಚ್ಚಿದೆ. ಮೂರನೇ ಸೆಷನ್ ಮಳೆಯಿಂದಾಗಿ ಹಾಳಾದರೂ ಸಹ ಇಂಗ್ಲೆಂಡ್ ಟೀಂ ಕೇವಲ 147 ರನ್‌ಗಳಿಗೆ ಆಲೌಟ್ ಆಗಿದೆ.

ಆಸ್ಟ್ರೇಲಿಯಾದ ಸ್ಟಾರ್ ಬೌಲರ್ ಮಿಚೆಲ್ ಸ್ಟಾರ್ಕ್ ಮೊದಲ ಎಸೆತದಲ್ಲೇ ಯಾರ್ಕರ್ ಮೂಲಕ ಇಂಗ್ಲೆಂಡ್ ಓಪನರ್ ರೋರಿ ಬರ್ನ್ಸ್‌ರನ್ನ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅದ್ಭುತ ಆರಂಭ ನೀಡಿದ್ರು. ಈ ಮೂಲಕ ಪ್ರಸ್ತುತ ವರ್ಷದಲ್ಲಿ ರೋರಿ ಬರ್ನ್ಸ್‌ ಆರನೇ ಬಾರಿಗೆ ಡಕ್‌ ಔಟ್ ಆಗಿದ್ದಾರೆ.

ಆಸೀಸ್ ಬೌಲಿಂಗ್ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳಲ್ಲಿ ಒಲ್ಲಿ ಪೋಪ್ ಮತ್ತು ಜಾಸ್ ಬಟ್ಲರ್ 35, 39 ರನ್‌ಗಳ ಕೊಡುಗೆ ಆಸೀಸ್ ದಾಳಿಯನ್ನ ತಡೆದು ನಿಲ್ಲಿಸುವಲ್ಲಿ ವಿಫಲಗೊಂಡಿತು.

ಆಸ್ಟ್ರೇಲಿಯಾ ಪರ ಚೊಚ್ಚಲ ನಾಯಕತ್ವದಲ್ಲೇ ಆಲ್‌ರೌಂಡರ್ ಪ್ಯಾಟ್‌ ಕಮಿನ್ಸ್ ಐದು ವಿಕೆಟ್‌ಗಳ ಗೊಂಚಲನ್ನ ಪಡೆದರು. ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಈ ಸಾಧನೆ ಮಾಡಿದ ಒಟ್ಟಾರೆ 10ನೇ ನಾಯಕನಾಗಿದ್ದು , ಆಸ್ಟ್ರೇಲಿಯಾ ಪರ 5ನೇ ನಾಯಕನಾಗಿ ಈ ಸಾಧನೆ ಮಾಡಿದ್ದಾರೆ.

ಆಶಸ್ ಟೆಸ್ಟ್: ಗಾಬಾಗೆ ಬೆದರಿದ ಇಂಗ್ಲೆಂಡ್ ದಾಂಡಿಗರು 147ಕ್ಕೆ ಆಲೌಟ್: ಆಸಿಸ್ ಬೌಲರ್‌ಗಳ ಅಬ್ಬರಆಶಸ್ ಟೆಸ್ಟ್: ಗಾಬಾಗೆ ಬೆದರಿದ ಇಂಗ್ಲೆಂಡ್ ದಾಂಡಿಗರು 147ಕ್ಕೆ ಆಲೌಟ್: ಆಸಿಸ್ ಬೌಲರ್‌ಗಳ ಅಬ್ಬರ

ನಾಯಕ ಪ್ಯಾಟ್‌ ಕಮಿನ್ಸ್ ಚೆಂಡಿನೊಂದಿಗೆ ಮಿಂಚಿನ ದಾಳಿಯು ಕಾಂಗರೂ ಪಡೆಯನ್ನ ಸದ್ಯ ಸಂತಸದ ಕಡಲಲ್ಲಿ ತೇಲಿಸಿದೆ. ಆದ್ರೆ ಪಂದ್ಯದ ಸಂಪೂರ್ಣ ಹಿಡಿತ ತೆಗೆದುಕೊಳ್ಳುವ ಮೊದಲು ಗಬ್ಬಾದಲ್ಲಿ ಆಸೀಸ್ ಬಿಗ್‌ ಸ್ಕೋರ್ ದಾಖಲಿಸಬೇಕು. ಅತ್ತ ಇಂಗ್ಲೆಂಡ್ ಪರ ಸ್ಟುವರ್ಟ್ ಬ್ರಾಡ್ ನೇತೃತ್ವದಲ್ಲಿ ಮಾರ್ಕ್ ವುಡ್, ಜ್ಯಾಕ್‌ ಲೀಚ್ ಯಾವ ರೀತಿಯಲ್ಲಿ ವಿಕೆಟ್ ಪಡೆಯಲಿದ್ದಾರೆ ಎಂಬುದನ್ನ ಕಾದುನೋಡಬೇಕು.

ಮೊದಲ ಟೆಸ್ಟ್‌ ಪಂದ್ಯದ ಮೊದಲ ದಿನದಾಟದಲ್ಲಿ ಕಂಡುಬಂದ ದಾಖಲೆಗಳು

* ಪ್ಯಾಟ್ ಕಮಿನ್ಸ್ ನಾಯಕನಾಗಿ ಆ್ಯಶಸ್ ಟೆಸ್ಟ್‌ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಹತ್ತನೇ ಆಟಗಾರ.

* ಪ್ಯಾಟ್ ಕಮಿನ್ಸ್ ನಾಯಕನಾಗಿ ಆ್ಯಶಸ್ ಟೆಸ್ಟ್‌ವೊಂದರ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಗಳಿಸಿದ ಐದನೇ ಆಸ್ಟ್ರೇಲಿಯಾದ ಆಟಗಾರ.

* 2021 ರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ರೋರಿ ಬರ್ನ್ಸ್‌ಗೆ ಆರನೇ ಶೂನ್ಯಕ್ಕೆ ಔಟಾಗಿದ್ದಾರೆ. ಏಳು ಡಕ್‌ಗಳೊಂದಿಗೆ ಭಾರತದ ಜಸ್ಪ್ರೀತ್ ಬುಮ್ರಾ ಮಾತ್ರ ಅವರ ಮುಂದಿದ್ದಾರೆ.

* ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಪ್ಯಾಟ್ ಕಮ್ಮಿನ್ಸ್ ಅವರ ಅತ್ಯುತ್ತಮ ಬೌಲಿಂಗ್ (5/38) ಇದಾಗಿದೆ.

*ಇಂಗ್ಲೆಂಡ್ ವಿರುದ್ಧ ಪ್ಯಾಟ್ ಕಮ್ಮಿನ್ಸ್ 57 ವಿಕೆಟ್‌ಗಳನ್ನು ಪಡೆದಿದ್ದಾರೆ, ಇದು ಯಾವುದೇ ಎದುರಾಳಿ ತಂಡದ ವಿರುದ್ಧ ಅವರ ಗರಿಷ್ಠ ವಿಕೆಟ್ ಆಗಿದೆ.

*2000 ರಿಂದ ಆಸ್ಟ್ರೇಲಿಯಾದಲ್ಲಿ ನಡೆದ ಆಶಸ್‌ನಲ್ಲಿ ಇಂಗ್ಲೆಂಡ್ ತನ್ನ ಜಂಟಿ ಐದನೇ ಕಡಿಮೆ ಸ್ಕೋರ್ ಅನ್ನು ಮುಟ್ಟಿದೆ (147).

* ರೋರಿ ಬರ್ನ್ಸ್ ಈಗ ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ಬಾರಿ ಡಕ್‌ ಔಟ್ ಆದ ಓಪನರ್ ಎಂಬ ಕುಖ್ಯಾತಿ ಗಳಿಸಿದ್ದಾರೆ. ಭಾರತದ ಪಂಕಜ್ ರಾಯ್ ಮತ್ತು ಇಂಗ್ಲೆಂಡ್‌ನ ಮೈಕೆಲ್ ಅಥರ್ಟನ್ 1952 ಮತ್ತು 1998 ರಲ್ಲಿ ಕ್ರಮವಾಗಿ ತಲಾ ಐದು ಡಕ್‌ ಔಟ್ ಆಗಿದ್ದರು.

* ಇಂಗ್ಲೆಂಡ್ ತಂಡದಲ್ಲಿ ಈ ವರ್ಷ ಟೆಸ್ಟ್‌ನಲ್ಲಿ ಒಟ್ಟು 46 ಡಕ್‌ಔಟ್ ದಾಖಲಿಸಿದೆ. 34 ಡಕ್‌ಔಟ್‌ನೊಂದಿಗೆ ಭಾರತ ಎರಡನೇ ಸ್ಥಾನದಲ್ಲಿದೆ.

* ಪ್ಯಾಟ್ ಕಮ್ಮಿನ್ಸ್ ಈಗ ಬ್ರಿಸ್ಬೇನ್‌ನ ಗಬ್ಬಾದಲ್ಲಿ 30 ವಿಕೆಟ್‌ಗಳನ್ನು ಪಡೆದಿದ್ದಾರೆ. ಆಸ್ಟ್ರೇಲಿಯದ ಯಾವುದೇ ಮೈದಾನದಲ್ಲಿ ಅವರ ಗರಿಷ್ಠ ವಿಕೆಟ್ ಇದಾಗಿದೆ.

ಆಸ್ಟ್ರೇಲಿಯಾ ಆಡುವ ಬಳಗ: ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲ್ಯಾಬುಸ್ಚಾಗ್ನೆ, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮೆರಾನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ನಾಥನ್ ಲಿಯಾನ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಜಲ್‌ವುಡ್

ಬೆಂಚ್: ಉಸ್ಮಾನ್ ಖವಾಜಾ, ಝೈ ರಿಚರ್ಡ್ಸನ್, ಮೈಕೆಲ್ ನೆಸರ್, ಮಿಚೆಲ್ ಸ್ವೆಪ್ಸನ್

ಇಂಗ್ಲೆಂಡ್ ಆಡುವ ಬಳಗ: ಹಸೀಬ್ ಹಮೀದ್, ರೋರಿ ಬರ್ನ್ಸ್, ಡೇವಿಡ್ ಮಲನ್, ಜೋ ರೂಟ್ (ನಾಯಕ), ಬೆನ್ ಸ್ಟೋಕ್ಸ್, ಆಲಿ ಪೋಪ್, ಜೋಸ್ ಬಟ್ಲರ್ (ವಿಕೆಟ್ ಕೀಪರ್), ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಜ್ಯಾಕ್ ಲೀಚ್

ಬೆಂಚ್: ಜಾನಿ ಬೈರ್ಸ್ಟೋವ್, ಕ್ರೇಗ್ ಓವರ್ಟನ್, ಡೊಮಿನಿಕ್ ಬೆಸ್, ಡೇನಿಯಲ್ ಲಾರೆನ್ಸ್, ಝಾಕ್ ಕ್ರಾಲಿ, ಸ್ಟುವರ್ಟ್ ಬ್ರಾಡ್

Story first published: Wednesday, December 8, 2021, 17:21 [IST]
Other articles published on Dec 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X