ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಟಿ20 ವಿಶ್ವಕಪ್ 2020' ರದ್ದಾದರೆ ತೊಂದರೆ: ಪಿಸಿಬಿ ಅಧ್ಯಕ್ಷ ಎಚ್ಚರಿಕೆ!

PCB chairman warns of financial fallout if T20 World Cup is cancelled

ಕರಾಚಿ, ಏಪ್ರಿಲ್ 15: ಕೊರೊನಾವೈರಸ್‌ ಸೋಂಕಿನ ಕಾರಣದಿಂದಾಗಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2020ರ ವಿಶ್ವಕಪ್ ಟೂರ್ನಿಯೇನಾದರೂ ರದ್ದಾದರೆ ಆರ್ಥಿಕ ಕುಸಿತದ ಸಾಧ್ಯತೆಯಿದೆ ಎಂದು ಪಾಕಿಸ್ತಾನ್ ಕ್ರಿಕೆಟ್ ಬೋರ್ಡ್‌ನ (ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮನಿ ಎಚ್ಚರಿಸಿದ್ದಾರೆ.

ಚಿಕ್ಕ ಹುಡುಗನೊಂದಿಗೆ ತಾಯಿಯ ಸಖ್ಯಕ್ಕೆ ಒಪ್ಪಿಗೆ ಸೂಚಿಸಿದ ನೇಮರ್!ಚಿಕ್ಕ ಹುಡುಗನೊಂದಿಗೆ ತಾಯಿಯ ಸಖ್ಯಕ್ಕೆ ಒಪ್ಪಿಗೆ ಸೂಚಿಸಿದ ನೇಮರ್!

2020ರ ಟಿ20 ವಿಶ್ವಕಪ್‌ ಟೂರ್ನಿ ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ 18ರಿಂದ ನವೆಂಬರ್ 15ರ ವರೆಗೆ ನಡೆಯಲಿದೆ. ಆದರೆ ಸದ್ಯ ಕೋವಿಡ್-19ನಿಂದಾಗಿ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಲಾಕ್‌ಡೌನ್ ವಿಧಿಸಲಾಗಿದೆ. ಹೀಗಾಗಿ ನಡೆಯಲ್ಲಿದ್ದ ಎಲ್ಲಾ ಕ್ರೀಡಾಸ್ಪರ್ಧೆಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟಿದೆ.

ಕೆ.ಎಲ್ ರಾಹುಲ್‌ ಕಮೆಂಟ್‌ಗೆ ವೈರಲ್ ಆಯ್ತು ಗೆಳತಿ ಅಥಿಯಾಳ ಪೋಸ್ಟ್!ಕೆ.ಎಲ್ ರಾಹುಲ್‌ ಕಮೆಂಟ್‌ಗೆ ವೈರಲ್ ಆಯ್ತು ಗೆಳತಿ ಅಥಿಯಾಳ ಪೋಸ್ಟ್!

'ಕೊರೊನಾವೈರಸ್‌ನಿಂದ ಟಿ20 ವಿಶ್ವಕಪ್‌ಗೆ ಅಡ್ಡಿಯಾದರೆ ಆಗ ಉಂಟಾಗುವ ಆರ್ಥಿಕ ಕುಸಿತ ತುಂಬಾ ದೊಡ್ಡ ಪ್ರಮಾಣದ್ದಾಗಿರಲಿದೆ. ನಮ್ಮನ್ನೂ ಸೇರಿಸಿ ಐಸಿಸಿ ಸದಸ್ಯ ಬೋರ್ಡ್‌ಗಳಿಗೆ ವಿತರಣೆಯಾಗಬೇಕಾಗಿದ್ದ ಆದಾಯಕ್ಕೆ ಕಡಿವಾಣ ಬೀರಲಿದೆ,' ಎಂದು ಮನಿ ಹೇಳಿರುವುದಾಗಿ ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.

ಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆಇಂಗ್ಲೆಂಡ್‌ನ ಈ ಸಹೋದರರಿಗೆ ಜೊತೆಯಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವಾಸೆ

ಎಹ್ಸಾನ್ ಮನಿ ಅವರು ಇಂಟರ್‌ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ನ (ಐಸಿಸಿ) ವಾಣಿಜ್ಯ ವ್ಯವಹಾರ ಸಮಿತಿಯ ಅಧ್ಯಕ್ಷರೂ ಆಗಿದ್ದಾರೆ. ಇದೇ ಕಾರಣಕ್ಕೆ ಮನಿ ಐಸಿಸಿ ತನ್ನ ಸದ್ಯರಿಗೆ ವಿತರಿಸುವ ಆದಾಯಕ್ಕೆ ತೊಂದರೆಯಾಗುವ ಬಗ್ಗೆ ಮಾತನಾಡಿದ್ದಾರೆ.

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಲೆಳೆದ ನೇಥನ್ ಲಿಯಾನ್ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕಾಲೆಳೆದ ನೇಥನ್ ಲಿಯಾನ್

ಕ್ಯಾಲೆಂಡರ್ ವರ್ಷದಲ್ಲಿ ಐಸಿಸಿ ಪಂದ್ಯಾವಳಿ ಇದೆಯೇ ಇಲ್ಲವೆ ಎಂಬುದನ್ನು ಪರಿಗಣನೆಗೆ ತೆಗೆದುಕೊಳ್ಳದೆ ಈ ಪಾವತಿಗಳನ್ನು ಐಸಿಸಿ ಮಾಡುತ್ತದೆ. ಜೂನ್ 2017 ರಲ್ಲಿ ಒಪ್ಪಿದ ಹಣಕಾಸು ಮಾದರಿಯಲ್ಲಿ ಐಸಿಸಿ ಸದ್ಯರಿಗೆ ಸಲ್ಲಬೇಕಾದ ಆದಾಯವನ್ನು ಲೆಕ್ಕಹಾಕಲಾಗುತ್ತದೆ. ಆದರೆ ಈ ಬಾರಿಯ ವಿಶ್ವಕಪ್ ನಡೆಯದಿದ್ದರೆ ಖಂಡಿತಾ ಸಮಸ್ಯೆಯಾಗಲಿದೆ ಎಂಬುದು ಎಹ್ಸಾನ್ ಕಳಕಳಿ.

Story first published: Wednesday, April 15, 2020, 17:07 [IST]
Other articles published on Apr 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X