ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಯೋತ್ಪಾದನಾ ಬೆದರಿಕೆ ಇದ್ದರೂ ಪಾಕಿಸ್ತಾನಕ್ಕೆ ಶ್ರೀಲಂಕಾ ಪ್ರವಾಸ!?

PCB hopeful Sri Lanka will turn up for limited over tour despite alleged terror threats

ಇಸ್ಲಮಾಬಾದ್, ಸೆಪ್ಟೆಂಬರ್ 14: ಶ್ರೀಲಂಕಾ ಕ್ರಿಕೆಟ್‌ ತಂಡ, ಪಾಕಿಸ್ತಾನದಲ್ಲಿ ಭಯೋತ್ಪಾದನಾ ದಾಳಿಯ ಬೆದರಿಕೆಯಿದ್ದರೂ ಪಾಕ್‌ಗೆ ಪ್ರವಾಸ ಕೈಗೊಳ್ಳಲಿದೆಯಾ? ಹೌದು ಅಂತ ವಿಶ್ವಾಸ ವ್ಯಕ್ತಪಡಿಸಿದ್ದಾರೆ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ (ಪಿಸಿಬಿ) ಅಧ್ಯಕ್ಷ ಎಹ್ಸಾನ್ ಮನಿ.

ವಿಶಿಷ್ಠ ದಾಖಲೆಗಾಗಿ ಸೆಣಸಾಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ!ವಿಶಿಷ್ಠ ದಾಖಲೆಗಾಗಿ ಸೆಣಸಾಡಲಿದ್ದಾರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ!

ಲಾಹೋರ್‌ನಲ್ಲಿ ನಡೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಹ್ಸಾನ್, ಪಾಕಿಸ್ತಾನಕ್ಕೆ ಶ್ರೀಲಂಕಾ ಪ್ರವಾಸ ಸರಣಿಯ ಬಗ್ಗೆ ತಮಗೆ ಸಕಾರಾತ್ಮಕ ನಂಬಿಕೆಯಿದೆ ಎಂದಿದ್ದಾರೆ. ಲಂಕಾ ಕ್ರಿಕೆಟ್‌ ತಂಡವನ್ನು ಪಾಕ್‌ಗೆ ಬರಮಾಡಿಕೊಳ್ಳುವ ಬಗ್ಗೆ ಚರ್ಚೆಯೂ ನಡೆಯುತ್ತಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಜಿಯೋ ಟಿವಿಯಲ್ಲಿ ಉಚಿತವಾಗಿ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ವೀಕ್ಷಿಸಿಜಿಯೋ ಟಿವಿಯಲ್ಲಿ ಉಚಿತವಾಗಿ ಭಾರತ-ದಕ್ಷಿಣ ಆಫ್ರಿಕಾ ಕ್ರಿಕೆಟ್ ಸರಣಿ ವೀಕ್ಷಿಸಿ

'ಈ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಶ್ರೀಲಂಕಾ ಕ್ರಿಕೆಟ್ ತಂಡದ ಕುರಿತು ನಕಾರಾತ್ಮಕ ಅಬಿಪ್ರಾಯವಿಲ್ಲ. ಇಲ್ಲಿಗೆ ಬರೋದಿಲ್ಲ ಎಂತ ಲಂಕಾ ಕ್ರಿಕೆಟಿಗರು ಹೇಳಿಲ್ಲ,' ಎಂದು ಎಹ್ಸಾನ್ ಮನಿ ಹೇಳಿದ್ದಾರೆ. ಪಾಕ್‌ ಪ್ರವಾಸ ಸರಣಿ ವೇಳೆ ಭಯೋತ್ಪಾದನ ದಾಳಿಯ ಭಯದಿಂದ ಲಂಕಾದ 10 ಪ್ರಮುಖ ಆಟಗಾರರು ಸರಣಿಯಿಂದ ಹಿಂದೆ ಸರಿಯುವ ನಿರ್ಧಾರ ತಾಳಿದ್ದರು.

ರಿಷಬ್ ಪಂತ್ ಮೈನಸ್ ಪಾಯಿಂಟ್ ಏನೆಂದು ಹೇಳಿದ ಲ್ಯಾನ್ಸ್ ಕ್ಲುಸೆನರ್ರಿಷಬ್ ಪಂತ್ ಮೈನಸ್ ಪಾಯಿಂಟ್ ಏನೆಂದು ಹೇಳಿದ ಲ್ಯಾನ್ಸ್ ಕ್ಲುಸೆನರ್

ಲಾಹೋರ್‌ನಲ್ಲಿನ ಟೆಸ್ಟ್ ಪಂದ್ಯವೊಂದಕ್ಕಾಗಿ 2009ರ ಮಾರ್ಚ್‌ನಲ್ಲಿ ಶ್ರೀಲಂಕಾ ತಂಡ ಪಾಕ್‌ಗೆ ತೆರಳಿದ್ದಾಗ ಲಂಕಾ ಆಟಗಾರರಿದ್ದ ಬಸ್‌ನ ಮೇಲೆ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಇದೇ ಮೊದಲ ಬಾರಿಗೆ ಶ್ರೀಲಂಕಾ ಕ್ರಿಕೆಟ್ ತಂಡ ಸಂಪೂರ್ಣ ಪ್ರವಾಸ ಸರಣಿಗಾಗಿ ಪಾಕ್‌ಗೆ ತೆರಳುವುದರಲ್ಲಿದೆ.

ಧೋನಿ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್ಧೋನಿ ನಿವೃತ್ತಿ ಬಗ್ಗೆ ತುಟಿ ಬಿಚ್ಚಿದ ಮುಖ್ಯ ಆಯ್ಕೆದಾರ ಎಂಎಸ್‌ಕೆ ಪ್ರಸಾದ್

ಶ್ರೀಲಂಕಾ ತಂಡದ ಪಾಕಿಸ್ತಾನ ಪ್ರವಾಸ ಸರಣಿ 3 ಪಂದ್ಯಗಳ ಏಕದಿನ, 3 ಪಂದ್ಯಗಳ ಟಿ20 ಸರಣಿಗಳನ್ನು ಒಳಗೊಂಡಿದೆ. ಸೆಪ್ಟೆಂಬರ್‌ 27ರಂದು ಕರಾಚಿಯಲ್ಲಿ ಏಕದಿನ ಪಂದ್ಯದ ಮೂಲಕ ಪ್ರವಾಸ ಪಂದ್ಯಗಳು ನಡೆಯುವುದರಲ್ಲಿದೆ. ಅಕ್ಟೋಬರ್ 9ರಂದು ಕೊನೇ ಟಿ20 ಪಂದ್ಯದ ಮೂಲಕ ಸರಣಿ ಕೊನೆಗೊಳ್ಳಲಿದೆ.

Story first published: Saturday, September 14, 2019, 1:05 [IST]
Other articles published on Sep 14, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X