ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೆಸ್ಟ್ ನಾಯಕತ್ವದಿಂದ ಸರ್ಫರಾಜ್ ಅಹ್ಮದ್ ಕಿಕ್‌ ಔಟ್‌ಗೆ ಪಾಕಿಸ್ತಾನ ನಿರ್ಧಾರ?!

PCB decides to remove Sarfaraz Ahmed as Test captain: Report

ಇಸ್ಲಮಾಬಾದ್, ಜುಲೈ 29: ಸರ್ಫರಾಜ್ ಅಹ್ಮದ್ ಅವರನ್ನು ಟೆಸ್ಟ್ ನಾಯಕತ್ವದಿಂದ ಕೆಳಗಿಳಿಸಲು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ ಎಂದು ವರದಿಯೊಂದಿ ಹೇಳಿದೆ. ತಂಡ ಐಸಿಸಿ ಟೆಸ್ಟ್ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ನಾಯಕತ್ವದಲ್ಲಿ ಬದಲಾವಣೆಯಾಗಲಿದೆ ಎಂದು ತಿಳಿದುಬಂದಿದೆ.

ಪುರುಷರನ್ನೆ ಮೀರಿಸಿ ಟಿ20ಐ ಚೊಚ್ಚಲ ವಿಶ್ವದಾಖಲೆ ಬರೆದ ಎಲ್ಲಿಸ್ ಪೆರ್ರಿ!ಪುರುಷರನ್ನೆ ಮೀರಿಸಿ ಟಿ20ಐ ಚೊಚ್ಚಲ ವಿಶ್ವದಾಖಲೆ ಬರೆದ ಎಲ್ಲಿಸ್ ಪೆರ್ರಿ!

ಜಿಯೋ ನ್ಯೂಸ್ ವರದಿ ಮಾಡಿರುವಂತೆ ಪಾಕಿಸ್ತಾನ ಟೆಸ್ಟ್ ತಂಡಕ್ಕೆ ಹೊಸ ನಾಯಕನನ್ನು ನೇಮಿಸಲು ಪಾಕ್ ಕ್ರಿಕೆಟ್ ಬೋರ್ಡ್ ನಿರ್ಧರಿಸಿದೆ. ಮುಂದಿನ ಶುಕ್ರವಾರ ಲಾಹೋರ್‌ನಲ್ಲಿ ನಡೆಯುವ ಪಿಸಿಬಿ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಯಾಗಲಿದೆ. ಟೆಸ್ಟ್ ನಾಯಕನಾಗಿ ಶಾನ್ ಮಸೂದ್ ನೇಮಿಸಲು ಪಿಸಿಬಿ ನಿರ್ಧರಿಸಿದೆ ಎನ್ನಲಾಗಿದೆ.

ಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಸ್ಥಾನಕ್ಕೆ ಸ್ಟಾರ್‌ ಕೋಚ್‌ ಅರ್ಜಿಟೀಮ್‌ ಇಂಡಿಯಾದ ಬ್ಯಾಟಿಂಗ್‌ ಕೋಚ್‌ ಸ್ಥಾನಕ್ಕೆ ಸ್ಟಾರ್‌ ಕೋಚ್‌ ಅರ್ಜಿ

ಪಾಕ್ ಕ್ರಿಕೆಟ್ ಬೋರ್ಡ್‌ನಲ್ಲಿರುವ ಎಲ್ಲರಿಗೂ ಮಸೂದ್ ಆರಿಸುವತ್ತ ಒಲವಿಲ್ಲ. ಆದರೆ ನಾಯಕನ ಬದಲಾವಣೆಯ ವಿಚಾರ ಪಿಸಿಬಿ ಯಲ್ಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಸರ್ಫರಾಜ್ ಅಹ್ಮದ್ ಕೂಡ ಇದಕ್ಕೆ ಪುರಾವೆ ಒದಗಿಸುವ ರೀತಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಎಂಎಸ್ ಧೋನಿಗೆ ಸೆಲ್ಯೂಟ್ ಹೊಡೆದ ವಿಂಡೀಸ್ ಕ್ರಿಕೆಟರ್ ಶೆಲ್ಡನ್ ಕಾಟ್ರೆಲ್!ಎಂಎಸ್ ಧೋನಿಗೆ ಸೆಲ್ಯೂಟ್ ಹೊಡೆದ ವಿಂಡೀಸ್ ಕ್ರಿಕೆಟರ್ ಶೆಲ್ಡನ್ ಕಾಟ್ರೆಲ್!

ಈ ತಿಂಗಳ ಆರಂಭದಲ್ಲಿ ಮಾತನಾಡಿದ್ದ ಸರ್ಫರಾಜ್, 'ಟೆಸ್ಟ್ ನಾಯಕತ್ವ ಬದಲಾವಣೆಯ ವಿಚಾರ ನಾನು ಹೇಳುತ್ತಿಲ್ಲ. ನಾನು ರಾಜೀನಾಮೆ ನೀಡಲು ನಿರಾಕರಿಸಿದ್ದೇನೆ. ಆದರೆ ಈ ಬಗ್ಗೆ ಪಿಸಿಬಿ ನಿರ್ಧರಿಸಲಿದೆ. ಒಂದಂತೂ ಖಂಡಿತವಾಗಿ ಹೇಳಬಲ್ಲೆ; ಏನೆಂದರೆ ಪಿಸಿಬಿ ಏನೇ ನಿರ್ಧಾರ ತೆಗೆದುಕೊಂಡರೂ ಅದು ತಂಡದ ಒಳಿಗಿಗಾಗಿ ಆಗಿರಲಿದೆ,' ಎಂದಿದ್ದರು.

Story first published: Monday, July 29, 2019, 17:49 [IST]
Other articles published on Jul 29, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X