ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್‌ ಮಾಜಿ ಕ್ರಿಕೆಟರ್ ಶೋಯೆಬ್ ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ

PCB legal advisor Rizvi files defamation case against Shoaib Akhtar

ಕರಾಚಿ, ಏಪ್ರಿಲ್ 29: ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶೋಯೇಬ್ ಅಖ್ತರ್ ಮತ್ತೆ ಸಮಸ್ಯೆಯಲ್ಲಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ (ಪಿಸಿಬಿ) ಕಾನೂನು ಸಲಹೆಗಾರ ತಫಝುಲ್ ರಿಝ್ವಿ ಅಖ್ತರ್ ವಿರುದ್ಧ ಕ್ರಿಮಿನಲ್ ಕೇಸ್ ಮತ್ತು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ.

'ಸೆಹ್ವಾಗ್‌ಗಿಂತ ಪ್ರತಿಭಾವಂತ ಆದರೆ ಆತನಷ್ಟು ಮೆದುಳಿಲ್ಲ': ಪಾಕ್ ಆಟಗಾರನ ಬಗ್ಗೆ ಅಖ್ತರ್ ಮಾತು'ಸೆಹ್ವಾಗ್‌ಗಿಂತ ಪ್ರತಿಭಾವಂತ ಆದರೆ ಆತನಷ್ಟು ಮೆದುಳಿಲ್ಲ': ಪಾಕ್ ಆಟಗಾರನ ಬಗ್ಗೆ ಅಖ್ತರ್ ಮಾತು

ತನ್ನ ಯೂಟ್ಯೂಬ್ ಚಾನೆಲ್ ಮೂಲಕ ಆಗಾಗ ಕಾಣಿಸಿಕೊಳ್ಳುವ ರಾವಲ್ಪಿಂಡಿ ಎಕ್ಸ್‌ಪ್ರೆಸ್ ಶೋಯೆಬ್ ಅಖ್ತರ್, ಪ್ರತೀಸಾರಿಯೂ ಏನಾದರೊಂದು ವಿಚಾರ ಮುಂದಿಟ್ಟು ಅಭಿಪ್ರಾಯ ಹಂಚಿಕೊಳ್ಳುತ್ತಿರುತ್ತಾರೆ. ಇದೇ ಯೂಟ್ಯೂಬ್ ಚಾನೆಲ್ ಮೂಲಕ ಅಖ್ತರ್ ಅಸಮಂಜಸ ಕಾಮೆಂಟ್‌ಗಳನ್ನು ಮಾಡಿದ್ದಾರೆಂದು ಆರೋಪಿಸಿರುವ ರಿಝ್ವಿ ದೂರು ದಾಖಲಿಸಿದ್ದಾರೆ.

ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್ಸಚಿನ್ ನಾಟೌಟ್ ತೀರ್ಪು ಈಗಲೂ ನನ್ನನ್ನು ಡಿಸ್ಟರ್ಬ್ ಮಾಡುತ್ತಿದೆ: ಅಜ್ಮಲ್

ಪಾಕ್‌ ಕ್ರಿಕೆಟ್‌ ಬೋರ್ಡ್‌ಗೆ ಕಾನೂನು ಸಲಹೆಗಾರರಾಗಿ ಕಾರ್ಯ ನಿರ್ವಹಿಸುತ್ತಿರುವ ರಿಝ್ವಿ, ತಾನು ಅಖ್ತರ್ ವಿರುದ್ಧ ಮಾನನಷ್ಟ ಮೊಕದ್ದಮೆ ಮತ್ತು ಕ್ರಿಮಿನಲ್ ದೂರು ದಾಖಲಿಸಿರುವುದಾಗಿ ಸ್ಪಷ್ಟವಾಗಿ ಹೇಳಿಕೊಂಡಿದ್ದಾರೆ. ಅಲ್ಲದೆ ಸೈಬರ್ ಕ್ರೈಮ್‌ನ ಅಡಿಯಲ್ಲಿ ಫೆಡರಲ್ ಇನ್ವೆಸ್ಟಿಗೇಶನ್ ಏಜೆನ್ಸಿಗೂ ದೂರು ನೀಡಿದ್ದಾರೆ.

ಯುಎಸ್‌ಎ ಕ್ರಿಕೆಟ್‌ ಟೀಮ್‌ನ ಮುಖ್ಯ ಕೋಚ್‌ ಆಗಿ ಕನ್ನಡಿಗ ನೇಮಕಯುಎಸ್‌ಎ ಕ್ರಿಕೆಟ್‌ ಟೀಮ್‌ನ ಮುಖ್ಯ ಕೋಚ್‌ ಆಗಿ ಕನ್ನಡಿಗ ನೇಮಕ

ಉಮರ್ ಅಕ್ಮಲ್‌ಗೆ 3 ವರ್ಷಗಳ ನಿಷೇಧ ಹೇರಿರುವ ವಿವಾದಕ್ಕೆ ಸಂಬಂಧಿಸಿ ಅಖ್ತರ್ ವೀಡಿಯೋ ಮಾಡಿದ್ದರು. ಈ ವೀಡಿಯೋವನ್ನು ಪಾಕಿಸ್ತಾನ ಬಾರ್ ಕೌನ್ಸಿಲ್ ಅನ್ನು ಕೆರಳಿಸುವುದರೊಂದಿಗೆ ಕೊನೆಗೊಳಿಸಲಾಗಿತ್ತು. ಹೀಗಾಗಿ ಕಾನೂನಿಗೆ ಸಂಬಂಧಿಸಿದ ವಿಚಾರಗಳನ್ನು ಮಾತನಾಡುವಾಗ ಜಾಗರೂಕರಾಗಿರಿ ಎಂದು ಪಾಕಿಸ್ತಾನ ಬಾರ್ ಕೌನ್ಸಿಲ್ ಅಖ್ತರ್‌ಗೆ ಎಚ್ಚರಿಸಿತ್ತು.

Story first published: Wednesday, April 29, 2020, 22:34 [IST]
Other articles published on Apr 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X