ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ಮುಖಾಮುಖಿಯಾಗುತ್ತಾ ಭಾರತ, ಪಾಕಿಸ್ತಾನ?: ಚತುಷ್ಕೋನ ಟಿ20 ಸರಣಿಯ ಪ್ರಸ್ತಾಪ ಸಿದ್ಧ: ವರದಿ

PCB chairman to propose quadrangular T20 tourney of India, Pakistan, Eng and Aus: Report

ಭಾರತ ಹಾಗೂ ಪಾಕಿಸ್ತಾನ ನಡುವಿನ ದ್ವಿಪಕ್ಷೀಯ ಸರಣಿಗಳು ನಡೆಯದೆ ಬಹುತೇಕ ಒಂದು ದಶಕ ಸಮೀಪಿಸಿದೆ. ಈ ಎರಡು ದೇಶಗಳು ಈಗ ಐಸಿಸಿ ಟೂರ್ನಿಯಲ್ಲಿ ಮಾತ್ರವೇ ಮುಖಾಮುಖಿಯಾಗುತ್ತಿದೆ. ಎರಡು ದೇಶಗಳ ನಡುವಿನ ಸಂಬಂಧ ಹಳಸಿದ ಕಾರಣ ಭಾರತ ಪಾಕಿಸ್ತಾನ ಜೊತೆಗಿನ ಕ್ರಿಕೆಟ್ ಸಂಬಂಧವನ್ನು ಸಂಪೂರ್ಣವಾಗಿ ಕಡಿದುಕೊಂಡಿದೆ. ಈ ಅವಧಿಯಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅನೇಕ ಬಾರಿ ಭಾರತದೊಂದಿಗಿನ ಕ್ರಿಕೆಟ್ ಸಂಬಂಧವನ್ನು ಮುಂದುವರಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದರೂ ಭಾರತ ತನ್ನ ನಿಲುವನ್ನು ಬದಲಿಸಿಕೊಂಡಿಲ್ಲ. ಇದೀಗ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಮತ್ತೊಮ್ಮೆ ಅಂತಾ ಪ್ರಯತ್ನಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ.

ಆದರೆ ಈ ಬಾರಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದೊಂದಿಗೆ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸುವ ಬದಲಿಗೆ ಭಾರತ ಹಾಗೂ ಪಾಕಿಸ್ತಾನ ಒಳಗೊಂಡಂತೆ ಚತಿಷ್ಕೋನ ಸರಣಿಯ ಪ್ರಸ್ತಾಪವನ್ನು ಸಿದ್ಧಪಡಿಸಿದೆ ಎನ್ನಲಾಗಿದೆ. ಭಾರತ, ಪಾಕಿಸ್ತಾನದ ಜೊತೆಗೆ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಒಳಗೊಂಡ ಚತುಷ್ಕೋನ ಸರಣಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ರಮೀಜ್ ರಾಜಾ ಪ್ರಸ್ತಾವನೆಯನ್ನು ಸಿದ್ದಪಡಿಸಿದ್ದಾರೆ ಎನ್ನಲಾಗಿದೆ. ಮುಂದಿನ ಐಸಿಸಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಯುವ ಸಾಧ್ಯತೆಯಿದೆ.

ಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮಟೀಂ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್‌ಗೆ ಇಂದು ಹುಟ್ಟುಹಬ್ಬದ ಸಂಭ್ರಮ

ಆಸ್ಟ್ರೇಲಿಯಾ ಮೂಲದ ಕ್ರೀಡಾ ವೆಬ್‌ಸೈಟ್ ಕೋಡ್ ಸ್ಪೋರ್ಟ್ ಈ ಬಗ್ಗೆ ವರದಿಯನ್ನು ಮಾಡಿದ್ದು ನಾಲ್ಕು ದೇಶಗಳನ್ನು ಒಳಗೊಂಡ ಪ್ರಸ್ತಾವನೆಯನ್ನು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕನೂ ಆಗಿರುವ ರಮೀಜ್ ರಾಜಾ ಸಲ್ಲಿಸಲಿದ್ದಾರೆ ಎಂದಿದೆ.

ಭಾರತ ಹಾಗೂ ಪಾಕಿಸ್ತಾನ ತಂಡಗಳು ಬದ್ಧ ಎದುರಾಳಿಗಳಾಗಿದ್ದು ಎರಡು ದೇಶಗಳ ನಡುವಿನ ರಾಜಕೀಯ ಕಾರಣಗಳಿಂದಾಗಿ ದ್ವಿಪಕ್ಷೀಯ ಸರಣಿ ಸ್ಥಗಿತವಾಗಿದೆ. 2012/13ರ ಅವಧಿಯಲ್ಲಿ ಈ ಎರಡು ದೇಶಗಳ ಮಧ್ಯೆ ಕೊನೇಯ ಬಾರಿಗೆ ದ್ವಿಪಕ್ಷೀಯ ಸರಣಿ ನಡೆದಿತ್ತು.

ಹೆಚ್ಚು ದಿನ ತಂಡದಲ್ಲಿ ಉಳಿಯಲು ಹೀಗೆ ಮಾಡು ಎಂದು ಧೋನಿ ಈ ಹಿಂದೆ ನೀಡಿದ್ದ ಸಲಹೆ ಬಿಚ್ಚಿಟ್ಟ ಕೊಹ್ಲಿ!ಹೆಚ್ಚು ದಿನ ತಂಡದಲ್ಲಿ ಉಳಿಯಲು ಹೀಗೆ ಮಾಡು ಎಂದು ಧೋನಿ ಈ ಹಿಂದೆ ನೀಡಿದ್ದ ಸಲಹೆ ಬಿಚ್ಚಿಟ್ಟ ಕೊಹ್ಲಿ!

ಪಾಕಿಸ್ತಾನಕ್ಕೆ ತೆರಳಲು ತಂಡಗಳ ಹಿಂದೇಟು: ಇನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಮೇಲಿಂದ ಮೇಲೆ ಆಘಾತನವನ್ನು ಅನುಭವಿಸಿತ್ತು. ಟಿ20 ವಿಶ್ವಕಪ್‌ನ ಆರಂಭಕ್ಕೂ ಮುನ್ನ ನ್ಯೂಜಿಲೆಂಡ್ ತಂಡ ಪಾಕಿಸ್ತಾನಕ್ಕೆ ತೆರಳಿ ಸೀಮಿತ ಓವರ್‌ಗಳ ಸರಣಿಯಲ್ಲಿ ಭಾಗಿಯಾಗಲು ಸಜ್ಜಾಗಿತ್ತು. ಆದರೆ ಕೊನೇಯ ಕ್ಷಣದಲ್ಲಿ ನ್ಯೂಜಿಲೆಂಡ್ ಮಂಡಳಿ ಸರಣಿಯಿಂದ ಹಿಂದಕ್ಕೆ ಸರಿಯುವ ನಿರ್ಧಾರವನ್ನು ತೆಗೆದುಕೊಂಡಿತ್ತು. ಹೀಗಾಗಿ ಪಾಕಿಸ್ತಾನ ಭಾರೀ ಮುಜುಗರವನ್ನು ಅನುಭವಿಸಿತು. ಇದರ ಬೆನ್ನಿಗೆ ಇಂಗ್ಲೆಂಡ್ ಮಂಡಳಿ ಕೂಡ ಆಟಗಾರರ ಹಿತದೃಷ್ಟಿಯನ್ನು ಮುಂದಿಟ್ಟುಕೊಂಡು ಪ್ರವಾಸದಿಂದ ಹಿಂದಕ್ಕೆ ಸರಿದಿತ್ತು. ಆದರೆ ಇತ್ತೀಚೆಗೆ ವೆಸ್ಟ್ ಇಂಡೀಸ್ ಪಾಕಿಸ್ತಾನಕ್ಕೆ ಪ್ರವಾಸವನ್ನು ಕೈಗೊಂಡಿತ್ತು.

ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಇನ್ನಿಂಗ್ಸ್ ಸೇರಿದಂತೆ 117ರನ್‌ಗಳ ಬೃಹತ್ ಗೆಲುವುಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಂಡ ನ್ಯೂಜಿಲೆಂಡ್: ಇನ್ನಿಂಗ್ಸ್ ಸೇರಿದಂತೆ 117ರನ್‌ಗಳ ಬೃಹತ್ ಗೆಲುವು

IPL ನಿಂದ‌ ಚೀನಾ ಕಂಪನಿ ವಿವೋ ಗೆ ಗೇಟ್ ಪಾಸ್:ಇನ್ಮುಂದೆ Tata IPL | Oneindia Kannada

1998ರ ಬಳಿಕ ಪಾಕ್‌ಗೆ ಪ್ರವಾಸ ಕೈಗೊಳ್ಳುತ್ತಾ ಆಸಿಸ್ ತಂಡ: ಇನ್ನು ಆಸ್ಟ್ರೇಲಿಯಾ ಕ್ರಿಕೆಟ್ ತಂಡ ಈ ವರ್ಷದ ಮಾರ್ಚ್ ತಿಂಗಳಿನಲ್ಲಿ ದ್ವಿಪಕ್ಷೀಯ ಸರಣಿಯನ್ನು ಆಡಲು ಪಾಕಿಸ್ತಾನಕ್ಕೆ ಪ್ರವಾಸಕೈಗೊಳ್ಳುವ ನಿರ್ಧಾರ ಮಾಡಿದೆ. ಮೂರು ಪಂದ್ಯಗಳ ಟೆಸ್ಟ್ ಸರಣಿ, ಮೂರು ಪಂದ್ಯಗಳ ಏಕದಿನ ಸರಣಿ ಹಾಗೂ ಒಂದು ಪಂದ್ಯದ ಟಿ20 ಸರಣಿಯನ್ನು ಆಯೋಜಿಸಲು ನಿರ್ಧರಿಸಲಾಗಿದೆ. ಈ ಸರಣಿಯಲ್ಲಿ ಭಾಗಿಯಾಗಲು ಆಸ್ಟ್ರೇಲಿಯಾ ಬದ್ಧವಾಗಿದೆ ಎಂಬ ಮಾಹಿತಿಗಳು ಕೂಡ ಲಭ್ಯವಾಗಿದೆ. ಈ ಸರಣಿಯ ಆಯೋಜನೆಯಾದರೆ 1998ರ ಬಳಿಕ ಆಸ್ಟ್ರೇಲಿಯಾ ತಂಡ ಪ್ರಥಮ ಬಾರಿಗೆ ಪಾಕಿಸ್ತಾನ ಪ್ರವಾಸವನ್ನು ಕೈಗೊಂಡಂತಾಗುತ್ತದೆ.

Story first published: Wednesday, January 12, 2022, 10:42 [IST]
Other articles published on Jan 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X